ಬೆಂಗಳೂರು:  ವಿಧಾನಸೌಧದಲ್ಲಿ  ನಡೆಯುತ್ತಿರುವ 155ನೇ ಅಧಿವೇಶನದ ವಿಧಾನ ಪರಿಷತ್ ಸದನದಲ್ಲಿ ಸಭಾಪತಿಗಳಾಗಿ ಪರಿಷತ್ ಶಾಸಕ ಮಂಜುನಾಥ ಭಂಡಾರಿಯವರು ಯಶಸ್ವಿ ಕಲಾಪ ನಡೆಸಿಕೊಟ್ಟರು. 

ಈ ವರ್ಷದ ಅಧಿವೇಶದ ಎರಡನೇ  ದಿನವಾದ ಮಂಗಳವಾರದಂದು ಸಭಾಪತಿ ಬಸವರಾಜ ಹೊರಟ್ಟಿ ಅವರ ಸ್ಥಾನದಲ್ಲಿ ಕೂತು ಕೆಲಕಾಲ ಮಂಜುನಾಥ ಭಂಡಾರಿ ಅವರು ಕಲಾಪವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ತಾನು ಶಾಸಕ ಮಾತ್ರವಲ್ಲದೇ ಸಭಾಪತಿಗಳಾಗಿಯೂ  ಕಾರ್ಯನಿರ್ವಹಿಸುವಲ್ಲಿ ಯಶಸ್ವಿಯಾಗಿರುತ್ತಾರೆ.