ನನ್ನ ಗಡಿಪಾರು ಮಾಡುವುದಕ್ಕೆ ಮೊದಲು ನಿಮ್ಮ ಗಡಿಪಾರು ತಪ್ಪಿಸಿಕೊಳ್ಳಿ ಎಂದು ಮಾಜೀ ಸಚಿವ ಬಿ. ಕೆ. ಹರಿಪ್ರಸಾದ್ ಅವರು ಮಾಜೀ ಮಂತ್ರಿ ಬಿ. ಶ್ರೀರಾಮುಲುಗೆ ತಿರುಗೇಟು ನೀಡಿದರು.

ನೀವು ಚುನಾವಣಾ ಆಯೋಗಕ್ಕೆ ನೀಡಿರುವ ಮಾಹಿತಿಯಂತೆ ಹಲವು ಗಂಭೀರ ಅಪರಾಧಗಳ ಪ್ರಕರಣ ಎದುರಿಸುತ್ತಿದ್ದೀರಿ. ನಿಮ್ಮ ಗೃಹ ಮಂತ್ರಿ ಅಮಿತ್ ಶಾ ಅವರು ಕೋರ್ಟಿನಿಂದ ಗುಜರಾತ್ ಪ್ರವೇಶಿಸದಂತೆ ಗಡಿಪಾರು ಆಗಿದ್ದುದನ್ನು ಮರೆಯಬೇಡಿ. ನೀವು ಕಳ್ಳ ಗಣಿಗಾರಿಕೆ ಮಾಡಿ, ತೆರಿಗೆ ವಂಚಿಸಿ ದೇಶದ್ರೋಹ ಮಾಡಿದವರು ಎಂದು ವಿಧಾನ ಪರಿಷತ್ ಸದಸ್ಯರಾದ ಹರಿಪ್ರಸಾದ್‌ರು ಬಿ. ಶ್ರೀರಾಮುಲುಗೆ ಎಚ್ಚರಿಕೆ ನೀಡಿದರು.