ಕಾರ್ಕಳ: ಕೇಂದ್ರ ಲೋಕಸೇವಾ ಆಯೋಗ ನಡೆಸುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹುದ್ದೆಗೆ ನಡೆದ ಎರಡನೇ ಹಂತದ ಲಿಖಿತ ಪರೀಕ್ಷೆಯಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ 14 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಎಸ್.ಎಸ್.ಬಿ. ( ಸರ್ವಿಸ್ ಸೆಲೆಕ್ಷನ್ ಬೋರ್ಡ್ ) ಸಂದರ್ಶನಕ್ಕೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳಾದ ನಾಗದೇವ ಎಂ.ಜಿ, ಪ್ರಥಮ್ ತಮ್ಮಣ್ಣಗೌಡರ್, ನಿಶಾಂತ್ ಹೊನ್ನಾವರ, ನಮಿತ್ ಕೃಷ್ಣಮೂರ್ತಿ ಹೆಗ್ಡೆ, ಸಂವಿತ್ ಅಮಿತ್ ಗೋಕರ್ಣ, ಸುಕ್ಷಿತ್ ಗಿರೀಶ್ ಗೌಡ, ಅಭಿರಾಮ್ ಭಟ್ ಜಿ.ಪಿ, ಪ್ರಜ್ವಲ್ ಭಟ್, ಆರ್ಯ. ವಿ, ಸೃಜನಾ. ಎಸ್, ಯಜತ್ ಗೌಡ ಎಸ್.ಪಿ, ವಿಶ್ವೇಶ್ ಎನ್.ಎಚ್, ನಿನಾದ್ ರಾಜೇಶ್ ನಾಯ್ಕ್, ಅನುರಾಗ್ ಎಸ್. ಶಿರ್ಸಟ್ ತಮ್ಮ ಮೊದಲ ಪ್ರಯತ್ನದಲ್ಲೇ ಅತ್ಯುತ್ತಮ ಸಾಧನೆಗೈದಿದ್ದಾರೆ.
ಅಖಿಲ ಭಾರತ ಮಟ್ಟದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ತೇರ್ಗಡೆಗೊಂಡ 7,650 ವಿದ್ಯಾರ್ಥಿಗಳಲ್ಲಿ 14 ಜನ ಕ್ರಿಯೇಟಿವ್ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದು, ತೇರ್ಗಡೆಗೊಂಡ 500 ವಿದ್ಯಾರ್ಥಿನಿಯರಲ್ಲಿ ಒಬ್ಬರು ಕ್ರಿಯೇಟಿವ್ ಸಂಸ್ಥೆಯ ವಿದ್ಯಾರ್ಥಿನಿ ಎಂಬುದು ಶ್ಲಾಘನೀಯ ವಿಚಾರ.
ಎನ್. ಡಿ. ಎ. ದೇಶಮಟ್ಟದಲ್ಲಿ ನಡೆಯುವ ಅತ್ಯಂತ ಕ್ಲಿಷ್ಟಕರ ಪರೀಕ್ಷೆಯಾಗಿದ್ದು, ಇದನ್ನು 900 ಅಂಕಗಳಿಗೆ ನಡೆಸಲಾಗುತ್ತದೆ. 300 ಅಂಕಗಳಿಗೆ ಗಣಿತ ವಿಷಯವೇ ಇರುವುದರಿಂದ ಇದಕ್ಕೆ ಹೆಚ್ಚಿನ ಮಾರ್ಗದರ್ಶನದ ಅಗತ್ಯವಿರುತ್ತದೆ. ಕ್ರಿಯೇಟಿವ್ ಸಂಸ್ಥೆಯು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸೂಕ್ತ ಮಾರ್ಗದರ್ಶನ ನೀಡುವುದರ ಜೊತೆಗೆ, ಪ್ರತಿ ವರ್ಷವೂ ಗರಿಷ್ಠ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತೇರ್ಗಡೆ ಹೊಂದುತ್ತಿರುವುದು ಗಮನಾರ್ಹ.
ಸಾಧಕರನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಪರೀಕ್ಷಾ ಸಂಯೋಜಕರಾದ ಸುಮಂತ್ ದಾಮ್ಲೆ, ರಕ್ಷಿತ್ ಬಿ.ಎಸ್, ಶರತ್ ಕುಮಾರ್ ಹಾಗೂ ಎಲ್ಲಾ ಬೋಧಕ- ಬೋಧಕೇತರ ಸಿಬ್ಬಂದಿಗಳು ಶ್ಲಾಘಿಸಿ ಅಭಿನಂದಿಸಿದ್ದಾರೆ.