ಏಪ್ರಿಲ್ 3ಕ್ಕೆ ತಮ್ಮ ರಾಜ್ಯ ಸಭಾ ಅವಧಿ ಮುಗಿಯುವುದನ್ನು ಅರಿತಿರುವ ಮಾಜೀ ಪ್ರಧಾನಿ ಮನಮೋಹನ್ ಸಿಂಗ್ ಅವರು ಏಪ್ರಿಲ್ 2ರಂದು ರಾಜ್ಯ ಸಭೆಗೆ ತನ್ನ ವಿದಾಯ ಹೇಳಿದರು.
1991ರ ಅಕ್ಟೋಬರ್‌ನಲ್ಲಿ ಮೊದಲು ರಾಜ್ಯಸಭೆಯ ಸದಸ್ಯರಾದ ಮನಮೋಹನ್ ಸಿಂಗ್ ಅವರಿಗೆ ಈಗ 91 ವರುಷ. 1991ರಲ್ಲಿ ಹಣಕಾಸು ಸಚಿವರಾದ ಅವರು ಭಾರತದ ಇಂದಿನ ಆರ್ಥಿಕ ದೃಢತೆಗೆ ಭದ್ರ ಬುನಾದಿ ಹಾಕಿದವರು. 33 ವರುಷ ರಾಜ್ಯ ಸಭೆಯಲ್ಲಿ ಇದ್ದ ಅವರು 2004ರಿಂದ 2014ರವರೆಗೆ ದೇಶದ ಪ್ರಧಾನಿ ಆಗಿದ್ದರು. ಭಾರತದ ಹಣಕಾಸು ವ್ಯವಸ್ಥೆ ಗಟ್ಟಿಗೊಂಡುದು ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.