ಸರ್ವೋಚ್ಚ ನ್ಯಾಯಾಲಯದ ಆದೇಶ ಉಲ್ಲಂಘನೆಯ ಉದ್ದೇಶ ಇರಲಿಲ್ಲ ಎಂದು ಸುಪ್ರೀಂ ಕೋರ್ಟಿನಲ್ಲಿ ತಮಿಳುನಾಡು ರಾಜ್ಯಪಾಲ ಆರ್. ಎನ್. ರವಿ ಪರ ವಕೀಲರಾದ ವೆಂಕಟರಮಣಿ ಅವರು ಸುಪ್ರೀಂ ಕೋರ್ಟಿನಲ್ಲಿ ಹೇಳಿದರು.
ನ್ಯಾಯಾಲಯ ಬಿಡುಗಡೆ ಮಾಡಿದ್ದ ಪೊನ್ಮುಡಿ ಅವರಿಗೆ ಮತ್ತೆ ಮಂತ್ರಿ ಪ್ರಮಾಣವಚನ ನೀಡಲು ತಮಿಳುನಾಡು ರಾಜ್ಯಪಾಲ ರವಿ ನಿರಾಕರಿಸಿದ್ದರು. ಅದನ್ನು ತಮಿಳುನಾಡು ಸರಕಾರವು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿತ್ತು. ರಾಜ್ಯಪಾಲರ ತಪ್ಪೊಪ್ಪಿಗೆ ಮಾದರಿಯ ಹೇಳಿಕೆ ಬಳಿಕ ಸುಪ್ರೀಂ ಕೋರ್ಟು ತಮಿಳುನಾಡು ಅರ್ಜಿಯನ್ನು ವಿಲೇವಾರಿ ಮಾಡಿತು.