ಎಂ.ಆರ್.ಜಿ. ಗುಂಪು ಸಂಸ್ಥೆಗಳ ಸ್ಥಾಪಕ ಕೆ. ಪ್ರಕಾಶ ಶೆಟ್ಟಿ ಅವರ ಜನ್ಮ ದಿನದ ಪ್ರಯಕ್ತ ಕೋಳೂರು ಬಳಿಯ ಗೋಲ್ಡ್ ಫಿಂಚ್‌ ಮೈದಾನದಲ್ಲಿ 540 ಜನರಿಗೆ ಧನ ಸಹಾಯ ವಿತರಿಸಲಾಯಿತು.

ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ 540 ಜನ ದುರ್ಬಲರಿಗೆ ಒಂದೂಕಾಲು ಕೋಟಿ ರೂಪಾಯಿಯಷ್ಟು ಹಣದ ನೆರವನ್ನು ಹಂಚಲಾಯಿತು. ನೆರವಿನ ಮೊತ್ತ ರೂ. 50,000ದಿಂದ 1,00,000 ದವರೆಗೆ ಇತ್ತು.

ನಾನು ಬಲು ಕಷ್ಟದಿಂದ ಬೆಳೆದು  ಉದ್ಯಮದಲ್ಲಿ ಮುನ್ನುಗ್ಗಿ ಗೆದ್ದವನು. ನೀವೂ ಮುನ್ನುಗ್ಗಿ, ಎದ್ದು ಗೆಲ್ಲಿರಿ ಎಂದು ಪ್ರಕಾಶ್ ಶೆಟ್ಟಿ ಯವರು ಫಲಾನುಭವಿಗಳಿಗೆ ಸಹಾಯ ಹಂಚಿದರು.

ಫಲಾನುಭವಿಗಳನ್ನು ಗುರುತಿಸುವಲ್ಲಿ ತನ್ನ ತಂಡದ ಮೂಲಕ ದುಡಿದ ಮೋಹನ್ ಆಳ್ವ ಅವರು ಅದರ ಮಾಹಿತಿ ನೀಡಿದರು ಮತ್ತು ಮೊದಲ 25 ಜನರ ಹೆಸರು ಓದಿ ವೇದಿಕೆಯಲ್ಲಿ ನೆರವು ಹಂಚಲು ನೆರವಾದರು. ಜೊತೆಗೆ ಇತರರಿಗೆ ಕೌಂಟರ್ ಗಳಲ್ಲಿ ಸಹಾಯ ವಿತರಣೆ ಮಾಡಲು ಅನುವು ಮಾಡಿದರು.

ಮೊದಲು ಗುರ್ಮೆ ಸುರೇಶ್ ಶೆಟ್ಟಿ ಅವರು ಸ್ವಾಗತಿಸಿದರು. ವೇದಿಕೆಯಲ್ಲಿ ಶಾಸಕ ಭರತ್ ಶೆಟ್ಟಿ, ಸದಾನಂದ ಶೆಟ್ಟಿ, ಮುಂಬಯಿಯ ರತ್ನಾಕರ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಜಯಕರ ಶೆಟ್ಟಿ, ಎ. ಜೆ. ಶೆಟ್ಟಿ, ಜಯರಾಮ ಹೆಗ್ಡೆ, ರವಿ ಶೆಟ್ಟಿ, ಸಂತೋಷ್ ಶೆಟ್ಟಿ, ರತ್ನಾಕರ ಹೆಗ್ಡೆ, ಮಾಲಾಡಿ ಅಜಿತ್ ಕುಮಾರ್ ರೈ ಉಪಸ್ಥಿತರಿದ್ದರು.