ಮೂಡುಬಿದಿರೆ: ಶ್ರೀ ಮಠದ ರಮಾರಾಣಿ ಗ್ರಂಥ ಭಂಡಾರದ ವಿವಿಧ ತಾಡವೋಲೆ ತಾಮ್ರ ಪತ್ರ, ಕೈಪಿ ಯತ್ತು, ಭೂರ‍್ಜಪತ್ರ,ವನ್ನು ವಿಧ್ಯಾಗಳಿಗೆ ಶಿಬಿರಾರ‍್ಥಿಗಳಿಗೆ ತೋರಿಸಲಾಯಿತು ಪರಮಪುನೀತ ಜೈನ ಆಗಮ ಧವಳತ್ರಯ ಗ್ರಂಥಗಳನ್ನು ವಿಧ್ಯಾರ್ಥಿಗಳು ಕುತೂಹಲದಿಂದ ವೀಕ್ಷಿಸಿದರು. 

ಪ್ರತಿನಿಧಿಗಳಾಗಿ ಭಾಗವಹಿಸಿದ ಎಲ್ಲಾ ಶಿಬಿರಾರ‍್ಥಿಗಳಿಗೆ  ಜೈನಮಠದ ಧವಳತ್ರಯ ಜೈನಕಾಶಿ ಟ್ರಸ್ಟ್ವ ವತಿಯಿಂದ ಪ್ರಮಾಣ ಪತ್ರ ನೀಡಲಾಯಿತು.

ಉಡುಪಿ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದ ಉನ್ನತ ಸಮಿತಿ ಸದಸ್ಯ ಪ್ರೊ. ಎಸ್.ಎ. ಕೃಷ್ಣಯ್ಯ ಅವರು ತಾಡವೋಲೆ ಪ್ರತಿ, ತಾಮ್ರದ ಶಾಸನಗಳ ಸಂರಕ್ಷಣ ಕ್ರಮಗಳನ್ನು ಜತನದಿಂದ ಕಾಪಾಡುತ್ತಿರುವ ಸ್ವಾಮೀಜಿ ಕಾರ‍್ಯಸ್ತುತ್ಯಾಹ೯ಎಂದರು ಅವರನ್ನು  ಸ್ವಸ್ತಿಶ್ರೀ ಭಟ್ಟಾರಕ ಶ್ರೀ ಗಳಿಂದ ಧವಳತ್ರಯ ಜೈನ ಕಾಶಿ ಟ್ರಸ್ಟ್ ವತಿಯಿಂದ ಕೊಡ ಮಾಡಲ್ಪಟ್ಟ ಸನ್ಮಾನ ಪತ್ರದೊಂದಿಗೆ ಸಂಪನ್ಮೂಲ ವ್ಯೆಕ್ತಿಗಳನ್ನು ಶ್ರೀ ಗಳವರು ಶಾಲು ಸ್ಮರಣಿಕೆ ನೀಡಿ ಅಭಿನಂದಿಸಿ ಹರಸಿ ಆಶೀರ‍್ವಾದ ಮಾಡಿದರು. ಶ್ರೀ ಕೃಷ್ಣಯ್ಯ ಪ್ರಾಚ್ಯ ಸಂಶೋಧನಾ ಕೇಂದ್ರ ಉಡುಪಿ ವತಿಯಿಂದ ಪ.ಪೂ ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿಗಳವರಿಗೆ ಭರತ ಚಕ್ರವರ‍್ತಿಯ ಕಾವಿ ಕಲಾ ಕೃತಿ, ತಾಳೆ ವೃಕ್ಷ ಬೀಜದ ಮೂರು ಜಪಸರ ಬೆಳ್ಳಿದಾರದಿಂದ ರಚಿತ ಹಾಗೂ ತಾಳೆ ಪತ್ರ ನೀಡಿದರು .

ಸ್ವಸ್ತಿಶ್ರೀ ಕಾಲೇಜು ಪ್ರಾಂಶುಪಾಲೆ ಸೌಮ್ಯಶ್ರೀ ಕಾರ್ಯಕ್ರಮ ನಿರ‍್ವಹಿಸಿದರು.

ಕೃಷ್ಣಯ್ಯ ಸ್ವಾಗತಿಸಿದರು ಗೀತಾ ಜೈನ್ ಮಂಗಳೂರ್  ಎಸ್ ಡಿಯಂ ತುಳು ಪೀಠ, ಜೈನ್ ಪ.ಪೂ ಕಾಲೇಜು ಪ್ರಾಂಶುಪಾಲ ಡಾ. ಪ್ರಭಾತ್ ಬಲ್ನಾಡ್, ಡಾ ಅಮೃತ ಮಲ್ಲ,, ಮಹಿಳಾ ಸಂಘದ  ಸುದಾ ದಿವ್ಯಾ ವೀರೇಂದ್ರ, ಹರಿಣಿ, ವೀಣಾ ಉಪಸ್ಥಿತರಿದ್ದರು.