ಅಸ್ಸಾಂ: ಅಪ್ಪರ್ ಅಸ್ಸಾಂನ ಗೋಗೋಯ್ ದಂಪತಿಯ ಮಗಳು ಮದುವೆಯಾಗಿ ಹಿಮಾಚಲ ಪ್ರದೇಶದಲ್ಲಿ ಇದ್ದರೂ ಮಕ್ಕಳಿಲ್ಲದ್ದರಿಂದ ಆಕೆಗೆ ಮಗು ನೀಡಲು ತಾಯಿಯನ್ನು ಕೊಂದು ಮಗು ಅಪಹರಿಸಿ ಶಿವಸಾಗರ್ ಪೋಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
Image Credit: ETV Bharath
ಕೊಲೆಯಾದ ಮಹಿಳೆ ಕೆಂಡುಗುರಿ ಬೈಲುಂಗ್ ಗ್ರಾಮದ ನೀತುಮೋನಿ ಲುಕುರಾಕೊನ್. ಅಸ್ಸಾಂನ ಚಾರೈದೇವ್ ಜಿಲ್ಲೆಯ ಟೀ ಎಸ್ಟೇಟ್‌ನ ಗಟಾರದಲ್ಲಿ ಆಕೆಯ ದೇಹ ಪತ್ತೆಯಾಗಿದೆ.
ಸೋಮವಾರ ಸಂಜೆ ನೀತುಮೋನಿ ನಾಪತ್ತೆಯಾಗಿದ್ದಳು.
ಅವಳನ್ನು ಕೆಲವು ಕೆಲಸಕ್ಕೆ ಗೋಗೋಯ್ ದಂಪತಿ ಕರೆಸಿಕೊಂಡಿದ್ದರು. ಆದರೆ ಮಗುವನ್ನು ತೆಗೆದುಕೊಳ್ಳಲು ಬಿಡದ್ದರಿಂದ ದಂಪತಿ ಹರಿತವಾದ ಆಯುಧದಿಂದ ಇರಿದದ್ದರಿಂದ ನೀತುಮೋನಿ ಸಾವಿಗೀಡಾದಳು ಎಂದು ಶಿವಸಾಗರ್ ಪೋಲೀಸು ಅಧಿಕಾರಿ ಸುಬ್ರಜ್ಯೋತಿ ಬೋರಾ ತಿಳಿಸಿದ್ದಾರೆ.
ಮಗುವಿನೊಡನೆ ಹಿಮಾಚಲ ಪ್ರದೇಶಕ್ಕೆ ಹೊರಟಿದ್ದ ಬೋರಾ ದಂಪತಿಯನ್ನು ಜೊರ್ಹಾಟ್‌ನ ಅಂತರರಾಜ್ಯ ಬಸ್ ನಿಲ್ದಾಣದಲ್ಲಿ ಬಂಧಿಸಿದ ಪೋಲೀಸರು ಮಗುವನ್ನು ವಶಕ್ಕೆ ತೆಗೆದುಕೊಂಡರು.
ಕೊಲೆಯಲ್ಲಿ ಸಂಬಧಿತರಾದ ಬೋರಾ ದಂಪತಿಯ ಮಗ ಪ್ರಶಾಂತ್ ಗೋಗೋಯ್ ಮತ್ತು ಕೊಲೆಯಾದ ಮಹಿಳೆಯ ತಾಯಿ ಬೋಬಿ ಲುಕುರಾಕೊನ್‌ರನ್ನು ಮರುದಿನ ಪೋಲೀಸರು ಬಂಧಿಸಿದರು.
ಬೋಬಿ ಮಗು ಮಾರಲು ಒಪ್ಪಿದ್ದಳು. ಆದರೆ ನೀತುಮೋನಿ ಮಗು ಮಾರಲು ತಯಾರಿರಲಿಲ್ಲ. ಅಂತಿಮವಾಗಿ ಕೊಲೆಯಾಗಿದೆ. ಗೋಗೋಯ್ ದಂಪತಿ ಪೂರ್ವ ಯೋಜನೆಯಂತೆ ಕೊಲೆ ಮಾಡಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.