ರಾಯಚೂರು ಜಿಲ್ಲೆಯ ಮಸ್ಕಿ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನದ ಬಿಸಿಲಿನಲ್ಲಿ ಒಬ್ಬರು ಬಳಲಿ ಸಾವು ಕಂಡಿದ್ದಾರೆ.  ಈ ವರುಷದ ಮೊದಲ ಬಿಸಿಲ ಸಾವು ಎನ್ನಲಾಗಿದೆ. ಸತ್ತವರು ಮಸ್ಕಿ ತಾಲೂಕಿನ ಆನಂದಕಲ್ಲ ಗ್ರಾಮದ 62ರ ಕೃಷ್ಣಪ್ಪ ಬಳ್ಳಾರೆಪ್ಪ ಎಂದು ತಿಳಿದು ಬಂದಿದೆ. ಜನರ ಹೇಳಿಕೆಯ ಹೊರತಾಗಿ ಇದು ಬಿಸಿಲಿನ ಸಾವು ಎಂದು ಸ್ಪಷ್ಟಗೊಂಡಿಲ್ಲ ಎಂದಿದ್ದಾರೆ ಪೋಲೀಸರು. 

ರಕ್ತದೊತ್ತಡದ ಕೃಷ್ಣಪ್ಪ ಆಸ್ಪತ್ರೆಗೆ ಬಂದಿದ್ದರು. ಮಧ್ಯಾಹ್ನದ ಬಿಸಿಲಿನಲ್ಲಿ ವಾಪಾಸು ಹಳ್ಳಿಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದವರು ಹಾಗೆಯೇ ತೀವ್ರ ಬೆವತು ಕುಸಿದು ಸಾವಿಗೀಡಾಗಿರುವುದು ತಿಳಿದು ಬಂದಿದೆ.