ಲೊರೆಟ್ಟೊ: ಯೇಸುಕ್ರಿಸ್ತರ ಪುನರುತ್ಥಾನದ ಹಬ್ಬವಾದ "ಈಸ್ಟರ್"ನ್ನು ಲೊರೆಟ್ಟೊ ಮಾತಾ ಚರ್ಚ್ ನಲ್ಲಿ ಬಹಳ ಭಕ್ತಿ, ಶ್ರದ್ಧೆ, ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.  ಪ್ರಧಾನ  ಗುರುಗಳಾಗಿ , ವಂ| ಜೇಸನ್ ಮೊನಿಸ್, ಚರ್ಚ್ ಧರ್ಮಗುರುಗಳಾದ ವಂ| ಸ್ವಾಮಿ ಫ್ರಾನ್ಸಿಸ್ಕಾಸ್ತಾ  ನೆರೆದಿದ್ದ ನೂರಾರು ಭಕ್ತಾದಿಗಳೊಂದಿಗೆ ಬಲಿಪೂಜೆ ಅರ್ಪಿಸಿದರು. 

ಚರ್ಚ್ ಧರ್ಮಗುರುಗಳಾದ ವಂ.ಫ್ರ್ರಾನ್ಸಿಸ್ ಕ್ರಾಸ್ತಾ ರವರು ಯೇಸು  ಕ್ರಿಸ್ತರ ಪುನರುತ್ಥಾನದ ಮಹತ್ವದ ಬಗ್ಗೆ ಪ್ರವಚನ ನೀಡಿದರು. ಪವಿತ್ರ ವಾರದ ಎಲ್ಲಾ ಪ್ರಾರ್ಥನಾ ವಿಧಿಯನ್ನು ಚರ್ಚ್ ಪಾಲನಾ ಮಂಡಳಿ ಮೆಲುಸ್ತುವರಿಯನ್ನು ವಹಿಸಿತ್ತು.   ಚರ್ಚ್ ಆವರಣದಲ್ಲಿ ದೊಡ್ಡ  ಎಲ್ ಇ ಡಿ ಪರದೆಯನ್ನೂ ಅಳವಡಿಸಲಾಗಿತ್ತು.

ಸಂಬ್ರಮಾಚರಣೆಗೆ ಸಹಕರಿಸಿದ ಕೊಡುಗೈ ದಾನಿಗಳನ್ನು ಧರ್ಮಗುರುಗಳು  ಮೇಣದ ಬತ್ತಿಗಳನ್ನು ನೀಡಿ ಗೌರವಿಸಿದರು. ಸಹಕರಿಸಿದ  ಎಲ್ಲರನ್ನೂ ಕೃತಜ್ಞತ ಪೂರ್ವಕವಾಗಿ ಸ್ಮರಿಸಿದರು. ಬಲಿಪೂಜೆಗೆ ಹಾಜರಿದ್ದ ಭಕ್ತಾದಿಗಳಿಗೆ ಫಲಾಹಾರ ನೀಡಲಾಯಿತು.