ಕಿನ್ನಿಗೋಳಿ: ತಾಳಿಪಾಡಿ ಗ್ರಾಮದ ಪ್ರಧಾನವಾಗಿ ಆರಾದಿಸಿಕೊಂಡು ಬರುವ ಜಾರಂದಾಯ ಜುಮಾದಿ ಬಂಟ ದೈವಸ್ಥಾನದ ಜೀರ್ಣೋದ್ದಾರ ಹಾಗೂ ಕಲಶಾಭಿಷೇಕ, ಪುನರ್ ಪ್ರತಿಷ್ಠೆ ಏಪ್ರಿಲ್ 30 ರಿಂದ ಮೇ ನಾಲ್ಕರವರೆಗೆ ನಡೆಯಲಿದ್ದು ಅಭಿವೃದ್ಧಿ ಕಾರ್ಯಕ್ಕೆ ಭಕ್ತರ ಸಹಕಾರ ಅಗತ್ಯ ಎಂದು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಭಾಸ್ಕರ ಶೆಟ್ಟಿ ತಾಳಿಪಾಡಿಗುತ್ತು ಹೇಳಿದರು.
ಅವರು ಇಂದು ತಾಳಿಪಾಡಿ ಗುತ್ತುವಿನಲ್ಲಿ ಜರಗಿದ ಪುನರ್ ಪ್ರತಿಷ್ಠೆ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ದಿನೇಶ್ ಬಂಡ್ರಿಯಾಳ್ ತಾಳಿಪಾಡಿ ಗುತ್ತು ಅಧ್ಯಕ್ಷತೆ ವಹಿಸಿದ್ದು ಬಾಲಕೃಷ್ಣ ಭಟ್ ತಾಳಿಪಾಡಿ ಶುಭ ಹಾರೈಸಿದರು, ಸಮಿತಿಯ ಗೌರವಾಧ್ಯಕ್ಷರುಗಳಾದ ಐಕಳ ಹರೀಶ್ ಶೆಟ್ಟಿ, ರಾಮಚಂದ್ರ ಶೆಟ್ಟಿ ತಾಳಿಪಾಡಿ ಗುತ್ತು ನಂದಿನಿ, ರತ್ನಾಕರ ಶೆಟ್ಟಿ ತಾಳಿಪಾಡಿ ಗುತ್ತು, ಸಂತೋಷ್ ಕುಮಾರ್ ಹೆಗ್ಡೆ, ಗೌರವ ಕೋಶಾಧಿಕಾರಿ ವಿಶ್ವನಾಥ ಶೆಟ್ಟಿ ತಾಳಿಪಾಡಿ ಗುತ್ತು, ಜೊತೆ ಕೊಶಾದಿಕಾರಿ ಸುಕುಮಾರ ಶೆಟ್ಟಿ ತಾಳಿಪಾಡಿ ಗುತ್ತು ನಂದಿನಿ, ಗೌರವ ಕಾರ್ಯದರ್ಶಿ ಕುಶಲ ಪೂಜಾರಿ ತಾಳಿಪಾಡಿ, ಪ್ರಸಾದ್ ಜಯಕರ ಶೆಟ್ಟಿ, ಸುನಂದ ಡಿ. ಶೆಟ್ಟಿ, ರಮೇಶ್ ಶೆಟ್ಟಿ ಮೂಡಗುತ್ತು, ದಿವಾಕರ ಕರ್ಕೇರಾ ತಾಳಿಪಾಡಿ, ಮುಂಬಯಿ ಸಮಿತಿಯ ಸಂಘಟನಾ ಕಾರ್ಯದರ್ಶಿ ವನಪಾಲ ಶೆಟ್ಟಿ ತಾಳಿಪಾಡಿ ಗುತ್ತು, ಹರೀಶ್ ಎಸ್ ಶೆಟ್ಟಿ ತಾಳಿಪಾಡಿ ಗುತ್ತು, ಶಶೀಂದ್ರ ಶೆಟ್ಟಿ ಅಡಗುತ್ತು, ಪ್ರಸಾದ್ ಶೆಟ್ಟಿ ತಾಳಿಪಾಡಿ ಗುತ್ತು, ನಾರಾಯಣ ಅಂಚನ್ ತಾಳಿಪಾಡಿ, ಚಿತ್ರಾ ಯು. ಶೆಟ್ಟಿ ತಾಳಿಪಾಡಿ ಗುತ್ತು, ಮೂಡಗುತ್ತು, ಮುಂಡಗುತ್ತು, ಊರ್ನಡ್ಕ, ಬೆದ್ರಡಿ, ಆದರೆ, ಕಲ್ಲರಬೆನ್ನಿ, ಗೋಳಿದಡಿ ಮನೆತನದವರು. ಸಮಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಕುಶಲ ಪೂಜಾರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉದಯ ಪೂಂಜಾ ವಂದಿಸಿದರು.