ಕಿನ್ನಿಗೋಳಿ, ಕಟೀಲು: ಮಂಗಳೂರಿನಲ್ಲಿ ತಾಪಮಾನ ಏರಿಕೆಯಿಂದ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು ಎಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಉಂಟಾಗಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.  ನೀರಿನ  ಸಮಸ್ಯೆಯ ಬಗ್ಗೆ ಗ್ರಾಮ ಪಂಚಾಯತ್ ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ವಿಲ್ಲದಂತಾಗಿದೆ.

ವಾರದ ಕೆಲ ದಿನಗಳಲ್ಲಿ ಮಾತ್ರ  ಸ್ವಲ್ಪ ಪ್ರಮಾಣದಲ್ಲಿ ನೀರು ಬರುತ್ತಿದ್ದು, ಅದೂ ಕೂಡ ಸಮರ್ಪಕ ರೀತಿಯಲ್ಲಿ ಬರುತ್ತಿಲ್ಲ. ಅಲ್ಲದೆ ನೀರು  ಬರುವಂತಹ ಸಮಯವೂ  ಸೂಕ್ತ ಇಲ್ಲ ಎಂದು ಜನರು ಕಂಗಲಾಗಿದ್ದಾರೆ ಮಾತ್ರವಲ್ಲದೆ ಕೆಲವೊಂದು ದಿನಗಳಲ್ಲಿ ರಾತ್ರಿ ಹೊತ್ತಲ್ಲಿಯೂ ನೀರು ಬರುತ್ತಿದೆ. ಇದರಿಂದ ದಿನವಿಡಿ ನೀರಿಗಾಗಿ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯತ್ ಗೆ ಅನೇಕ ಭಾರೀ ಮನವಿಯನ್ನು ಮಾಡಲಾಗಿದ್ದು, ಕೇವಲ ನೀರಿನ ವ್ಯವಸ್ಥೆ ಸರಿಪಡಿಸುತ್ತೇವೆ ಎಂಬ ಭರವಸೆಯನ್ನು ಮಾತ್ರ ನೀಡುತ್ತ ಬಂದಿದ್ದಾರೆ. ಆದರೆ ಇದರ ವರೆಗೆ ಅಲ್ಲದೆ ಮನೆ ಮನೆಗೆ ಗಂಗೆ  ಜಲೋತ್ಸವ (ನೀರು ಪೂರೈಕೆ) ಹೆಸರಿಗೆ ಮಾತ್ರವೇ ಎಂಬಂತಿದೆ. ಸಮರ್ಪಕವಾಗಿ ನೀರು ಬಾರದೆ ಗ್ರಾಮಸ್ಥರು ತೊಂದರೆಯನ್ನು ಅನುಭವಿಸುವಂತಾಗಿದೆ. ಮನೆಗೆ ನೀರಿನ ಸಂಪರ್ಕವಿದ್ದರೂ ಟ್ಯಾಂಕರ್ ನ ಮೂಲಕ ನೀರು ತರುವಂತಹ ದುಸ್ಥಿತಿ ಎದುರಾಗಿದೆ. ನೀರಿನ ಸಮಸ್ಯೆಗೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.