ಮಂಗಳೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ್ ದಕ್ಷಿಣ ಕನ್ನಡ ಜಿಲ್ಲೆ,ಕೊಣಾಜೆ ಗ್ರಾಮ ಪಂಚಾಯತ್, ಸಮರ್ಪಣಾ ಪರಿವಾರ ಟ್ರಸ್ಟ್‍ಮಂಗಳೂರು ಹಾಗೂ ಜಿಲ್ಲಾ ಯುವಜನ ಒಕ್ಕೂಟ, ದಕ್ಷಿಣ ಕನ್ನಡ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ನವೆಂಬರ್ 16 ರಂದು ಬೆಳಿಗ್ಗೆ 9 ಗಂಟೆಗೆ ಕೊಣಾಜೆ ಅಸೈಗೋಳಿ ಬಂಟರ ಭವನದಲ್ಲಿ ಆಯೋಜಿಸಲಾಗಿದೆ.
ಭಾಗವಹಿಸಲು ಇಚ್ಚಿಸುವ 15 ರಿಂದ 29 ವರ್ಷ ವಯೋಮಿತಿಯ ಸ್ಪರ್ಧಾಳುಗಳು ನವೆಂಬರ್ 16 ರಂದು ಬೆಳಿಗ್ಗೆ 9ಗಂಟೆಯೊಳಗೆ ಅಸೈಗೋಳಿಬಂಟರ ಭವನದಲ್ಲಿ ವರದಿ ಮಾಡಿಕೊಳ್ಳಬೇಕು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಯುವಜನತೆ, ಯುವಕ/ಯುವತಿ ಸಂಘಗಳು, ಕಾಲೇಜು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಭಾಗವಹಿಸಬೇಕು. ಜನ್ಮ ದಿನಾಂಕ ದೃಢೀಕರಣ ದಾಖಲೆಯನ್ನು ತಪ್ಪದೇ ಹಾಜರುಪಡಿಸಬೇಕು. ಭಾಗವಹಿಸುವವರಿಗೆ ಪ್ರಯಾಣಭತ್ಯೆಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗತ್ತದೆ. ಆದ್ದರಿಂದ ತಪ್ಪದೇ ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಯನ್ನು ತರಬೇಕು.
ಹೆಚ್ಚಿನ ಮಾಹಿತಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರನ್ನು (ದೂರವಾಣಿ ಸಂಖ್ಯೆ-0824-2451264/ಅಧೀಕ್ಷಕರು ದೂ.ಸಂ 8105100781 ಅಥವಾ 7899266697 ) ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.