ಮಂಗಳೂರು: ದಕ್ಷಿಣ ಕನ್ನಡ ಈಜು ಸಂಸ್ಥೆ ವತಿಯಿಂದ 2024-25 ನೇ ಸಾಲಿನಲ್ಲಿ ಸುಮಾರು ಒಂದು ಲಕ್ಷ ಎಪ್ಪತೈದು ಸಾವಿರ ರೂಪಾಯಿಗಳ ನಗದು ಬಹುಮಾನವನ್ನು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪದಕ ವಿಜೇತ ದಕ್ಷಿಣ ಕನ್ನಡ ಜಿಲ್ಲೆಯ ಅರವತ್ತು ಈಜು ಪಟುಗಳಿಗೆ ಮತ್ತು ಎಂಟು ಈಜು ತರಬೇತಿದಾರರಿಗೆ ಸ್ಮರಣಿಕೆಯೊಂದಿಗೆ ಮುಖ್ಯ ಅತಿಥಿಗಳಾದ ಪನಾಮ ಕಾರ್ಪೊರೇಷನ್ ನ CEO ವಿವೇಕರಾಜ್ ಪೂಜಾರಿಯವರು ವಿತರಿಸಿದರು. 

ವಾರ್ಷಿಕ ಮಹಾಸಭೆಯಲ್ಲಿ  ಅಧ್ಯಕ್ಷರಾದ ಯತೀಷ್ ಬೈಕಂಪಾಡಿ, ಪ್ರಸ್ತಾಪಿಸಿ ಕಾರ್ಯದರ್ಶಿಯಾದ ಮಹೇಶ ಕೆ ವರದಿ ವಾಚಿಸಿ, ಕೋಶಾಧಿಕಾರಿ ಕಣ್ಣನ್ ಡಿ, ಲೆಕ್ಕಪತ್ರ ಮಂಡಿಸಿ, ಶೆರ್ಲಿ ರೇಗೊ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.