ಬಡಗಬೆಳ್ಳೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ದ್ಯೋತಕವಾಗಿ ನಿರ್ಮಿಸಿರುವ ಮೂರು ತರಗತಿ ಕೋಣೆಗಳ ಪೈಕಿ ಒಂದು ತರಗತಿ ಕೋಣೆಗೆ ಶಾಲಾ ಸಂಚಾಲಕರ ಕೋರಿಕೆಯ ಮೇರೆಗೆ ಬಂಟ್ವಾಳ ರೋಟರಿ ಕ್ಲಬ್‌ನ ಅಧ್ಯಕ್ಷರಾದ ಕೆ. ನಾರಾಯಣ ಹೆಗ್ಡೆ ಇವರ ಮುಂದಾಳತ್ವದಲ್ಲಿ ರೂ. 1,30,000/- ವೆಚ್ಚದಲ್ಲಿ ರೋಟರಿ ಕ್ಲಬ್ ಬಂಟ್ವಾಳ ವತಿಯಿಂದ ತಯಾರಿಸಿ ಕೊಟ್ಟ ಡೆಸ್ಕ್, ಬೆಂಚ್, ಟೇಬಲ್, ಚೆಯರ್ ಇತ್ಯಾದಿಗಳನ್ನು ಶಾಲೆಗೆ ಹಸ್ತಾಂತರಿಸುವ ಕಾರ್ಯಕ್ರಮವು ದಿನಾಂಕ: 30-06-2021ನೇ ಬುಧವಾರ ಬೆಳಿಗ್ಗೆ 10.00 ಗಂಟೆಗೆ ಸರಿಯಾಗಿ ಬಡಗಬೆಳ್ಳೂರು ಶಾಲೆಯಲ್ಲಿ ನಡೆಯಿತು, ಈ ಕಾರ್ಯಕ್ರಮದಲ್ಲಿ ಬಂಟ್ವಾಳ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷರು ಹಾಗೂ ನಿಯೋಜಿತ ಜಿಲ್ಲಾ ಗವರ್ನರ್‌ರಾದ ಪ್ರಕಾಶ್ ಕಾರಂತ್ ನರಿಕೊ0ಬು, ರೋಟರಿ ಕ್ಲಬ್ ಬಂಟ್ವಾಳ ಇದರ ಕಾರ್ಯದರ್ಶಿಯಾದ ವಾಣಿ ಪ್ರಕಾಶ್ ಕಾರಂತ್, ಶಾಲಾ ಶತಮಾನೋತ್ಸವ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಪ. ರಮೇಶ್ವಂದ್ರ ಭಂಡಾರಿ, ಶಾಲಾ ಸಂಚಾಲಕರಾದ ಕೆ. ನರೇಂದ್ರನಾಥ್ ಭಂಡಾರಿ ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ಕೇಶವ ನಾಯ್ಕ್ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಶಾಲಾ ಸಂಚಾಲಕರಾದ ಕೆ. ನರೇಂದ್ರನಾಥ್ ಭಂಡಾರಿಯವರು ಕಾರ್ಯಕ್ರಮದ ವಿಷಯ ಪ್ರಸ್ತಾಪಿಸಿ ಅತಿಥಿಗಳಿಗೆ ಸ್ವಾಗತ ಕೋರಿದರು. ಪ್ರಕಾಶ್ ಕಾರಂತ್‌ರವರು ದೀಪ ಪ್ರಜ್ವಲನ ಮಾಡುವ ಮೂಲಕ ಕಾರ್ಯಕ್ರಮವನ್ನು ಉಧ್ಭಾಟಿಸಿ ಬಂಟ್ವಾಳ ರೋಟರಿ ಕ್ಲಬ್ ವತಿಯಿಂದ ಶಾಲೆಗೆ ಕೊಡಮಾಡಿದ ಪೀಠೋಪಕರಣಗಳನ್ನು ಹಸ್ತಾಂತರಿಸಿ ರೋಟರಿ ಸಂಸ್ಥೆಯ ದ್ಯೇಯೋದ್ದೇಶಗಳ ಬಗ್ಗೆ ಪ್ರಸ್ತಾಪಿಸಿದ್ದಲ್ಲದೇ ಶಾಲೆಯ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿ ಇನ್ನು ಮುಂದಕ್ಕೂ ರೋಟರಿ ವತಿಯಿಂದ ಶಾಲೆಗೆ ಅಗತ್ಯ ಸಹಕಾರವನ್ನು. ನೀಡುವ ಭರವಸೆಯನ್ನು ನೀಡಿದರು. ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಸಂಕಪ್ಪ ಶೆಟ್ಟಿಯವರು ಸಾಂದರ್ಭಿಕವಾಗಿ ಮಾತನಾಡಿ ಶಾಲೆಯ ಬೆಳವಣಿಗೆಗಳ ಬಗ್ಗೆ ಬೆಳಕು ಚೆಲ್ಲಿದರು. ಶಾಲೆಯ ವತಿಯಿಂದ ರೋಟರಿ ಕ್ಲಬ್‌ಗೆ ಸ್ಮರಣಿಕೆ ನೀಡಿ ಗೌರವಾರ್ಪಣೆ, ಧನ್ಯವಾದ ಸಲ್ಲಿಸಲಾಯಿತು. ಮುಖ್ಯೋಪಾಧ್ಯಾಯರಾದ ಕೇಶವ ನಾಯ್ಕ್ರವರು ಧನ್ಯವಾದ ಸಮರ್ಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ನಿವೃತ್ತ ಶಿಕ್ಷಕರಾದ ಗಂಗಾಧರ್ ರೈ, ಸಂಕಪ್ಪ ಶೆಟ್ಟಿ, ಕಟ್ಟಡ ಸಮಿತಿಯ ಉಪಾಧ್ಯಕ್ಷರಾದ ದಯಾನಂದ ಮೂಡುಬೆಟ್ಟು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಚೀಂದ್ರನಾಥ ರೈ, ಶಾಲಾ ಮೇಲುಸ್ತುವಾರಿ ಸಮಿತಿ/ಎಸ್.ಡಿ.ಎಮ್.ಸಿ.ಯ ಅಧ್ಯಕ್ಷರಾದ ಶ್ರೀಮತಿ ಗುಣವತಿ, ಶಾಲಾ ಗೌರವ ಶಿಕ್ಷಕಿಯರು, ಹಳೆ ವಿದ್ಯಾರ್ಥಿಗಳು, ಊರ ವಿದ್ಯಾಭಿಮಾನಿ ಬಂಧುಗಳು ಹಾಜರಿದ್ದರು.