ಮಂಗಳೂರು:  ಶಕ್ತಿ ವಿದ್ಯಾ ಸಂಸ್ಥೆಯ ರೇಷ್ಮ ಮೆಮೋರಿಯಲ್ ಸಭಾಂಗಣದಲ್ಲಿ ಶಕ್ತಿ ಪದವಿ ಪೂರ್ವಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಸಾಧನೆಗೈದ 22 ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವು ನೆರವೇರಿತು.

ಈ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಜಿಲ್ಲೆಯ ಪ್ರತಿಷ್ಠಿತಜ್ಞಾನ ಸುಧಾ ಕಾಲೇಜಿನ ಪ್ರಾಂಶುಪಾಲರಾದ ದಿನೇಶ್ ಎಂ ಕೊಡವೂರು ಅವರು ದೀಪವನ್ನು ಬೆಳಗಿಸಿ ಮಾತನಾಡಿದ ಅವರು ಶಕ್ತಿ ವಿದ್ಯಾ ಸಂಸ್ಥೆಯು ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡುತ್ತಿದೆ. ವಿದ್ಯಾರ್ಥಿಗಳು ಎಳೆಯ ವಯಸ್ಸಿನಲ್ಲೆ ಸಂಸ್ಕಾರವನ್ನು ಕಲಿಯಬೇಕು. ತಂದೆತಾಯಿಯರ ಕಷ್ಟಗಳನ್ನು ಮಕ್ಕಳಾದವರು ಅರಿತು ನಡೆದು ಜೀವನದಲ್ಲಿ ಸಾಧನೆ ಮಾಡುವ ಮೂಲಕ ತಂದೆತಾಯಿಯರು ಪಟ್ಟ ಶ್ರಮಕ್ಕೆಒಂದು ಸಾರ್ಥಕತೆಯನ್ನು ತಂದು ಕೊಡಬೇಕು. ಶಿಕ್ಷಕರು ವಿದ್ಯಾರ್ಥಿಗಳನ್ನು ತಿದ್ದಲು ಹೇಳುವ ಮಾತುಗಳನ್ನು ವಿದ್ಯಾರ್ಥಿಗಳು ಧನಾತ್ಮಕವಾಗಿ ಸ್ವೀಕರಿಸಬೇಕು. ಕೇವಲ ಒಂದೇ ಒಂದು ಕ್ಷೇತ್ರಕ್ಕಾಗಿ ಪ್ರಯತ್ನ ಪಡದೆ ಸಮಾಜದ ವಿವಿಧ ಅಗತ್ಯತೆಗಳಿಗಾಗಿ ವಿದ್ಯಾರ್ಥಿಗಳು ತಮ್ಮನ್ನು ತೆರೆದುಕೊಳ್ಳಬೇಕು. ಕೇವಲ ಅಂಕಗಳಿಸುವುದೊಂದೇ ಸಾಧನೆಯಾಗದೆ ಸಮಾಜದ ಶ್ರೇಷ್ಠ ವ್ಯಕ್ತಿಯಾಗುವಕಡೆ ನಾವೆಲ್ಲ ಕ್ರೀಯಾಶೀಲರಾಗಬೇಕು ಎಂದು ಹೇಳುತ್ತ ಸಾಧಕರಿಗೆ ಅಭಿನಂದನೆಗಳನ್ನು ತಿಳಿಸಿದರು. 

ಈ ಕಾರ್ಯಕ್ರಮದಲ್ಲಿ ಮತ್ತೊರ್ವ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಅರುಣ್ ಶಹಾಪುರ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಾತನಾಡಿ ವಿದ್ಯಾರ್ಥಿಗಳ ಸಾಧನೆ ಕೇವಲ ಅಂಕಗಳಿಸುವುದೊಂದೆ ಅಲ್ಲ, ಜೀವನದುದ್ದಕ್ಕೂ ಸಾಕಷ್ಟು ಸಾಧನೆ ಮಾಡುವುದಿದೆ. ಈ ಜಗತ್ತು ವಿಶಾಲವಾಗಿದೆ. ಈ ಜಗತ್ತನ್ನು ಮುಷ್ಠಿಯಲ್ಲಿ ಹಿಡಿಯುವ ಸಾಮಥ್ರ್ಯ ನಮ್ಮ ಯುವಕರ ಕೈಯಲ್ಲಿದೆ.

ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಸಿಗುವ ಶಿಕ್ಷಣ ಮತ್ತು ಸಂಸ್ಕಾರ ಇವೆಲ್ಲವನ್ನು ನಮ್ಮ ಜೀವನದುದ್ದಕ್ಕೂ ಅಳವಡಿಸಿಕೊಳ್ಳಿ. ಅಂಕಗಳು ವಿದ್ಯಾರ್ಥಿಗಳ ಬುದ್ಧಿವಂತಿಕೆ ಅಳೆಯುವ ಮಾನದಂಡ ಅಷ್ಟೆ. ಅಧೇ ಭವಿಷ್ಯ ಆಗಬಾರದು ಎಂದು ಹೇಳುತ್ತ ಉತ್ತಮ ಅಂಕ ಪಡೆದು ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.

ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ  ರಮೇಶ ಕೆ. ಮಾತನಾಡಿ ಶಕ್ತಿ ವಿದ್ಯಾ ಸಂಸ್ಥೆಯು ಕಳೆದ 6 ವರ್ಷಗಳಿಂದ ಉನ್ನತ ಸಾಧನೆಯನ್ನು ಮಾಡುತ್ತ ಬಂದಿದೆ. ವಿಜ್ಞಾನ ವಿಭಾಗದಲ್ಲಿ 100% ಫಲಿತಾಂಶ ದಾಖಲಾದದ್ದು ನಮಗೆಲ್ಲ ಸಂತಸದ ವಿಷಯವಾಗಿದೆ. ಮತ್ತು ಈ ಫಲಿತಾಂಶದ ಹಿಂದೆ ಹಗಲಿರುಳೆನ್ನದೆ ಶ್ರಮ ವಹಿಸಿ ಸೇವೆ ಮಾಡಿದ ಎಲ್ಲಾ ಶಿಕ್ಷಕರ ಹಾಗೂ ಬೆಂಬಲವನಿತ್ತು ಸಹಕರಿಸಿದ ಪೋಷಕರ ಪಾತ್ರವು ಮಹತ್ತರವಾಗಿದೆ. ಈ ಸಾಧನೆ ಇಲ್ಲಿಗೆ ನಿಲ್ಲದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮವಾದ ಫಲಿತಾಂಶಗಳು ನಮ್ಮ ಸಂಸ್ಥೆಗೆ ಬರುವಂತಾಗಲಿ. ವಿದ್ಯಾರ್ಥಿಗಳ ಕನಸು ಈಡೇರಿಸಲು ನಮ್ಮ ಆಡಳಿತ ಮಂಡಳಿಯು ಸಕಲ ರೀತಿಯ ಸೌಲಭ್ಯಗಳನ್ನು ಒದಗಿಸುತ್ತದೆ ಎಂಬ ವಿಶ್ವಾಸವನ್ನು ನೀಡುತ್ತ ವಿದ್ಯಾರ್ಥಿಗಳಿಗೂ, ಪೋಷಕರಿಗೂ ಮತ್ತು ಉಪನ್ಯಾಸಕ ವೃಂದದವರಿಗೆ ಅಭಿನಂದನೆ ಸಲ್ಲಿಸಿದರು. 

ಈ ಸಮಾರಂಭದ ಅಧ್ಯಕ್ಷತೆ ವಹಿಸಿದ ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರು ಹಾಗೂ ಆಡಳಿತಾಧಿಕಾರಗಳೂ ಆದಡಾ. ಕೆ.ಸಿ ನಾೈಕ್ ಮಾತನಾಡಿ ನಮ್ಮ ಶಕ್ತಿ ವಿದ್ಯಾ ಸಂಸ್ಥೆಯು ಉತ್ತಮವಾದ ಫಲಿತಾಂಶವನ್ನು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಡೆದಿದೆ. ಇದಿನ್ನೂ ಆರಂಭ ಇನ್ನು ಮುಂದಕ್ಕೆ ಸಾಕಷ್ಟು ಉತ್ತಮವಾದ ಫಲಿತಾಂಶ ನಮ್ಮ ವಿದ್ಯಾರ್ಥಿಗಳಿಂದ ಬರುವ ನಿರೀಕ್ಷೆಯಲ್ಲಿದ್ದೇವೆ. ಈ ಬಾರಿ ಉತ್ತಮ ಸಾಧನೆ ಮಾಡಿ ಶಕ್ತಿ ವಿದ್ಯಾ ಸಂಸ್ಥೆಯ  ಗೌರವವನ್ನು ಹೆಚ್ಚಿಸಿದಂತಹ ಎಲ್ಲಾ ವಿದ್ಯಾರ್ಥಿಗಳಿಗೂ ಆ ದೇವರು ಒಳ್ಳೆಯದನ್ನು ಮಾಡಲಿ ಎಂದು ಶುಭ ಹಾರೈಸಿದರು. 

ನಂತರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 95% ಕ್ಕಿಂತ ಅಧಿಕ ಅಂಕ ಪಡೆದು ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅತಿಥಿ ಗಣ್ಯರು ಸೇರಿ ಸನ್ಮಾನವನ್ನು ಮಾಡಿದರು. 

ವಾಣಿಜ್ಯ ವಿಭಾಗದ ಅರ್ಚನ ಎನ್ ಕೆ ರಾಜ್ಯಕ್ಕೆ 5ನೇ ರ್ಯಾಂಕ್ ಹಾಗೂ ವಿಜ್ಞಾನ ವಿಭಾಗದ ರೋಹಿತ್‍ ಕಲ್ಲುರಾಯ ರಾಜ್ಯಕ್ಕೆ 10ನೇ ರ್ಯಾಂಕ್ ಪಡೆದವರಿಗೆ ಸನ್ಮಾನ ಮಾಡಲಾಯಿತು ಹಾಗೂ 95% ಅಧಿಕ ಅಂಕ ಪಡೆದ ನಿಹಾರಿಕ ಕೆ. ಅರ್, ಮೌನ ಜಿ, ದೇವಿಕಾ ಸಿ. ಪೈ, ಪ್ರತೀಕ್ಷಾ ಬಿ.ಪಿ, ಕಾವ್ಯ ಡಿ. ಮಾರ್ಲ, ಸ್ವಪ್ನ, ಕಾರ್ತಿಕ್ ಹೆಚ್‍ಎಸ್, ಮಿಥಾಲಿ ಆರ್‍ ಅಮೀನ್, ಎನ್ ಹಿತೇಶ್‍ಕುಮಾರ್, ಪ್ರಥಮೇಶ್ ಶೆಣೈಕುಡ್ಪಿ, ವಂಶಿ ಹೆಚ್. ಆರ್, ಅನುರಾಗ್‍ ಆರ್ ನಾೈಕ್, ಪ್ರಾಣೇಶ್  ವಿನಯ್‍ಕುಮಾರ್, ಆರ್‍ ಅಮೃತ, ಜಯಂಕೃತ್ ಬಡಿಗರ್, ಸಂಜನಾರಾವ್, ಡಿ ರೋಶನ್‍ ಗೌಡ, ಎನ್‍ಜೆ ಸಿಂಚನ, ಅಂಜು ಎಸ್, ಸೃಷ್ಠಿ ಅವರಿಗೆ ಸನ್ಮಾನಿಸಲಾಯಿತು. ಶಕ್ತಿ ಆಡಳಿತ ಮಂಡಳಿಯು ವಿದ್ಯಾರ್ಥಿಗಳ ಹೆತ್ತವರನ್ನು ಕೂಡಾ ವೇದಿಕೆಗೆ ಆಮಂತ್ರಿಸಿ ಗೌರವಿಸಿ ಅಭಿನಂದನೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಈ ಸನ್ಮಾನ ಸಮಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ.ಸಿ ನಾೈಕ್, ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ ಕೆ. ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ ಹೆಚ್, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್, ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕನ್ನಡ ಉಪನ್ಯಾಸಕರಾದ ಸುನಿಲ್ ಪಲ್ಲಮಜಲು ಕಾರ್ಯಕ್ರಮವನ್ನು ನಿರೂಪಿಸಿದರು. ಗಣಿತ ಉಪನ್ಯಾಸಕ ಪ್ರಶಾಂತ್‍ ಕುಮಾರ್ ಸ್ವಾಗತಿಸಿ, ಗಣಕ ವಿಜ್ಞಾನ ಉಪನ್ಯಾಸಕ ಸೂರ್ಯ ನಾರಯಣ ಭಟ್ ವಂದಿಸಿದರು.