ಮಂಗಳೂರು:  ಕಸ್ತೂರ್ಭಾ ಮೆಡಿಕಲ್ ಕಾಲೇಜಿನ ಖ್ಯಾತ ಯುರೊಲೊಜಿಸ್ಟ್ ಡಾ. ಜಿ. ಜಿ ಲಕ್ಶ್ಮಣ ಶುಕ್ರವಾರ ಬೆಳಿಗ್ಗೆ  ಹೃದಯಾಘಾತದಿಂದಾಗಿ ನಿಧನರಾಗಿದ್ದಾರೆ. ಇತ್ತೀಚಿಗೆ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೇಳೆ ಅವರಿಗೆ ಹೃದಯಾಘಾತವಾಗಿತ್ತು ಎನ್ನಲಾಗಿದೆ.  ಬಳಿಕ  I.C.U ನಲ್ಲಿ ಇದ್ದ ಅವರಿಗೆ ಯಾವುದೇ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ  ನಿಧನರಾದರು ಎಂದು ತಿಳಿದು ಬಂದಿದೆ.  

ತಮ್ಮ ವೃತ್ತಿ ಜೀವನದಲ್ಲಿ 36 ವರ್ಷ ಹೆಚ್ಚು ಅನುಭವ ಹೊಂದಿದ್ದ ಅವರು ಹಲವು ವರ್ಷಗಳಿಂದ ಕೆ ಎಂ ಸಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು . ಅಷ್ಟೇ ಅಲ್ಲದೆ ತಮ್ಮ ವೈದ್ಯಕೀಯ ಜೇವನದಲ್ಲಿ ಯುರೊಲೊಜಿಸ್ಟ್ ಮಾತ್ರವಲ್ಲದೆ ಹಲವಾರು ರೀತಿಯ ವೈದ್ಯಕೀಯ ಪ್ರಕರಣಗಳನ್ನು ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಹಾಗೂ  ಓರ್ವ ಪುತ್ರ ರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಶೃದ್ಧಾಂಜಲಿ ಸಲ್ಲಿಸಿದ್ದಾರೆ