ಮಂಗಳೂರು: “ಪ್ರತಿಯೊಬ್ಬರಿಂದಲೂ ಕಲಿಯಬೇಕು. ಉತ್ತಮ ಮೌಲ್ಯ ಮತ್ತು ನೀತಿಗಳು ಒಳ್ಳೆಯ ಗುಣನಡತೆಗೆದಾರಿ ಮಾಡಿಕೊಡುತ್ತದೆ. ಲೂಡ್ರ್ಸ್ ಸೆಂಟ್ರಲ್ ಶಾಲೆಯು ಸರ್ವರಿಗೂ ಉತ್ತಮ ಮೌಲ್ಯವನ್ನು ಕಲಿಸಿದೆ. ಉತ್ತಮ ಅನುಭವವನ್ನು ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತದೆ. ನಮ್ಮ ಸಾಧನೆಗಳ ಮೂಲಕ ಗುರಿಯನ್ನು ತಲುಪಿ, ಹೆತ್ತವರು ಹಾಗೂ ಶಾಲೆಯ ಕೀರ್ತಿಯನ್ನು ಎತ್ತರಕ್ಕೆ ಬೆಳೆಸಬೇಕು. ಆ ಮೂಲಕ ನಮ್ಮ ವ್ಯಕ್ತಿತ್ವವನ್ನು ಸಮಾಜಕ್ಕೆ ತೋರಿಸಬೇಕು” ಎಂದು ವಿದ್ಯಾರ್ಥಿ ನಾಯಕ ಅರ್ಜುನ್ ಕುಮಾರ್ ಹೇಳಿದರು.
ಅವರು ಲೂಡ್ರ್ಸ್ ಸೆಂಟ್ರಲ್ ಸ್ಕೂಲ್‍ನಲ್ಲಿ ಆಯೋಜಿಸಿದ ಮಕ್ಕಳ ದಿನಾಚರಣೆ ‘ರಿಗೇಲ್–2023’ರ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷರಾದ ನಾಯಕಿ ಪ್ರಜ್ಞಾ ಕೆ.ಪಿ.“ಪ್ರತಿಯೊಂದು ಮಗುವಿನಲ್ಲೂ ವೈವಿಧ್ಯತೆಯಿದೆ. ಪ್ರತಿಯೊಬ್ಬರೂ ವಿಶೇಷವಾದ ಕೌಶಲ್ಯದಿಂದ ಜನಿಸಿರುತ್ತಾರೆ. ನಾವು ಎದುರಾಗುವ ಅಡೆತಡೆಗಳನ್ನು ಬದಿಗೆ ಸರಿಸಿ ನದಿಯಂತೆ ಮುಂದೆ ಸಾಗಬೇಕು. ಬದುಕೆಂಬ ಬಂಡಿಯನ್ನು ಯಶಸ್ವಿಯಾಗಿ ಮುನ್ನಡೆಸಿ, ಇತರರಿಗೆ ಮಾದರಿಯಾಗಿ ಆದರ್ಶಜೀವನ ಸಾಗಿಸಿ ನಾಗರಿಕ ಸಮಾಜದಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಿ ಬಾಳಬೇಕು” ಎಂದು ಕರೆ ನೀಡಿದರು.
ಶಾಲೆಯ ಪ್ರಾಂಶುಪಾಲರಾದ ವ0|ಫಾ| ರಾಬರ್ಟ್ ಡಿ’ಸೋಜರವರು“ ಈ ಕಾರ್ಯಕ್ರಮ ಯಶಸ್ವಿಯಾಗಲು ಸರ್ವರ ಸಹಕಾರ ಮತ್ತು ದೇವರ ಆಶೀರ್ವಾದ ಅತ್ಯಗತ್ಯ. ನಮ್ಮ ಸಂಸಾರವು ಭಗವ0ತನ ಅನುಗ್ರಹದಿಂದ ಉತ್ತಮವಾಗಿ ಆದರ್ಶ ಸಮಾಜವಾಗಿ, ಭವ್ಯ ಭಾರತವಾಗಿ ಬೆಳೆಯಬೇಕು. ಮೌಲ್ಯಾಧಾರಿತ ವ್ಯಕ್ತಿತ್ವದ ಮೂಲಕ ಪ್ರತಿಯೊಬ್ಬರ ಬದುಕನ್ನು ಹಸನುಗೊಳಿಸಲಿ” ಎಂದು ಶುಭ ಹಾರೈಸಿದರು.
ಉಪಪ್ರಾಂಶುಪಾಲೆ ಬೆಲಿಟಾ ಮಸ್ಕರೇನ್ಹಸ್ ಎಲ್ಲರನ್ನೂ ಸ್ವಾಗತಿಸಿ, ಅನಿತಾ ಥೋಮಸ್ ರಜತ ಮಹೋತ್ಸವದ ಅಂಗವಾಗಿ 25 ವಿದ್ಯಾರ್ಥಿಗಳ ಹೆಸರನ್ನು ವಾಚಿಸಿದರು.
ವೇದಿಕೆಯಲ್ಲಿ ವ0|ಫಾ|ಲೆಸ್ಟನ್ ಲೋಬೊ, ವ0|ಫಾ| ಅರುಲ್, ಬಿಜೈ ಪ್ಯಾರಿಸ್ ಪರಿಷದ್‍ನ ಕಾರ್ಯದರ್ಶಿ ಅವಿತಾ ಪಿಂಟೋ ಉಪಸ್ಥಿತರಿದ್ದರು. ವೇದಿಕೆಯಲ್ಲಿರುವ ಗಣ್ಯರು ಮಕ್ಕಳ ದಿನಾಚರಣೆಯ ಪ್ರಯುಕ್ತ ನೆಹರೂರವರ ಭಾವಚಿತ್ರಕ್ಕೆ ಹೂಹಾರ ಹಾಕಿ ಗೌರವಿಸಿದರು. ಪ್ರಾನ್ಸಿಸ್ಕಾ ಡಿ’ಸೋಜ ಮಕ್ಕಳ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನೆಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಂಗಳೂರು ನಗರದ ಗೋಲ್ಡ್ ಫಿಂಚ್ ಉಪಹಾರ ಗೃಹದಿಂದ ವಿವಿಧ ಭಕ್ಷ್ಯಗಳನ್ನು ಆಯೋಜಿಸಲಾಗಿತ್ತು.
ಸೀಮಾ ಲೋಬೊ, ಲಿನೆಟ್ ಪಿರೇರಾ, ನಿಶ್ಮಿತಾ ಪಿಂಟೋ ಮತ್ತು ಜೆನಿಫೆರ್ ಮಿನೇಜಸ್ ಕಾರ್ಯಕ್ರಮವನ್ನು ನಿರೂಪಿಸಿದರು.
ಶಿಕ್ಷಕಿ ಡಿಲ್ಲಾ ಕೊಲಾಸೊ ಕಾರ್ಯಕ್ರಮವನ್ನು ಸಂಯೋಜಿಸಿ , ಲೊಲಿಟಾ ಮಸ್ಕರೇನ್ಹಸ್, ವಿದ್ಯಾ ಜೋಸೆಫ್, ಶಾಂತಿ ಮಿನೇಜಸ್, ವಿಶ್ವನಾಥ ದೇವಾಡಿಗ, ಮೇರಿ ಡಿ’ಸೋಜ, ಐವನ್ ಮಸ್ಕರೇನ್ಹಸ್, ಮತ್ತು ರೋಹನ್ ಸಿಕ್ವೇರಾ ಸಹಕರಿಸಿದ್ದರು.