ಬ್ರೆಜಿಲ್‌ನಲ್ಲಿ ಗಮನ ಸೆಳೆದಿರುವ ಫುಟ್ಬಾಲ್ ಆಟಗಾರರಲ್ಲಿ ಮಹಾತ್ಮಾ ಗಾಂಧಿ ಒಬ್ಬರು. ಈ ವೃತ್ತಿ ಆಟಗಾರನ ಪೂರ್ಣ ಹೆಸರು ಮಹಾತ್ಮಾ ಗಾಂಧಿ ಹೆಬರ್ಪಿಯೋ ಮಟ್ಟೋಸ್ ಪೈರೆನ್.

ಈ ಹೆಸರನ್ನು ಹೆತ್ತವರೇ ಇಟ್ಟಿದ್ದಾರೆ. ತಂದೆ ಕಾಲ್ಚೆಂಡು ಆಟಗಾರರಾಗಿದ್ದು ಮಗನನ್ನು ಫುಟ್ಬಾಲ್ ಆಟಗಾರರಾಗಿ ಬೆಳೆಸಿದ್ದಾರೆ. 1992ರ ಫೆಬ್ರವರಿ 18ರಂದು ಹುಟ್ಟಿರುವ ಮಹಾತ್ಮಾ ಗಾಂಧಿ 12 ವರುಷಗಳಿಂದ ವೃತ್ತಿ ಆಟಗಾರರಾಗಿ ಬ್ರೆಜಿಲ್‌ನಲ್ಲಿ ಹೆಸರು ಮಾಡಿದ್ದಾರೆ. ಅಟ್ಲೆಟಿಕೋ ಕ್ಲಬ್ ಪರ ಆಡುವ ಅವರು ಈಗಲೂ ವೃತ್ತಿ ಆಟಗಾರರಾಗಿ ದೇಶ ಸುತ್ತುತ್ತಿದ್ದಾರೆ.
ಮಹಾತ್ಮಾ ಗಾಂಧಿ ತಂದೆ ಭಾರತದ ಗಾಂಧೀಜಿಯವರ ಅಭಿಮಾನಿ. ದಕ್ಷಿಣ ಆಫ್ರಿಕಾದಲ್ಲಿ ಇದ್ದಾಗ ಗಾಂಧೀಜಿಯವರು ಫುಟ್ಬಾಲ್ ತಂಡ ಕಟ್ಟಿದ್ದರಲ್ಲದೆ ಅಹಿಂಸಾ ಪ್ರಚಾರ ಆರಂಭಿಸಿದ್ದರು.