ಮಂಗಳೂರು,ಜ 05:  ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಅದರ ಚರಿತ್ರೆಯಲ್ಲಿಯೇ ಮೊದಲ ಬಾರಿಗೆ ಐದು ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಅಧ್ಯಕ್ಷರಾದ ಕೆ. ವಸಂತ ರಾವ್ ತಿಳಿಸಿದ್ದಾರೆ.

2022 ಪ್ರಧಾನ ಮಾಡುವ ಪ್ರಶಸ್ತಿಗಳು:

1) 60 ವರುಷ ಮೇಲ್ಪಟ್ಟ ಹಿರಿಯರು ಕೊಂಕಣಿ ಭಾಷೆಗಾಗಿ ಜೀವಮಾನ ಇಡೀ ದುಡಿದ ರಾಮದಾಸ್ ಗುಲ್ವಾಡಿ ಅವರಿಗೆ ಜೀವಮಾನ ಪ್ರಶಸ್ತಿ, 

2) ಲೋಕವೇದ ಕಲಾವಿದರು ಹಾಗೂ ಹಳ್ಳಿಯ ಚಿಕಿತ್ಸಕರಾದ ಕಲ್ಯಾಣಿಬಾಯಿ ನೀರ್ಕೆರೆ ಅವರಿಗೆ ಜಾನಪದ ಪ್ರಶಸ್ತಿ,

3) ಕೊಂಕಣಿ ವಾರಪತ್ರಿಕೆಗೆ ಚಂದಾದಾರರನ್ನು ಮಾಡಿ ಅದರಲ್ಲಿಯೇ ಜೀವನ ನಡೆಸುವ ಸಾಗರದ ಅಪ್ಪುರಾಯ ಪೈ ಅವರಿಗೆ ಕೊಂಕಣಿ ಕಾರ್ಯಕರ್ತ ಪ್ರಸಸ್ತಿ,

4) ಕೊಂಕಣಿ ನಾಟಕ/ಚಲನಚಿತ್ರ ನಟ ಕ್ಲಾನ್‍ವಿನ್ ಫೆರ್ನಾಂಡಿಸ್ ಅವರಿಗೆ ಯುವ ಪ್ರಶಸ್ತಿ, ಹಾಗೂ

5) ಮೊದಲ ಕೊಂಕಣಿ ಕೃತಿ ಪ್ರಕಟಿಸಿದ ಕೃತಿಕಾ ಕಾಮತ್ ಅವರಿಗೆ ಪುಸ್ತಕ ಪ್ರಶಸ್ತಿ 2022 ವರ್ಷದ ಸಾಲಿಗೆ ಕಾರ್ಯಕಾರಿ ಸಮಿತಿಯ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.

ಇದರ ಜೊತೆಗೆ ಕೊಂಕಣಿಯಲ್ಲಿ ಸೇವೆಯನ್ನು ಮಾಡಿ ಗುರುತಿಸಲ್ಪಡದ ಕರ್ನಾಟಕದ ಮೂಲೆ ಮೂಲೆಗಳಲ್ಲಿನ ವಿವಿಧ ಸಮುದಾಯದ ಕೊಂಕಣಿ ಭಾಷಿಗ 50 ಜನರಿಗೆ ಸನ್ಮಾನಿಸಲಾಗುತ್ತದೆ.

50 ಸನ್ಮಾನಿತರು

ಮೀನಾ ಮಲಾನಿ, ಮಂಗ್ಳುರ್  ಗೌರಿ ಮಲ್ಲ್ಯಾ ಮಂಗ್ಳುರ್, ದೊನಾತ್ ಅಲ್ಮೇಡಾ ತೊಟ್ಟಾಂ ಉಡುಪಿ, ಪ್ರಾನ್ಸಿಸ್ ಸಲ್ದಾನ್ಹಾ ಕಾಮತ್ ಕೆಲಾರಾಯ್, ಶ್ರೀನಿವಾಸ ಶಾನಭಾಗ್  ಹಾರ್ಸಿಕಟ್ಟಾ,  ಅಚಲಾ ಬಿಳಗಿ ಕೊರ್ಲಕಟ್ಟಾ, ಆಂಟನಿ ಲೂಯಿಸ್, ಮಣಿಪಾಲ್,  ಆಲ್ವ್ವಿನ್ ಜೆ ಡಿಕೂನಾ ದೆರೆಬೈಲ್, ಡೊಲ್ಫಿ ಕಾಸ್ಸಿಯಾ  ವಾಮಂಜೂರು, ಮಟ್ಟಾರ್ ವಿಠ್ಠಲ ಕಿಣಿ ಮಂಗ್ಳುರ್, ಸಬಿತಾ ಕಾಮತ್ ಮರೋಳಿ,  ವಿವೇಕ್ ಪಾಯ್ಸ್ ಧರ್ಮಸ್ಥಳ, ಸಂದೇಶ್ ಬಾಂದೇಕರ್ ಕಾರವಾರ್,  ಪಂಚು ಬಂಟ್ವಾಳ್ ,  ಫ್ಲೋರಾ  ಕಾಸ್ತೆಲಿನೊ ಪಾನೀರ್,  ಜ್ಞಾನದೇವ್ ಮಲ್ಲ್ಯಾ ಮಣಿಪಾಲ್, ಉದಯ್ ರಾಯ್ಕರ್ ಧಾರವಾಡ್,   ಮಾರ್ಕ್ ಪಿಂಟೊ ತಾಕೊಡೆ, ಜಯಶ್ರೀ ನಾಯಕ್ ಎಕ್ಕಂಬಿ , ದೀಪಾಲಿ ಸಾಮಂತ್ ದಾಂಡೇಲಿ, ಗೋಪಾಲಕೃಷ್ಣ ಶಾನಭಾಗ್ ಹುಬ್ಬಳ್ಳಿ ,  ಜೋನ್ ತಾವ್ರೊ ಮಂಗ್ಳುರ್, ಎಚ್ ಆರ್ ಆಳ್ವಾ ಮಂಗ್ಳುರ್,  ರಾಘವ ಬಾಳೇರಿ ಹೊನ್ನಾವರ, ಚೇತನ ನಾಯ್ಕ್, ಧಾರವಾಡ,  ವನಿತಾ ನಾಯಕ್  ಕುಮಟಾ, ಬಿ ಎಂ ಖಾರ್ವಿ ಕುಂದಾಪುರ,  ಮುರಳಿಧರ್ ಪ್ರಭು ವಗ್ಗ, ಸಂಜೀವ ಪಾಟೀಲ್  ಉಡುಪಿ,  ಲಿಂಗಪ್ಪ ಗೌಡ ಎಡಪದವು, ಸುನಿತಾ ಶೆಣೈ ಮಂಗ್ಳುರ್,  ಮೀನಾಕ್ಷಿ ನಾಯಕ್ ಮಂಗ್ಳುರ್, ಎಸ್ ಎಮ್ ಅರ್ಶದ್ ಮಂಗ್ಳುರ್, ಚಂದ್ರಾ ನಾಯ್ಕ್ ಎಗ್ಗುಂಜೆ ಉಡುಪಿ, ರೆಮೊನಾ ಇವೆಟ್ ಪಿರೆರಾ, ಮಂಗ್ಳುರ್, ಎಲಿಯಾಸ್ ಫೆರ್ನಾಂಡಿಸ್ ಪಾಲ್ದಾನೆ ಮಂಗ್ಳುರ್, ಡಾ ಇಮ್ರಾನ್ ಮೋತಿಶಾಮ್,  ಜನಾಬ್ ಮೊಹಮ್ಮದ್ ಅನ್ಸಾರ್ ಸಾಹೇಬ್, ಬಬಿತಾ ಪಿ ನಾಯಕ್ ಮಂಗ್ಳುರ್, ಕುಡ್ಪಿ ಜಗದೀಶ್ ಶೆಣೈ ಮಂಗ್ಳುರ್. 


ಸಂಘ/ ಸಂಸ್ಥೆಗಳು

ಕೊಂಕಣಿ ಲೇಖಕ್ ಸಂಘ್ ಕರ್ನಾಟಕ್, ಮಂಗ್ಳುರ್  ಸೈಂಟ್ ಆಲೋಶಿಯಸ್ ಕೊಂಕಣಿ ಸಂಸ್ಥೊ ಮಂಗ್ಳುರ್, ರಚನಾ ಕಥೊಲಿಕ್ ಚೇಂಬರ್ ಆಫ್ ಕೋಮರ್ಸ್ ಆಂಡ್ ಇಂಡಸ್ಟ್ರಿ ಮಂಗ್ಳುರ್,  ಉತ್ತರ ಕನ್ನಡ ಜಿಲ್ಲಾ ಕೊಂಕಣಿ ಪರಿಷದ್ ಶಿರಸಿ, ಟಿ ಎಮ್ ಎ ಪೈ ಫೌಂಡೇಶನ್ ಮಣಿಪಾಲ್,   ಕೊಮೆಡಿ ಕಂಪೆನಿ ಮಂಗ್ಳುರ್, ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಮಂಗ್ಳುರ್,  ಮಾಂಡ್ ಸೊಭಾಣ್ ಮಂಗ್ಳುರ್, ಕೊಂಕಣಿ ಸಾಂಸ್ಕೃತಿಕ  ಸಂಘ್ ಮಂಗ್ಳುರ್ , ಕೊಂಕಣಿ ನಾಟಕ್ ಸಭಾ ಮಂಗ್ಳುರ್.

ವಿದ್ಯಾರ್ಥಿಗಳು ಭಾಷೆಯನ್ನು ಉಳಿಸುವ ಭವಿಷ್ಯದ ಜನರು ಅದಕ್ಕಾಗಿ ಅವರಿಗೆ ವಿವಿಧ ವಿನೋದಾವಳಿಗಳ ಅಂತರ್ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸಲಾಗಿದೆ. ವಿಜೇತರಿಗೆ ನಗದು ಬಹುಮಾನ ಕೊಡಲಾಗುವುದು.

ಕೊಂಕಣಿಯ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು, ಅದರಲ್ಲಿ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಫ್ರಾಂಕ್ಲಿನ್ ಕ್ರಿಸ್ಟನ್ ಕೆಸ್ಟೆಲಿನೊ ಪ್ರಥಮ, ಕುಮಾಟಾದ ಸರಸ್ವತಿ ಪಿಯುಸಿ ಕಾಲೇಜಿನ ಅಕ್ಷತಾ ವಿನಾಯಕ ಶಾನಭಾಗ್ ದ್ವಿತೀಯ, ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಎಂಎ ವಿದ್ಯಾರ್ಥಿ ರವಳನಾಥ ಆರ್ ಕಾಮತ್ ತೃತೀಯ ಸ್ಥಾನವನ್ನು ಗಳಿಸಿದ್ದಾರೆ.

1974 ಜನವರಿ ಒಂದು ತಾರೀಕಿನಂದು  ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ಸ್ಥಾಪನೆ ಆಯಿತು. ಕೊಂಕಣಿ ಭಾಷೆಯಲ್ಲಿ 42 ಪ್ರಭೇದಗಳು ಇದ್ದು ಕ್ರೈಸ್ತ, ಹಿಂದು, ಮುಸ್ಲಿಂ ಪ್ರಮುಖ ಮೂರೂ ಧರ್ಮದ ಜನರು  ಕೊಂಕಣಿ ಮಾತನಾಡುತ್ತಾರೆ. ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ಎಲ್ಲಾ ಕೊಂಕಣಿ ಮಾತನಾಡುವವರ ಸಂಸ್ಥೆಗಳ ಮಾತೃಸಂಸ್ಥೆ ಆಗಿದೆ.

1992 ರಲ್ಲಿ ಕೆಬಿಎಮ್ ಕೆ ಮುಂದಾಳತ್ವ ವಹಿಸಿ ಎಲ್ಲಾ ಕೊಂಕಣಿ ಸಂಸ್ಥೆಗಳು ಜಾಗತಿಕ ಕೊಂಕಣಿ ಸಮ್ಮೇಳನ ಮಾಡಿದ್ದರು ಅದರ ನೆನಪಿಗೆ ಕೊಂಕಣಿ ಭಾಷೆ ಮತ್ತು  ಸಂಸ್ಕೃತಿ ಪ್ರತಿಷ್ಠಾನ  ಆರಂಭ ಮಾಡಿ ಮೂಲಧನವನ್ನೂ ವ್ಯಯಿಸಿದ್ದರು. 

ರಾಜ್ಯದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಆಗಲು ಕೆಬಿಎಮ್‍ಕೆ ಪದಾಧಿಕಾರಿಗಳು ಚಳುವಳಿ ಮಾಡಿ ಯಶಸ್ಸು ಕಂಡಿದ್ದರು. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಕೊಂಕಣಿ ಭಾಷೆ ಸೇರಿಸಲು ರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನಿಸಲಾಗಿತ್ತು.

ಕೊಂಕಣಿ ವರಕವಿ ಚಾಫ್ರಾ ದೆಕೊಸ್ತಾ ಅವರು ಸ್ಥಾಪಕ ಅಧ್ಯಕ್ಷರು ಹಾಗೂ ಆಸ್ಟಿನ್ ಡಿಸೋಜ ಪ್ರಭು ಕಾರ್ಯದರ್ಶಿ ಹಾಗೂ ರಾಕ್ಣೊ ಪತ್ರಿಕೆಯ ಸಂಪಾದಕ ಫಾದರ್ ಮಾರ್ಕ್ ವಾಲ್ಡರ್ ಖಜಾಂಚಿ ಆಗಿ ಭಾಷಾ ಮಂಡಳ್ ಸ್ಥಾಪನೆಗೆ ಕಾರಣವಾದರು. ಈವರೆಗೆ ಒಟ್ಟು ಹನ್ನೆರಡು ಅಧ್ಯಕ್ಷರು ಸೇವೆ ಗೈದಿರುತ್ತಾರೆ.

ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆಯನ್ನು ಕೊಂಕಣಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಮನೋಹರ್ ಕಾಮತ್ ಅವರು ಕಳೆದ ವರ್ಷ ಜನವರಿ ಒಂದರಂದು ಮೂವತ್ತೈದು ಕೊಂಕಣಿ ಸಂಸ್ಥೆಗಳನ್ನು ಜೊತೆಗೂಡಿಸಿ ಮಾಡಿದ್ದರು. ಇಡೀ ವರ್ಷದ ವಿವಿಧ ಕಾರ್ಯಕ್ರಮಗಳನ್ನು ಸಂಚಾಲಕ ಹಾಗೂ ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ ಅವರ ಮುಂದಾಳತ್ವದಲ್ಲಿ ಪೂರ್ಣಗೊಳಿಸಿ ಈ ಸಮಾರೋಪವನ್ನು ನಡೆಸಲಾಗುತ್ತಿದೆ.

ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಈ ಕೆಳಗಿನ ಸಮಿತಿಗಳನ್ನು ಮಾಡಲಾಗಿದೆ.

ಸ್ವಾಗತ ಸಮಿತಿಯಲ್ಲಿ ಅಧ್ಯಕ್ಷ ಕೆ ವಸಂತ ರಾವ್, ಕಾರ್ಯಕ್ರಮ ಸಂಚಾಲಕರಾದ ಹಾಗೂ ಕಾರ್ಯದರ್ಶಿಯಾದ ರೇಮಂಡ್ ಡಿಕೂನಾ ತಾಕೊಡೆ, ಮೀನಾಕ್ಷಿ ಪೈ, ಗೀತಾ ಸಿ ಕಿಣಿ, ನವೀನ್ ನಾಯಕ್, ಜ್ಯೂಲಿಯೆಟ್ ಫನಾರ್ಂಡೀಸ್.

ಆಹಾರ ಸಮಿತಿ: ಸುರೇಶ್ ಶೆಣೈ, ಪ್ರಕಾಶ್ ಪೈ. ಸಾಂಸ್ಕೃತಿಕ ಸಮಿತಿ: ಲಾರೆನ್ಸ್ ಪಿಂಟೊ, ಜೊಸ್ಸಿ ಪಿಂಟೊ, ಸ್ಪರ್ಧೆಗಳ ಸಮಿತಿ: ರತ್ನಾಕರ ಕುಡ್ವಾ, ರೋಬರ್ಟ್ ಮೆನೇಜಸ್, ಲೊನಾ ವಾಸ್, ಸನ್ಮಾನ ಸಮಿತಿ: ಪ್ರಶಾಂತ ಶೇಟ್, ಜೋಯ್ಸ್ ಪಿಂಟೊ, ಅರವಿಂದ್ ಶಾನಭಾಗ್, ಪ್ಲಾವಿಯಾ ಅಲ್ಬುಕರ್ಕ್.

ಮೆರವಣಿಗೆ ಸಮಿತಿ: ಜೊಸ್ಸಿ ಪಿಂಟೊ, ನಿರಂಜನ್, ಸ್ವಯಂಸೇವಕ ಸಮಿತಿ: ಪೆಲ್ಸಿ ಲೋಬೊ, ವಿದ್ಯಾ ಬಾಳಿಗ, ಪ್ರಮಾಣಪತ್ರ ಸಮಿತಿ: ರಿಯಾನಾ ಡಿಕೂನಾ, ವಿರೊಯ್ ಡೆಸಾ, ನೇಹಾ ಡಿಸೋಜ, ಲೀಶಾ ಡಿಸೋಜ, ಕೀತ್, ಮಾಧ್ಯಮ ಸಮಿತಿ: ರೇಮಂಡ್ ಡಿಕೂನಾ, ಶ್ರೀನಿವಾಸ ನಾಯಕ್ ಇಂದಾಜೆ, ವೆಂಕಟೇಶ್ ಬಾಳಿಗ.

ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಕೆ ವಸಂತ ರಾವ್, ಕಾರ್ಯದರ್ಶಿ ಮತ್ತು ಸಂಚಾಲಕ ರೇಮಂಡ್ ಡಿಕೂನಾ ತಾಕೊಡೆ, ಪ್ರಶಸ್ತಿ ಸಂಚಾಲಕ ಡಾ ಅರವಿಂದ್ ಶಾನಭಾಗ್, ಪೋಷಕರಾದ ಪ್ರಶಾಂತ ಶೇಟ್, ಖಜಾಂಜಿ ಸುರೇಶ್ ಶೆಣೈ, ಉಪಾಧ್ಯಕ್ಷ  ರತ್ನಾಕರ್ ಕುಡ್ವಾ, ಸಹ ಕಾರ್ಯದರ್ಶಿ ಜೂಲಿಯೆಟ್ ಫೆರ್ನಾಂಡಿಸ್ ಇದ್ದಾರೆ.