ಮೂಡುಬಿದ್ರೆ: ನಗರದ ಪ್ರತಿಷ್ಠಿತ ರೋಟರಿ ವಿದ್ಯಾ ಸಂಸ್ಥೆಯಲ್ಲಿ ನವೆಂಬರ್ 12 ರಂದು ಶಾಲಾ ವಾರ್ಷಿಕ ಕ್ರೀಡೋತ್ಸವವನ್ನು ಅತ್ಯಂತ ಸಂಭ್ರಮದಿಂದ ಯಶಸ್ವಿಯಾಗಿ ನಡೆಸಲಾಯಿತು.  ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳ ಪೋಷಕರ ಮತ್ತು ಶಿಕ್ಷಕರ ಉತ್ಸಾಹದ ಭಾಗವಹಿಸುವಿಕೆ ಕ್ರೀಡಾಕೂಟಕ್ಕೆ ಸಾಕ್ಷಿಯಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹೇಮಂತ ಕುಮಾರ್ ಘಟ್ಟಿ, ಬ್ರಾಂಚ್ ಮ್ಯಾನೇಜರ್ ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಮೂಡಬಿದ್ರೆ ,  ಡಾl ರೂಪಾ ಕಾಮತ್ ಆಯುರ್ವೇದ ಕನ್ಸಲ್ಟೆಂಟ್ ಮತ್ತು ಫ್ರೀ ಲೆನ್ಸ್  ಲೀಂಪೆಡೆಮಾ ಸ್ಪೆಷಲಿಸ್ಟ್, ಆಗಮಿಸಿದ್ದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ  ನಾರಾಯಣ ಪಿ ಎಂ ಮತ್ತು  ಸಿಬಿಎಸ್ ಇ  ಹಾಗೂ ಪಿ ಯು ಸಿ ವಿಭಾಗದ  ಸಂಚಾಲಕರಾದ ಜೆ. ಡಬ್ಲೂ ಪಿಂಟೋ, ರೋಟರಿ ಆಡಳಿತ ಮಂಡಳಿಯ ಸದಸ್ಯರಾದ ಅಬ್ದುಲ್ ರವೂಫ್ ಮತ್ತು ನಾಗರಾಜ್. ಬಿ  , ರೋಟರಿ ವಿದ್ಯಾ ಸಂಸ್ಥೆಯ ಮೂರು ವಿಭಾಗದ ಮುಖ್ಯಸ್ಥರುಗಳಾದ ತಿಲಕಾ ಅನಂತವೀರ ಜೈನ್ ,  ರವಿ ಕುಮಾರ್ ಮತ್ತು  ಲಕ್ಷ್ಮೀ  ಮರಾಠೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬೆಳಿಗ್ಗೆ ಸಮಯ 9:30 ಕ್ಕೆ ಸರಿಯಾಗಿ ನಡೆದ   ವಿದ್ಯಾರ್ಥಿಗಳ ಪಥಸಂಚಲನ ಕಾರ್ಯಕ್ರಮ ಶಿಸ್ತು ಮತ್ತು ಸಮನ್ವಯತೆಯನ್ನು ಪ್ರತಿಬಿಂಬಿಸಿತು.  ಕು.ನಿಹಾರಿಕ ಎನ್ , ಕ್ರೀಡಾ ಕಾರ್ಯದರ್ಶಿ ಕಾಲೇಜು ವಿಭಾಗ ಅವರು ಸಹ ಕ್ರೀಡಾಪಟುಗಳೊಂದಿಗೆ ಹೊತ್ತು ತಂದ ಕ್ರೀಡಾ ಜ್ಯೋತಿಯಿಂದ ಮುಖ್ಯ ಅತಿಥಿ ಡಾ. ರೂಪಾ ಕಾಮತ್ ಕ್ರೀಡಾಕೂಟವನ್ನು ಉದ್ಘಾಟಿಸಿ  "ಜೀವನ ಕೌಶಲ್ಯಗಳನ್ನು ಬೆಳೆಸಲು ಮತ್ತು ಆತ್ಮ ವಿಶ್ವಾಸಗಳನ್ನು ವೃದ್ಧಿಸಲು ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸಬೇಕು. ಸದೃಡ ದೇಹವು ಸುಸ್ಥಿರ ಮನಸ್ಸಿಗೆ ಪ್ರೇರಕವಾಗಿದೆ. ಕ್ರೀಡೆಯಿಂದ ಉತ್ತಮ ದೇಹ‌ ಹಾಗೂ ಮನಸ್ಸನ್ನು

ಪಡೆಯಲು ಸಾಧ್ಯ ಎಂದು " ಶರೀರಂ ಆಧ್ಯಂ  ಕಲುಧರ್ಮ ಸಾಧನಂ " ಎಂಬ ಆಯುರ್ವೇದದ ಕುಮಾರ ಸಂಭವದ   ಶ್ಲೋಕದೊಂದಿಗೆ ಕ್ರೀಡಾಪಟುಗಳಿಗೆ ಕ್ರೀಡೆಯ ಮಹತ್ವವನ್ನು ವಿವರಿಸಿ ಶುಭ ಹಾರೈಸಿದರು

ರೋಟರಿ ಸಂಸ್ಥೆಯ ಅಧ್ಯಕ್ಷರಾದ  ನಾರಾಯಣ್ ಪಿ. ಎಂ ಅವರು ಶಾಲಾ ಧ್ವಜದ ಧ್ವಜಾರೋಹಣ  ಮಾಡಿ , "ಕ್ರೀಡೆಯು ಕೇವಲ  ದೈಹಿಕ ವ್ಯಾಯಾಮವಲ್ಲ , ಬದಲಾಗಿ ಇದು ಶಿಸ್ತು , ಸಂಘಟನೆ  ಹಾಗೂ  ಕ್ರೀಡಾ ಮನೋಭಾವವನ್ನು ಪ್ರೇರೇಪಿಸುತ್ತದೆ ಎಂದರು.

ಮುಖ್ಯ ಅಥಿತಿ ಹೇಮಂತ್ ಕುಮಾರ್ ಘಟ್ಟಿ , "ಕ್ರೀಡಾಪಟುಗಳನ್ನು ಕಂಡು ಅವರ ಶಾಲಾದಿನಗಳನ್ನು ನೆನಪಿಸಿಕೊಂಡರು. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಆಟದ ಕಡೆಗೆ ಒಲವು ಕಡಿಮೆಯಾಗಿದೆ. ಸೋಲು - ಗೆಲುವನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಲು ಕರೆನೀಡಿ ರೋಟರಿ ವಿದ್ಯಾಸಂಸ್ಥೆಯು ಕ್ರೀಡೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ" ಎಂದು ಹಾರೈಸಿದರು. 

ಸಿಬಿ ಎಸ್ ಇ ಮತ್ತು ಪಿ ಯು ಸಿ ಯ ಸಂಚಾಲಕರಾದ ರೊ ಜೆ. ಡಬ್ಲೂ ಪಿಂಟೋ ಅವರು ತಮ್ಮ ಮಾತಿನಲ್ಲಿ "ಇಂದಿನ ಈ ವೇದಿಕೆ ಮಕ್ಕಳ ಪ್ರತಿಭೆ ಮತ್ತು ಉತ್ಸಾಹವನ್ನು  ಪ್ರದರ್ಶಿಸಲು ದೊರಕಿರುವ ಅವಕಾಶ ಎನ್ನುತ್ತಾ ಮಕ್ಕಳ ಶಿಸ್ತು ಹಾಗೂ  ಸುಂದರವಾಗಿ‌ ಮೂಡಿಬಂದ ಕಾರ್ಯಕ್ರಮದ ಯೋಜನೆಯನ್ನು ಪ್ರಶಂಸಿದರು." 



ಸಂಜೆ ನಡೆದ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಡಾ. ವಸಂತ್ ಮಕ್ಕಳ ತಜ್ಞರು ಹಾಗೂ ರೋಟರಿ ಶಾಲೆಯ ಹಳೆಯ ವಿದ್ಯಾರ್ಥಿಯಾದ  ವಿನ್ಯಾಸ್ ಆಗಮಿಸಿದ್ದರು. 

ಕ್ರೀಡಾಕೂಟದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ ಚಾಂಪಿಯನ್ ಪಡೆದ ಕ್ರೀಡಾಳುಗಳನ್ನು ಗೌರವಿಸಲಾಯಿತು. 


ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ವ್ಯವಸ್ಥಾಪಕರು, ಆಡಳಿತ ಅಧಿಕಾರಿ ,ಹಾಗೂ ಎಲ್ಲಾ ವಿಭಾಗದ ಸಂಯೋಜಕರು ಹಾಗೂ ಶಿಕ್ಷಕರು ,ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು.

ಕೇಂದ್ರೀಯ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಲಕ್ಷ್ಮಿ ಮರಾಠೆ ಸ್ವಾಗತಿಸಿ,ಕೇಂದ್ರೀಯ ಶಾಲೆಯ ಶಿಕ್ಷಕಿ  ಶ್ರೀಮತಿ ಮಮತಾ ಎಸ್

ಹಾಗೂ ಉಪನ್ಯಾಸಕಿ 

ಶ್ರೀಮತಿ ಸುಷ್ಮಾ ಬಿ ಆರ್  ಕಾರ್ಯಕ್ರಮ ನಿರೂಪಿಸಿ,‌ಉಪನ್ಯಾಸಕಿ ವೈಶಾಲಿ ಧನ್ಯವಾದ ಸಮರ್ಪಣೆಗೈದರು.

ಈ ಕ್ರೀಡಾಕೂಟವು ಪೋಷಕರ , ವಿದ್ಯಾರ್ಥಿಗಳ ಹಳೆ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಭಾಗವಹಿಸುವಿಕೆ ಮತ್ತು ವಿಶೇಷವಾಗಿ ಎಲ್ಲ ದೈಹಿಕ ಶಿಕ್ಷಕರ ನೇತೃತ್ವದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿಬಂದು ಶಾಲಾ ಧ್ವಜದ ಅವರೋಹಣ ಹಾಗೂ ರಾಷ್ಟ ಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.