ಮಾಜೀ ಮಂತ್ರಿ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಸೇರಿ ಐವರ ವಿರುದ್ಧ ಬೆಂಗಳೂರಿನ ವಿವಿಪುರಂ ಪೋಲೀಸು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಬೆಂಗಳೂರು ಚಾಮರಾಜಪೇಟೆಯ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನಿಂದ ಗೋಕಾಕದ ಸೌಭಾಗ್ಯಲಕ್ಷ್ಮಿ ಶುಗರ್ಸ್‌ಗೆ ರಮೇಶ್ ಜಾರಕಿಹೊಳಿ 400 ಕೋಟಿ ರೂಪಾಯಿಯಷ್ಟು ಸಾಲ ಪಡೆದಿದ್ದರು. ಅದು ಒಟ್ಟು ಸಾಲ 439.7 ಕೋಟಿ ರೂಪಾಯಿ ಆಗಿದೆ. ಈ ನಡುವೆ ಮಾಹಿತಿ ನೀಡದೆಯೇ ವಂಚಿಸಲು ಶುಗರ್ಸ್‌ನ ಆಡಳಿತ ಮಂಡಳಿಯಿಂದ ಹೊರಗೆ ಹೋಗಿದ್ದರು. ಅಪೆಕ್ಸ್ ಬ್ಯಾಂಕ್ ಮ್ಯಾನೇಜರ್ ರಾಜಣ್ಣ ನೀಡಿದ ದೂರಿನ ಮೇಲೆ ಪೋಲೀಸು ಮೊಕದ್ದಮೆ ಹೂಡಲಾಗಿದೆ. ರಮೇಶ್ ಜೊತೆಗೆ ವಸಂತ ಪಾಟೀಲ್, ಶಂಕರ್ ಪಾವಡೆ ಮತ್ತು ಶುಗರ್ಸ್‌ನ ಆಡಳಿತಾಧಿಕಾರಿ ವಿರುದ್ಧ ಎಫ್‌ಐಆರ್ ಹಾಕಲಾಗಿದೆ.