ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ‘ಸಂವಿಧಾನ ಶಿಲ್ಪಿ’ ಡಾ. ಬಿ. ಆರ್. ಅಂಬೇಡ್ಕರ್ ಅವರ 132ನೇ ಜಯಂತಿ ಕಾರ್ಯಕ್ರಮ ಶುಕ್ರವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಮಾತನಾಡಿ, ಅಂಬೇಡ್ಕರ್ ಅವರು ಅರ್ಥಶಾಸ್ತ್ರಜ್ಞರಾಗಿ, ಸಮಾಜಶಾಸ್ತ್ರಜ್ಞರಾಗಿ, ಶಿಕ್ಷಣ ತಜ್ಞರಾಗಿ, ಆಡಳಿತಗಾರರಾಗಿ ಅತ್ಯುತ್ತಮ ದೇಶಕ್ಕೆ ಕೊಡುಗೆ ನೀಡಿದ್ದಾರೆ. ಜನರು ಜಾತಿ-ಧರ್ಮಗಳ ಅಡ್ಡಗೋಡೆ ಇಲ್ಲದೆ ಸಮಾನವಾಗಿ ಬದುಕಬೇಕೆಂಬುವುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ, ಸಮಾನತೆ ಹಾಗೂ ಭಾತೃತ್ವದ ಮೌಲ್ಯಗಳ ಆಧಾರದ ಮೇಲೆ ಎಲ್ಲರೂ ನ್ಯಾಯವನ್ನು ಹೊಂದುವ ಸಮಾಜವನ್ನು ಸೃಷ್ಟಿಸಿದರು. ಆರ್ಥಿಕ ವಿದ್ವಾಂಸರಾಗಿದ್ದ ಅವರು 1920ರಲ್ಲಿ ಬ್ರಿಟಿಷ್ ಆಡಳಿತದ ಸಂದರ್ಭ ಹಣಕಾಸಿನ ವಿಚಾರವಾಗಿ ಅನೇಕ ಸಲಹೆಗಳನ್ನು ನೀಡಿ ಆರ್.ಬಿ.ಐ ಕಚೇರಿ ಸ್ಥಾಪನೆಗೆ ಮೂಲ ಕಾರಣಕರ್ತರಾಗಿದ್ದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಎಐಸಿಸಿ ಸದಸ್ಯ ಪಿ.ವಿ.ಮೋಹನ್, ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ ಮಾತನಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ, ವಿಶ್ವಾಸ್ ಕುಮಾರ್ ದಾಸ್, ಪ್ರಕಾಶ್ ಸಾಲ್ಯಾನ್,  ಹರಿನಾಥ್.ಕೆ, ಶಬೀರ್ ಎಸ್, ಚೇತನ್ ಬೆಂಗ್ರೆ, ಲಾರೆನ್ಸ್ ಡಿಸೋಜ, ಸಿ.ಎಂ ಮುಸ್ತಫಾ, ಶುಭೋದಯ ಆಳ್ವ, ಸಂತೋಷ್ ಶೆಟ್ಟಿ, ನಿರಾಜ್ ಚಂದ್ರಪಾಲ್,  ಪದ್ಮನಾಭ ಅಮೀನ್, ನಝೀರ್ ಬಜಾಲ್, ಸಬಿತಾ ಮಿಸ್ಕಿತ್. ಮಿಥುನ್ ಕುಮಾರ್, ಪ್ರೇಮ್ ಬಳ್ಳಾಲ್ ಭಾಗ್, ಜಯಶೀಲಾ ಆಡ್ಯಂತಾಯ, ದಿನೇಶ್ ಪಿ.ಎಸ್, ಪ್ರಕಾಶ್, ರಘುರಾಜ್ ಕದ್ರಿ, ಶಾಂತಲಾ ಗಟ್ಟಿ, ಮಂಜುಳಾ ನಾಯಕ್, ಮಲ್ಲಿಕಾರ್ಜುನ ಕೋಡಿಕಲ್, ವಿಕಾಸ್ ಶೆಟ್ಟಿ, ಗೀತಾ ಅತ್ತಾವರ, ದುರ್ಗಾ ಪ್ರಸಾದ್, ಲಿಯಾಕತ್ ಶಾ, ಮಲ್ಲಿಕಾ ಪಕ್ಕಲ, ನಮಿತಾ ಡಿ ರಾವ್, ನೆಲ್ಸನ್, ತನ್ವಿರ್ ಶಾ, ಡಿ.ಎಂ ಮುಸ್ತಫಾ, ಯೋಗೀಶ್ ನಾಯಕ್, ಸಲೀಂ ಪಾಂಡೇಶ್ವರ, ವಿಕ್ಟೋರಿಯಾ ಮತ್ತಿತರರು ಉಪಸ್ಥಿತರಿದ್ದರು.

ಮಾಜಿ ಮೇಯರ್ ಶಶಿಧರ್ ಹೆಗ್ಡೆ ಸ್ವಾಗತಿಸಿ, ವಂದಿಸಿದರು.