ದೆಹಲಿ: ಭಾರತ ರಾಷ್ಟ್ರದ ಪ್ರಧಾನಿಯಾಗಿ ಮೂರನೇ ಬಾರಿ ಆಯ್ಕೆಯಾದ ನರೇಂದ್ರ ಮೋದಿ ಅವರ ಕ್ಯಾಬಿನೆಟ್‍ನಲ್ಲಿ ಸಂಪುಟ ದರ್ಜೆ ಸಚಿವರಾಗಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆಯ ಸಚಿವರಾಗಿ ಆಯ್ಕೆಯಾದ, ಎನ್‍ಡಿಎ ಸರ್ಕಾರದ ಮೈತ್ರಿ ಕೂಟವಾದ ಜೆಡಿಎಸ್ ಪಕ್ಷದ ಧುರೀಣ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಇವರನ್ನು ದೆಹಲಿ ಇಲಾಖೆಯ ಕಾರ್ಯಾಲಯದಲ್ಲಿ ಕರ್ನಾಟಕದ ಮಾಜಿ ಸಚಿವ ಡಾ. ಕೆ.ಸಿ ನಾರಾಯಣ ಗೌಡ ಭೇಟಿಯಾಗಿ ಹೂಗುಚ್ಪವನ್ನಿತ್ತು ಅಭಿನಂದಿಸಿದರು. 

ಈ ಸಂದರ್ಭದಲ್ಲಿ ಒಕ್ಕಲಿಗರ ಸಂಘ ಮಹಾರಾಷ್ಟ್ರ ಇದರ ನಿಕಟಪೂರ್ವ ಅಧ್ಯಕ್ಷ ಜಿತೇಂದ್ರ ಜೆ. ಗೌಡ, ಉಪಾಧ್ಯಕ್ಷ ಸುರೇಶ್ ಗೌಡ, ಗೌ| ಪ್ರ. ಕಾರ್ಯದರ್ಶಿ ಗಂಗಾಧರ ಎನ್.ಗೌಡ ಉಪಸ್ಥಿತರಿದ್ದು ಶುಭಾರೈಸಿದರು.