ಗುಜರಾತಿನಲ್ಲಿ ಐದು ವರುಷಗಳಲ್ಲಿ 41,621 ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದು, ಅವರನ್ನು ಸೂಳೆಗೇರಿಗೆ, ಬಲವಂತದ ಮದುವೆಗೆ ತಳ್ಳಿರುವರು ಎನ್ನಲಾಗಿದೆ.
ಮೋದಿಯವರು ಪ್ರಧಾನಿ ಆಗಿರುವ ಕೇಂದ್ರ ಸರಕಾರದ ಎನ್‌ಸಿಆರ್‌ಬಿ- ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಲೆಕ್ಕದಂತೆ 2016ರಲ್ಲಿ 7,015, 2017ರಲ್ಲಿ 7,712, 2018ರಲ್ಲಿ 9,246, 2019ರಲ್ಲಿ 9,283, 2020ರಲ್ಲಿ 8,290 ಎಂದು ಒಟ್ಟು 41,621 ಹೆಣ್ಣುಮಕ್ಕಳು ಗುಜರಾತಿನಿಂದ ನಾಪತ್ತೆಯಾಗಿದ್ದಾರೆ.
ಬಲವಂತವಾಗಿ ಅವರನ್ನು ಬೇರೆ ರಾಜ್ಯ ಮತ್ತು ದೇಶಗಳಲ್ಲಿ ಕಳ್ಳ ಮದುವೆಗೆ ಇಲ್ಲವೇ ವೇಶ್ಯಾ ವಾಟಿಕೆಗೆ ದೂಡಲಾಗಿದೆ ಎಂದು ಗುಜರಾತ್ ಮಾನವ ಹಕ್ಕುಗಳ ಮಂಡಳಿಯ ಸದಸ್ಯರು ಹಾಗೂ ಮಾಜೀ ಐಪಿಎಸ್ ಅಧಿಕಾರಿ ಸುಧೀರ್ ಸಿಂಹ ಹೇಳುತ್ತಾರೆ. ವಿಧಾನಸಭೆಯಲ್ಲಿ ನೀಡಿದ ಉತ್ತರದಂತೆ 2019-20ರ ಒಂದೇ ವರುಷದಲ್ಲಿ ವಡೋದರ ಒಂದರಲ್ಲಿಯೇ 4,722 ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ.