ಕಾರ್ಕಳ : ಸಿಸ್ಟೆರ್ ಡೊನೇಲ್ದಾ ಪಾಯಸ್ ರವರು ಪ್ರಾರಂಬಿಸಿದ ಜೀವನ್ ವೆಲ್‌ಫೇರ್ ಟ್ರಸ್ಟ್, ಅರುಣೋದಯ ವಿಶೇಷ ಶಾಲೆಯ 25ನೇ ವರ್ಷದ ಬೆಳ್ಳಿ ಹಬ್ಬದ ಪ್ರಯುಕ್ತ "ಅರುಣ ಸಂಭ್ರಮ” ಕಾರ್ಯಕ್ರಮವು ಕಾರ್ಕಳದ ಪೊಲೀಸ್ ಸ್ಟೇಷನ್ ಬಳಿಯ ಅರುಣೋದಯ ವಿಶೇಷ ಶಾಲೆಯಲ್ಲಿ ವಿಜೃಂಭಣೆಯಿಂದ ನಡೆಯಿತು. 

ರಜತ ಮಹೋತ್ಸವದ ಬೆಳಗ್ಗಿನ ಕಾರ್ಯಕ್ರಮವನ್ನುಜೀವನ್ ವೆಲ್‌ಫೇರ್ ಟ್ರಸ್ಟ್ ನ ಟ್ರಸ್ಟಿ ಜೆಸಿಂತಾ ಸುನಿಲ್ ಪಾಯ್ಸ್ರವರು ಧ್ವಜಾರೋಹಣವನ್ನು  ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಸಭಾ ಕಾರ್ಯಕ್ರಮವನ್ನು ಕ್ರೈಸ್ಟ್ ಕಿಂಗ್ ಚರ್ಚ್‌ನ ಸಹಾಯಕ ಧರ್ಮಗುರುಗಳಾದ ರೆ. ಫಾ. ಅವಿನಾಶ್ ರವರು ದೀಪಬೆಳಗಿಸುವ ಮೂಲಕ ಉದ್ಘಾಟಸಿ ಆಶೀರ್ವಚನ ನೀಡಿದರು. 

25 ವರ್ಷವನ್ನು ಪೂರೈಸಿರುವ ಅರುಣೋದಯ ವಿಶೇಷ ಶಾಲೆಯ "ಅರುಣ ಸಂಭ್ರಮ" ಎಂಬ ಸ್ಮರಣ ಸಂಚಿಕೆಯನ್ನು ಕಾಂಗ್ರೆಸ್ ಮುಖಂಡ, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಇವರು ಬಿಡುಗಡೆಗೊಳಿಸಿ ಸಿಸ್ಟೆರ್ ಡೊನೇಲ್ದಾ ಪಾಯಸ್ ರವರು ತಮ್ಮ ಜೀವನವನ್ನೇ ವಿಶೇಷ ಮಕ್ಕಳಿಗಾಗಿ ಮುಡುಪಾಗಿಟ್ಟಿದ್ದರು. ತನ್ನ ಜೀವಿತ ಕಾಲದ ದುಡಿಮೆ ಹಾಗೂ ಸಮಯವನ್ನು ವಿಶೇಷ ಮಕ್ಕಳಿಗಾಗಿ ವಿನಿಯೋಗಿಸಿದ್ದು ಸದಾ ಪ್ರೀತಿಯ ಚಿಲುಮೆ ಯಾಗಿದ್ದರು ಅವರ ಸೇವೆ ಪ್ರಶಂಶನೀಯ ಎಂದರು

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ  ರತ್ನ ಉದ್ಯಮಿ, ಉದ್ಯಮಿ, ದಾನಿ ಶಾಲೂಮ್ ಎಂಟರ್ ಪ್ರೈಸಸ್ ಸುರತ್ಕಲ್ ಮಾಲಕ ಕಿರಣ್ ಜೋಯ್ ಮಾಳ,  ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧಕ್ಷರಾದ ಎಮ್.ಎ. ಗಫೂರ್‌ರವರು  ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು  

ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್, ಜೀವನ್ ವೆಲ್‌ಫೇರ್ ಟ್ರಸ್ಟ್ ನ ಆಡಳಿತ ಮಂಡಳಿಯ ಕಾರ್ಯದರ್ಶಿಯಾದ  ಪ್ರೆಸಿಲ್ಲಾ ಪಿರೇರಾ, ಖಜಾಂಚಿಯಾದ  ನೋವೆಲ್ ಡಿಸಿಲ್ವಾ, ಸದಸ್ಯರುಗಳಾದ ಜಾನ್ ಅಜಯ್ ಪಾಯ್ಸ್,  ಸುನಿಲ್ ಪಾಯ್ಸ್, ಅನಿತಾ ಸಿರಿಲ್ ಲಸ್ರಾದೋ,  ಗ್ಲಾಡಿಸ್ ಸಲ್ದಾನ್ಹಾ, ವೇದಿಕೆಯಲ್ಲಿ ಉಪಸ್ಥಿತರಿದ್ದರು 

ವಿಕಲಚೇತನರ ಕ್ಷೇತ್ರದಲ್ಲಿ ಸೇವೆಗೈದ  ನಿರಂಜನ್ ಭಟ್ ರವರಿಗೆ, ವಿಶೇಷ ಚೇತನರಾಗಿದ್ದುಕೊಂಡು ಸ್ವಂತ ಉದ್ಯಮ ನಡೆಸುತಿರುವ ಅನಿಲ್ ಕಾಮತ್ , ಸಮಾಜ ಸೇವೆಯ ಮೂಲಕ ಯಶಸ್ಸು ಕಂಡಿರುವ ರಕ್ತದಾನಿ,  ಮೊಹಮ್ಮದ್ ಶರೀಫ್, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅರುಣೋದಯ ವಿಶೇಷ ಶಾಲೆಯ ವಿದ್ಯಾರ್ಥಿ  ನಿಶಾಂತ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಜೀವನ್ ವೆಲ್‌ಫೇರ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿಯಾದ ಜೆಸಿಂತಾ ಡಿಮೆಲ್ಲೋ ರವರು ಸ್ವಾಗತಿಸಿ. ಮುಖ್ಯೋಪಾಧ್ಯಾಯ  ಹನುಮಂತಪ್ಪನವರು ಶಾಲಾ ವರದಿಯನ್ನು ಓದಿದರು. ಅಲ್ವಿರಾ ರೇಷ್ಮಾ ಡಿ'ಸೋಜಾ ಕಾರ್ಯಕ್ರಮದ ನಿರೂಪಿಸಿ ಅನಿತಾ ಸಿರಿಲ್ ಲಸ್ಮಾದೋ ವಂದಿಸಿದರು

ಬೆಳ್ಳಿ ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ನಡೆಸಲಾದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. 25 ವರ್ಷದಲ್ಲಿ ಅರುಣೋದಯ ವಿಶೇಷ ಶಾಲೆಯಲ್ಲಿ ಕಲಿತು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಬರೆದು ಉತ್ತೀರ್ಣರಾದ ಮಕ್ಕಳಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 

ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು, ಶಾಲಾ ಮಕ್ಕಳಿಂದ ಅಮ್ಮನ ಪ್ರೀತಿಯ ನೃತ್ಯ, ಕವಾಯತು ಮತ್ತು ಜೈ ಹೋ ನೃತ್ಯಗಳನ್ನು, ಆಡಳಿತ ಮಂಡಳಿ ಮತ್ತು ಸಿಬ್ಬಂದಿಯವರಿಂದ ಅರುಣೋದಯ ಬೆಳೆದು ಬಂದ ಕಿರು ನಾಟಕವನ್ನು, ಡಿ.ಪಿ ತಂಡದವರಿಂದ 2 ನೃತ್ಯಗಳನ್ನು ಪ್ರದರ್ಶಿಸಲಾಯಿತು. ಕೊನೆಗೆ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು