ಮಂಗಳೂರಿನಿಂದ ನಾಪತ್ತೆಯಾಗಿದ್ದ ಪುತ್ತೂರು ಮೂಲದ ಚೈತ್ರಾ ಹೆಬ್ಬಾರ್ ಈಗ ಕತಾರ್‌ನಲ್ಲಿರುವುದು ಸ್ಪಷ್ಟಗೊಂಡಿದೆ. ಮಂಗಳೂರು ಹೊರ ವಲಯದಲ್ಲಿದ್ದ ಚೈತ್ರಾ ಹೆಬ್ಬಾರ್ ನಾಪತ್ತೆಯಾಗಿದ್ದರು. ಉಳ್ಳಾಲ ಪೋಲೀಸರಿಗೆ ಕತಾರ್‌ನಿಂದ ಎಕ್ಸ್ ಪೋಸ್ಟ್ ಮಾಡಿರುವ ಚೈತ್ರಾ ಅವರು ನನಗೆ ಪ್ರೀತಿಸುವ ಹಕ್ಕು ಇಲ್ಲವೇ ಎಂದು ಕೇಳಿದ್ದಾರೆ. ಹಾಗೆಯೇ ಬದುಕುವ ಹಕ್ಕಿಲ್ಲವೇ ಎಂದು ಕೂಡ ಪ್ರಶ್ನಿಸಿದ್ದಾರೆ.
ಚೈತ್ರಾ ಹೆಬ್ಬಾರ್ ಕತಾರ್‌ಗೆ ಹೋಗಲು ಸಹಕರಿಸಿದ ಮುಸ್ಲಿಂ ಯುವಕನೊಬ್ಬನನ್ನು ಪೋಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.