ಮಂಗಳೂರು, ಏ 4:  ಗೃಹರಕ್ಷಕ ದಳ ಜಿಲ್ಲಾ ಕಚೇರಿಯಲ್ಲಿ  ಎಪ್ರಿಲ್ 04  ರಂದು ಕಣಚೂರು ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ಗೃಹರಕ್ಷಕ ದಳ ಸಹಯೋಗದಲ್ಲಿ ಉಚಿತ ದೇಹ ತಪಾಸಣೆ, ಮಾಹಿತಿ ಹಾಗೂ ಚಿಕಿತ್ಸಾ ಶಿಬಿರವನ್ನು ನಡೆಸಲಾಯಿತು. ಈ ಶಿಬಿರದಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣೆ, ರಕ್ತ ತಪಾಸಣೆ ಹಾಗೂ ರಕ್ತಛಾಪ ತಪಾಸಣೆ ಸಹಿತ ಇತರ ದೇಹ ಪರೀಕ್ಷೆ ನಡೆಸಿ ಸೂಕ್ತ ಸಲಹೆ ಮತ್ತು ಔಷಧಗಳನ್ನು ಕೊಡಲಾಯಿತು. ಒಳರೋಗಿಯಾಗಿ ಚಿಕಿತ್ಸೆ ಬೇಕಾದವರಿಗೆ ಕಾಲೇಜು ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುವ ಮಾಹಿತಿ ನೀಡಲಾಯಿತು.

ಜಿಲ್ಲಾ ಗೃಹರಕ್ಷಕ‌ ದಳದ ಮುಖ್ಯ ಅಧಿಕಾರಿ ಡಾ. ಮುರಳೀ ಮೋಹನ ಚೂಂತಾರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಹಾಗೂ ಶಸ್ತ್ರ ಚಿಕಿತ್ಸಕ ಡಾ ಸುರೇಶ ನೆಗಳಗುಳಿ ಆಶಯ ಭಾಷಣ ಮಾಡಿದರು.

ಉಪ ವೈದ್ಯಕೀಯ ಅಧೀಕ್ಷಕ ಡಾ. ಕಾರ್ತಿಕೇಯ ಪ್ರಸಾದ,ವೈದ್ಯರಾದ ವೇದಂ ಆಯುರ್ವೇದ ಮುಖ್ಯಸ್ಥ ಡಾ ಕೇಶವ ರಾಜ್, ಇತರ ವೈದ್ಯರಾದ  ಡಾ ಅಂಜಲಿ ಶೇಖರ, ಡಾ ಗಾಯತ್ರಿ ಸಂಜೀವನ್ ಹಾಗೂ ಶುಶ್ರೂಶಕಿಯರಾದ ಅಲ್ವೀರಾ ಪಾಯಸ್,ಎಂ‌ಆರ್. ಡಿ ವಿಭಾಗದ ರಶ್ಮಿಕಾ,ಫಾರ್ಮಸಿ ವಿಭಾಗದ ಸಾನಿಯಾ, ಲ್ಯಾಬ್ ಪರೀಕ್ಷಕ ಮಹಮ್ಮದ್ ಶಕೀರಾ, ಸಹಿತ ಪೂರ್ಣ ಸಿಬ್ಬಂದಿಗಳು ಈ ಶಿಬಿರವನ್ನು ನಡೆಸಿಕೊಟ್ಟರು.

ಗೃಹರಕ್ಷಕ ದಳದ ಸರ್ವ ಸಿಬ್ಬಂದಿ ಸಹಿತ ಹಲವರು ಈ  ಶಿಬಿರದ ಸದುಪಯೋಗ ಪಡೆದರು.