ಮಂಗಳೂರು:  ಲೀನಾ ಲೋಬೋ ಎಂಬ ಮಹಿಳೆಯು ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ‌ ಒಂದು ಡಜನ್ ಮಂದಿಯಿಂದ ಗೂಗಲ್ ಪೇ ಮೂಲಕ ಹಣ ಪಡೆದು ವಂಚಿಸಿರುವುದಾಗಿ ಉಳ್ಳಾಲ ಪೋಲೀಸು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜಾಯ್ಸನ್ ಲೂಯಿಸ್, ಅವಿಶ್ ಡಿಸೋಜಾ, ನಾಗೇಂದ್ರ, ಗಣಪತಿ, ಜೀವನ್ ಕ್ಲಿಫರ್ಡ್ ಡಿಸೋಜಾ, ವಿನಯ ಜಾಯ್ ಅಲ್ವಾರಿನ್, ಸಚಿನ್ ಪ್ರಸನ್ನ, ಗ್ಲಾನ್ಸಿಲ ಫೆರ್ನಾಂಡೀಸ್, ಎಡ್ಲಿನ್ ಕ್ಲಿಂಟನ್ ಡಿಸೋಜಾ, ರಿಕ್ಸನ್ ಸಂತಾನಿಸ್, ಜಿತೇಶ್ ಕ್ಲಿಶನ್ ಡಿಸೋಜಾ ವಂಚಿತರು. ಈ ಮೇಲಿನ ವ್ಯಕ್ತಿಗಳಿಂದ ಫೆಬ್ರವರಿ 2ರಿಂದ ಮಾರ್ಚ್ 12ರ ನಡುವೆ 2,82,000 ರೂಪಾಯಿ ಗೂಗಲ್ ಪೇ ಹಾರಿಸಿಕೊಂಡು ಅನಂತರ ಲೀನಾ ಅವರು ಜಾರಿಕೊಳ್ಳುತ್ತಿರುವುದಾಗಿ ದೂರಲಾಗಿದೆ.