ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ದಕ್ಷಿಣ ಕನ್ನಡ ಜಿಲ್ಲಾ ಕೆಂಜಾರು ಬಳಿಯ ಮುಖ್ಯಪ್ರಾಣ ಪೂರ್ವ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ವಿಪರೀತ ಮಳೆಯ ಕಾರಣ ಕುಸಿದು ಬಿದ್ದಿತ್ತು. ವಿಷಯ ತಿಳಿದ ತಕ್ಷಣ ಶಾಸಕ ಉಮಾನಾಥ ಕೋಟ್ಯಾನ್ ಅವರು ಸ್ಥಳಕ್ಕೆ ಭೇಟಿ ನೀಡಿ ಸಂಬಂಧ ಪಟ್ಟ ಅಧಿಕಾರಿಗಳನ್ನು ಕರೆದು ಶೀಘ್ರ ದುರಸ್ತಿ ಮಾಡಲು ನಿರ್ದೇಶಿಸಿದರು. ಮಕ್ಕಳಾರೂ ಇಲ್ಲದಾಗ ಬಿದ್ದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ ಎಂದು ತಿಳಿದು ಬಂದಿದೆ.