ಕಾರ್ಕಳ:  ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ 40ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಮಂಜುನಾಥ ಪೈ ಸಾಂಸ್ಕೃತಿಕ ಸಭಾಭವನದಲ್ಲಿ ನಡೆಯಿತು. ಗಣೇಶ ಚತುರ್ಥಿಯಂದು ಪೂಜಾ ವಿಧಿ ವಿಧಾನಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಗಣೇಶನ ವಿಗ್ರಹಕ್ಕೆ ಐದು ದಿನಗಳ ಕಾಲ ಧಾರ್ಮಿಕ ವಿಧಿ ವಿಧಾನಗಳು, ಮಹಾಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮ ಅನ್ನ ಸಂತರ್ಪಣೆ 5 ದಿನಗಳವರೆಗೆ ನೆರವೇರಲಿದೆ. 40ನೇ ವರ್ಷದ ಕಾರ್ಯಕ್ರಮದ ಅಂಗವಾಗಿ 20 ಲಕ್ಷ ರೂಪಾಯಿ ವೆಚ್ಚದ ಪ್ರಭಾವಳಿ , ಮೆರವಣಿಗೆಯಲ್ಲಿ 40 ಕುಣಿತ ಬಜನಾ ತಂಡಗಳು ಭಾಗವಹಿಸುವುದು ವಿಶೇಷವಾಗಿದೆ ಶನಿವಾರ ಸಂಜೆ ಗಣೇಶ ವಿಗ್ರಹದ ಜಲ ಸ್ತಂಭನ ಕಾರ್ಯಕ್ರಮ ನಡೆಯಲಿದೆ.

ಈ ಕುರಿತು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ನಾರಾಯಣ ಮಣಿಯಾಣಿ ಮಾಧ್ಯಮಕ್ಕೆ ಮಾಹಿತಿ ನೀಡಿದರು.