ಶಕ್ತಿಶಾಲಿ ಪಾಸ್‌ಪೋರ್ಟ್‌ನ ಹೊಸ 2024ರ ಸಮೀಕ್ಷೆ ಹೊರಬಂದಿದ್ದು ಭಾರತವು 80ನೇ ಸ್ಥಾನದಲ್ಲಿದೆ. ಭಾರತದ ಪಾಸ್‌ಪೋರ್ಟ್ ಮೂಲಕ ವೀಸಾ ಇಲ್ಲದೆ 62 ದೇಶಗಳಿಗೆ ಹೋಗಬಹುದು.

277 ದೇಶಗಳಲ್ಲಿ 194 ದೇಶಗಳಿಗೆ ವೀಸಾ ಇಲ್ಲದೆ ಹೋಗಲು ಸಾಧ್ಯವಾಗುವ ಪಾಸ್‌ಪೋರ್ಟ್ ಹೊಂದಿರುವ ಸಿಂಗಾಪುರ, ಜಪಾನ್, ಫ್ರಾನ್ಸ್, ಜರ್ಮನಿ, ಇಟೆಲಿ, ಸ್ಪೆಯಿನ್ ದೇಶಗಳು ಅತಿ ಶಕ್ತಿಶಾಲಿ ಪಾಸ್‌ಪೋರ್ಟ್ ಹೊಂದಿರುವ ಮೊದಲ ಸ್ಥಾನದಲ್ಲಿ ಇರುವ ದೇಶಗಳಾಗಿವೆ.
ದಕ್ಷಿಣ ಕೊರಿಯಾ, ಸ್ವೀಡನ್, ಫಿನ್ಲೆಂಡ್ ಎರಡನೆಯ ಸ್ಥಾನದಲ್ಲಿರುವ ಶಕ್ತಿಶಾಲಿ ಪಾಸ್‌ಪೋರ್ಟ್ ಹೊಂದಿರುವ ದೇಶಗಳಾಗಿವೆ. ಮೂರನೆಯ ಸ್ಥಾನ ಹಿಡಿದಿವೆ ಆಸ್ಟ್ರಿಯಾ, ಡೆನ್ಮಾರ್ಕ್, ಅಯರ್‌ಲ್ಯಾಂಡ್ ಮತ್ತು ನೆದರ್ಲ್ಯಾಂಡ್ಸ್ ದೇಶಗಳು. ಭಾರೀ ಜಿಗಿತ ಕಂಡು 11ನೇ ಸ್ಥಾನಕ್ಕೇರಿದೆ ಯುಎಇ. ಅಫ್ಘಾನಿಸ್ತಾನ ಕೊನೆಯ ಸ್ಥಾನದಲ್ಲಿದೆ.