ಮಂಗಳೂರು: ರೋಮನ್ ಮತ್ತು ಕ್ಯಾಥರೀನ್ ಲೋಬೋ ದೃಷ್ಟಿಮಾಂದ್ಯ ಮಕ್ಕಳ ವಸತಿಯುತ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಜನವರಿ 4 ಲೂಯಿ ಬ್ರೈಲ್ ರವರ ಜನುಮ ದಿನದಂದು ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು.

ಸೇವಾ ಭಾರತಿ ಟ್ರಸ್ಟಿಗಳು ಮತ್ತು ರೋಮನ್ ಮತ್ತು ಕ್ಯಾಥರೀನ್ ಲೋಬೋ ಚ್ಯಾರಿಟಿ ಹೋಂ ನವರು ಭಾಗವಹಿಸಿದ್ದರು . ಅಮಿತಾ ಡಿಸೋಜ ರನ್ನರ್ಸ್ ಕ್ಲಬ್ ಮಂಗಳೂರಿನ ಅಧ್ಯಕ್ಷೆ ಇವರು ಮುಖ್ಯ ಅತಿಥಿಗಳಾಗಿ ಹಾಗೂ ಪ್ರದೀಪ್ ಮಿಡ್ ಟೌನ್ ರೋಟರಿ ಕ್ಲಬ್ ಮಂಗಳೂರಿನ ಅದ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಗಾಯತ್ರಿಯವರು ನೆರವೇರಿಸಿದರು. ಅತಿಥಿಗಳನ್ನು ದಿವ್ಯ ಭಟ್ ಅವರು ಸ್ವಾಗತಿಸಿದರು. ರೇಣುಕಾ ದೇವಿ ಅವರು ಶಾಲೆಯ ವಾರ್ಷಿಕ ವರದಿಯನ್ನು ಓದಿದರು.
ರಘುರಾಮ್ ಅವರು ವಂದನಾರ್ಪಣೆಯನ್ನು ಮಾಡಿದರು. ನಂತರ ನಮ್ಮ ಶಾಲೆಯ ಮಕ್ಕಳಿಂದ ಸಾಸ್ಕೃತಿಕ ಕಾರ್ಯಕ್ರಮಗಳಾದ ಮಹಿಷಾಸುರ ಮರ್ಧಿನಿ ನಾಟಕ ,ನೃತ್ಯ , ಹಾಡಿನ ಮೂಲಕ ಎಲ್ಲರನ್ನೂ ರಂಜಿಸಲಾಯಿತು.