ಕಾರ್ಕಳ: ಶಿಕ್ಷಣಕ್ಕೆ ಒತ್ತು ಕೊಡುವ ಸಂಸ್ಥೆಯಾದ ಜಮೀಯುತುಲ್ ಫಾಲ್ಲಹಾ ಕಾರ್ಕಳ ಘಟಕದಿಂದ ಕಾರ್ಕಳ ಸಲ್ಮಾರ್ ಉರ್ದು ಶಾಲೆಯ  60 ವಿದ್ಯಾರ್ಥಿಗಳಿಗೆ ದಾನಿಗಳಾದ ಮೊಹಮ್ಮದ್ ಗೌಸ್, ಹಾಗೂ ನದೀಮ್ ಕುಂಟಪಾಡಿಯವರು ಕೊಡೆಗಳನ್ನು ಹಾಗೂ ಮೊಹಮ್ಮದ್ ಗೌಸ್ ಲೇಖನಿ ಸಾಮಗ್ರಿಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಅಷ್ಪಕ ಅಹಮದ್, ಕಾರ್ಯದರ್ಶಿ ಸೈಯದ್ ಅಬ್ಬಾಸ್, ಘಟಕದ ಸದಸ್ಯರಾದ ಮೊಹಮ್ಮದ್ ಕಾಸಿಂ, ಉಪಾಧ್ಯಕ್ಷರಾದ ಸೈಯದ್ ಕಾಸಿಂ,  ಮೊಹಮ್ಮದ್ ಹುಸೇನ್, ನಾಸಿರ್ ಇಂಜಿನಿಯರ್, ಏ ಜಾಸ್ ಶರೀಫ್ , ಅಮೀರ್, ಸಂಘದ ಕೋಶ ಅಧಿಕಾರಿಯಾದ, ಯಾಕೋಬ್ ಸಾಹೇಬ್, ಶಾಲೆ ಹಳೆ ವಿದ್ಯಾರ್ಥಿ ಮುಬಿನ್ ಸಾಹೇಬ್ ,ಹಾಗೂ ಶಾಲೆ ಮುಖ್ಯ ಉಪಾಧ್ಯಾರಾದ ಸುಧಾಕರ ಪೂಜಾರಿ, ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.