ಗ್ರಹಲಕ್ಷ್ಮಿ ಯೋಜನೆಯು ಇಂದಿನಿಂದ ಜೂಲೈ 19, 2023 ರಂದು ಪ್ರಾರಂಭಗೊಳ್ಳಲಿದೆ . ಈಗಾಗಲೇ ಘೋಷಿಸಿದ 5 ಗ್ಯಾರಂಟಿಗಳಲ್ಲಿ ಇದು ಮೂರನೇ ಯೋಜನೆಯಾಗಿದೆ. ಈಗಾಗಲೇ ಎರಡು ಯೋಜನೆಗಳು ಅನುಷ್ಠಾನಗೊಂಡಿವೆ. ಉಚಿತ ಬಸ್ ಪ್ರಯಾಣ ಹಾಗೂ ಗ್ರಹಜ್ಯೋತಿ ಯೋಜನೆಯಿಂದಾಗಿ ಮಹಿಳೆಯರು ಲಾಭವನ್ನು ಪಡೆದಿದ್ದಾರೆ.
ಇದೀಗ ಕರ್ನಾಟಕ ಕಾಂಗ್ರೆಸ್ ಸರಕಾರವು ಗ್ರಹಲಕ್ಷ್ಮಿ ಯೋಜನೆಯಡಿ ಪಡಿತರ ಕಾರ್ಡ್ ಹೊಂದಿದ ಕುಟುಂಬದ ಪ್ರತಿ ಯಜಮಾನಿಯಗೆ ಮಾಸಿಕ 2000/- ರೂ ಹಣ ವಿತರಣೆ ಮಾಡುವುದಾಗಿ ತಿಳಿಸಿದೆ. ಈ ಯೋಜನೆಯ ಲಾಭವನ್ನು ಪಡೆಯಲು ಮಹಿಳೆಯರು ತಮ್ಮ ಹತ್ತಿರದ ಕರ್ನಾಟಕ ವನ್, ಬೆಂಗಳೂರು ವನ್, ಗ್ರಾಮ ವನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿಯನ್ನು ಉಚಿತವಾಗಿ ನೋಂದಾಯಿಸಕೊಳ್ಳಬಹುದು ಎಂದು ಕರ್ನಾಟಕದ ಕಾಂಗ್ರೆಸ್ ಪಕ್ಷವು ತಿಳಿಸಿದೆ. ನೋಂದಣಿಗೆ ಬ್ಯಾಂಕ್ ಪಾಸ್ ಬುಕ್ ಪ್ರತಿ, ಪಡಿತರ ಕಾರ್ಡ್ ಸಂಖ್ಯೆ, ಮನೆಯ ಯಜಮಾನಿಯ ಮತ್ತು ಪತಿಯ ಆಧಾರ್ ಕಾರ್ಡ್ ಪ್ರತಿ ಹಾಗೂ ಮೊಬೈಲ್ ಸಂಖ್ಯೆ ಅಗತ್ಯವಿರುತ್ತದೆ ಎಂದು ತಿಳಿಸಿದ್ದಾರೆ.