ಎರ್ಲಪಾಡಿ ಗ್ರಾಮದ ಬಿಜೆಪಿಯ ಯುವ ಕಾರ್ಯಕರ್ತರಾದ ಕಿರಣ್ ಪೂಜಾರಿ ಮತ್ತು ನಾಗೇಂದ್ರ ಆಚಾರ್ಯ ಕಾಂಗ್ರೆಸ್  ಪಕ್ಷದ ಸಿದ್ದಾಂತ ವನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆ ಗೊಂಡರು. ಇವರನ್ನು ಕಾಂಗ್ರೆಸ್ ಮುಖಂಡರಾದ ಉದಯ ಶೆಟ್ಟಿ ಮುನಿಯಾಲು ಹಾಗೂ ಪಕ್ಷದ ಅಧ್ಯಕ್ಷರಾದ ಕೆ. ಸದಾಶಿವ ದೇವಾಡಿಗ ರವರು ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡವವರನ್ನು ಕುರಿತು ಉದಯ ಶೆಟ್ಟಿ ಮುನಿಯಾಲುರವರು ಮಾತನಾಡಿ, ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ಲೋಕಸಭಾಕ್ಷೇತ್ರದ ನಮ್ಮ  ಅಭ್ಯರ್ಥಿಯಾದ  ಜಯಪ್ರಕಾಶ ಹೆಗ್ಡೆಯವರ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿ,  ಅಭಿನಂದಿಸಿದರು.

ಸಭೆಯಲ್ಲಿ ಎರ್ಲಪಾಡಿ ಗ್ರಾಮೀಣ ಸಮಿತಿ ಅಧ್ಯಕ್ಷರಾದ ಭೋಜ ಶೆಟ್ಟಿ ಸ್ವಾಗತಿಸಿ, ಕೃಷಿ‌ ಘಟಕದ ರಾಜ್ಯ ಕಾರ್ಯದರ್ಶಿ ಉದಯ ವಿ. ಶೆಟ್ಟಿ, ಸುಧಾಕರ ಹೆಗ್ಡೆ, ಸುಜಾತ ಪೂಜಾರಿ, ಸುಧಾಕರ ಶೆಟ್ಟಿ, ಸುಬಿತ್ ಕುಮಾರ್, ಮೊದಲಾದವರು ಉಪಸ್ಥಿತರಿದ್ದರು.