ದಿಲ್ಲಿಯ ರೋಸ್ ಅವೆನ್ಯೂ  ಕೋರ್ಟು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರನ್ನು ಮಾರ್ಚ್ 28ರವರೆಗೆ ವಿಚಾರಣೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿತು. ಇಡಿ- ಜಾರಿ ನಿರ್ದೇಶನಾಲಯದವರು 10 ದಿನ ವಶಕ್ಕೆ ನೀಡುವಂತೆ ಕೇಳಿದ್ದರು. ಮಾರ್ಚ್ 28ರವರೆಗೆ ವಿಚಾರಣೆಗೆ ನೀಡಲಾಗಿದೆ.

ನಾನು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ. ಇಲ್ಲಿಂದಲೇ ಆಡಳಿತ ನಡೆಸುತ್ತೇನೆ. ನನ್ನ ಜೀವನ ಒಳಗಿರಲಿ, ಹೊರಗಿರಲಿ ದೇಶ ಸೇವೆಗೆ ಮುಡಿಪು ಎಂದು ಈ ಸಂದರ್ಭದಲ್ಲಿ ಕೇಜ್ರೀವಾಲ್ ಹೇಳಿದರು.