ಮುಂಬಯಿ: ಕುಂದಾಪುರ ಪರಿಸರದ ಸಮಾಜ ಬಾಂಧವರನ್ನು ಒಂದುಗೂಡಿಸುವ ಹಾಗೂ ಸಮಾಜದ ಏಳಿಗೆಗಾಗಿ ಸ್ಥಾಪನೆಗೊಂಡ ಬಿಲ್ಲವ ಸೇವಾ ಸಂಘ ಕುಂದಾಪುರ (ರಿ.) ಮುಂಬಯಿ ಇದರ 36ನೇ ವಾರ್ಷಿಕೋತ್ಸವ, ಗಾನ ನೃತ್ಯ ವೈಭವ, ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಗಳನ್ನು ನೀಡುವ ಕಾರ್ಯಕ್ರಮವು ಕಳೆದ ರವಿವಾರ (ಜ.07)ರಂದು ದಾದರ್ ಪೂರ್ವದ ಪ್ರಾಚಾರ್ಯ ಬಿ. ಎನ್. ವೈದ್ಯ ಸಭಾಗೃಹ (ಕಿಂಗ್ ಜಾರ್ಜ್ ಹೈಸ್ಕೂಲ್, ಹಿಂದೂ ಕಾಲನಿ ದಾದರ್ ಪೂರ್ವ ಇಲ್ಲಿ ಸಂಘದ ಅಧ್ಯಕ್ಷ ಸೂರ್ಯ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನೇರವೇರಿತು.

ಅತಿಥಿಗಳಾಗಿ ಉದಯ ರಾಮ, ಸಮಾಜ ಸೇವಾಕರ್ತೆ ಬದ್ಲಾಪುರ ಸುಶೀಲಾ ಎಸ್. ಪೂಜಾರಿ, ಡಾ. ಶೇಖರ್ ಹೆಮ್ಮಾಡಿ, ಸಂಘದ ವಿಶ್ವನಾಥ ಎ. ಪೂಜಾರಿ, ಪ್ರದೀಪ್ ಪೂಜಾರಿ, ರಮೇಶ್ ಜೆ. ಬಿಲ್ಲವ, ಬಾಬು ಸಿ. ಪೂಜಾರಿ, ರಮೇಶ್ ಎ. ಬಿಲ್ಲವ, ಆಶೋಕ್ ಎನ್. ಪೂಜಾರಿ, ನರಸಿಂಹ ಎಮ್. ಬಿಲ್ಲವ, ಆನಂದ ಕೆ. ಪೂಜಾರಿ ರಾಜಶ್ರೀ ಪಿ. ಸಾಲ್ಯಾನ್, ಯಶೋದಾ ಸತೀಶ್ ಪೂಜಾರಿ, ದೀಪಾ ವೈ. ಪೂಜಾರಿ, ಶ್ರೀಧರ ವಿ. ಪೂಜಾರಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾಜಿ ಅಧ್ಯಕ್ಷ ನ್ಯಾಯವಾದಿ ಆನಂದ ಎಮ್. ಪೂಜಾರಿ, ಪತ್ನಿ ನ್ಯಾಯವಾದಿ ಶಕುಂತಳಾ ಪೂಜಾರಿ ದಂಪತಿಯನ್ನು ಮತ್ತು ಸಂಘದ ಅಧ್ಯಕ್ಷ ಸೂರ್ಯ ಪೂಜಾರಿ ಅವರನ್ನು ವೇದಿಕೆಯ ಮೇಲಿದ್ದ ಅತಿಥಿ ಗಣ್ಯರು ಶಾಲು, ನೆನಪಿನ ಕಾಣಿಕೆ, ಫಲ-ಪುಷ್ಪ ನೀಡಿ ಸನ್ಮಾನಿಸಿದರು ಹಾಗೂ ಪ್ರತಿಭಾವಂತ ವಿದ್ಯಾಥಿರ್ಗಳನ್ನು ಸತ್ಕರಿಸಲಾಯಿತು.

ಉದಯ ರಾಮ ಮಾತನಾಡುತ್ತಾ ವೇದಿಕೆಯನ್ನು ಅಲಂಕರಿಸಿದ ಗಣ್ಯರು ಬಹಳ ಕಷ್ಟಪಟ್ಟು ದುಡಿದು ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಮಕ್ಕಳು ಜೀವಮಾನದಲ್ಲಿ ಯಾವುದೇ ಶಾರ್ಟ್ ಕಟ್ ಗಳನ್ನು ಮಾಡದೇ ಸತತ ಪ್ರಯತ್ನವನ್ನು ಮಾಡಿ ತಾವು ಇಟ್ಟುಕೊಂಡ ಗುರಿಯನ್ನು ಸಾಧಿಸಬೇಕು. ಆಗ ಜೀವನದಲ್ಲಿ ಯಶಸ್ಸು ಖಂಡಿತವಾಗಿಯೂ ಲಭಿಸುತ್ತದೆ. ಇಂತಹ ಸಾಧನೆಯನ್ನು ಮಾಡಿ ಹಿರಿಯರು ಕಟ್ಟಿದ ಸಂಘವನ್ನು ಮುನ್ನಡೆಸಿ ಇತರ ಸಂಘ-ಸಂಸ್ಥೆಗಳಿಗೆ ಮಾದರಿಯಾಗಬೇಕು ಎಂದರು.

ಸುಶೀಲಾ ಎಸ್. ಪೂಜಾರಿ ಮಾತನಾಡುತ್ತಾ, ಶ್ರೀ ನಾರಾಯಣ ಗುರುಗಳ ತತ್ವದಂತೆ ನಡೆದರೆ ದೇವರ ಕೃಪೆ ಖಂಡಿತವಾಗಿಯೂ ಲಭಿಸುತ್ತದೆ. ಮಹಿಳೆಯರು ತಮ್ಮ ಅಮೂಲ್ಯ ಸಮಯವನ್ನು ತೆಗೆದು ಸಂಘದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಸಂಘದ ಕಾರ್ಯ ಕಲಾಪಗಳು ಸುಸಾಂಗವಾಗಿ ನಡೆಯಬಹುದು. ನಮ್ಮ ಸಂಘ ಎಂಬ ಅಭಿಮಾನವಿಟ್ಟಲ್ಲಿ ನಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.

ಪ್ರತಿಯೊಬ್ಬರೂ ನಮ್ಮಲ್ಲಿ ನಾವು ಆತ್ಮವಿಶ್ವಾಸ ಹೆಚ್ಚಿಸಿಕೊಂಡಾಗ ಯಾವುದೇ ಕಾರ್ಯವನ್ನು ಸುಲಭವಾಗಿ ಮಾಡಬಹುದು. ನಾವು ನಮ್ಮ ಪಕ್ಕದಲ್ಲಿ ಕುಳಿತವರಲ್ಲಿ ಮಾತನಾಡಿದಾಗ ಹಲವಾರು ವಿಷಯಗಳು ನಮಗೆ ಕಲಿಕೆಯಲ್ಲಿಕ್ಕೆ ಸಿಗುತ್ತದೆ. ಮಕ್ಕಳು ಪರ್ಸಲಾಲಿಟಿ ಡೆವಲಪ್ಟೆಂಟ್ ಮಾಡುವುದರೊಂದಿಗೆ, ಯೋಗ, ವ್ಯಾಯಾಮವನ್ನು ಮಾಡಿ ಸದೃಢರಾಗಬೇಕೆಂದು ಡಾ| ಶೇಖರ್ ಹೆಮ್ಮಾಡಿ ತಿಳಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿ ನ್ಯಾ| ಆನಂದ ಪೂಜಾರಿ 36 ವರ್ಷಗಳ ಹಿಂದೆ ಸ್ಥಾಪಿಸಿದ ನಮ್ಮ ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ ಭದ್ರ ಬುನಾದಿಯೊಂದಿಗೆ ಬೆಳೆಯುತ್ತಿದೆ. ಸಂಘದ ಸದಸ್ಯರು ತಮ್ಮ ಆದಾಯದ ಒಂದು ಪಾಲನ್ನು ಸಮಾಜ ಸೇವೆಗೆ ವಿನಿಯೋಗಿಸಿದರೆ ಜೀವನದಲ್ಲಿ ಯಶಸ್ಸು ಖಂಡಿತ ಸುರೇಶ್ ಪೂಜಾರಿ, ಬಿ. ಪಿ. ಪೂಜಾರಿ, ಹೊಕ್ಕೊಳ್ಳಿ, ಶಂಕರ ಪೂಜಾರಿ, ಎಸ್.ಟಿ. ಪೂಜಾರಿ ಮಂಜುನಾಥ ಬಿಲ್ಲವ ಮತ್ತಿತರರು ಸಂಘದ ಅಭಿವೃದ್ಧಿಗಾಗಿ ಬಹಳ ಶ್ರಮ ಪಟ್ಟಿದ್ದಾರೆ. ನಾವೆಲ್ಲರೂ ಒಟ್ಟಾಗಿ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಿ ಸಂಘದ ಇನ್ನಷ್ಟು ಅಭಿವೃದ್ಧಿ ಮಾಡೋಣ ಎಂದರು.
ನ್ಯಾ| ಶಕುಂತಳಾ ಆನಂದ ಪೂಜಾರಿ ಮಾತನಾಡಿ ಸಮಾಜದ ಮಹಿಳೆಯರನ್ನು ಒಂದೇ ವೇದಿಕೆಗೆ ತರಲು ಸಂಘದಲ್ಲಿ ಮಹಿಳಾ ವಿಭಾಗವನ್ನು ಪ್ರಾರಂಭಿಸಿ ಅದರಲ್ಲಿ ನಾವು ಯಶಸ್ಸನ್ನು ಕಂಡಿದ್ದೇವೆ. ಸಂಘದ ಕಾರ್ಯ ಚಟುವಟಿಕೆಗಳು ನಿಂತ ನೀರಾಗಿರದೆ ಹರಿವ ನದಿಯಾಗಿರಬೇಕು. ಮಹಿಳೆ ಯರು ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಘಟಿತರಾಗಬೇಕು.
ಸೂರ್ಯ ಪೂಜಾರಿ ಮಾತನಾಡಿ ಸಮಾಜದ ಯುವ ಪೀಳಿಗೆ ಸಂಘದಲ್ಲಿ ಕಾರ್ಯನಿರತರಾಗಬೇಕು. ಎಲ್ಲರೂ ಜವಾಬ್ದಾರಿಗಳನ್ನು ತೆಗೆದುಕೊಂಡು ಸಂಘವನ್ನು ಇನ್ನಷ್ಟು ಸಕ್ರಿಯಗೊಳಿಸಲು ಪ್ರಯತ್ನಿಸಬೇಕು. ಸಂಘದ ಸದಸ್ಯರಾಗಿರದ ಸಮಾಜ ಬಾಂಧವರನ್ನು ಸಂಘದ ಸದಸ್ಯರನ್ನಾಗಿಸಿ ಸಮಾಜ ಬಾಂಧವರನ್ನೂ ಒಗ್ಗೂಡಿಸುವ ಕೆಲಸವನ್ನು ಮಾಡುವುದರೊಂದಿಗೆ ಸಂಘದ ಕಾರ್ಯಕಲಾಪಗಳನ್ನು ಉನ್ನತ ಮಟ್ಟಕ್ಕೆ ಏರಿಸುವ ಪ್ರಯತ್ನವನ್ನು ಮಾಡೋಣ ಎಂದರು.
ಬೇಬಿ ಆರ್. ಪೂಜಾರಿ ಮತ್ತು ಯಶೋಧಾ ಎಸ್. ಪೂಜಾರಿ ಪ್ರಾರ್ಥನೆಯನ್ನಾಡಿದರು. ಉಪಾಧ್ಯಕ್ಷ ಆನಂದ ಕೆ. ಪೂಜಾರಿ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಉಪಾಧ್ಯಕ್ಷ ನರಸಿಂಹ ಬಿಲ್ಲವ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೌ| ಪ್ರದಾನ ಕಾರ್ಯದರ್ಶಿ ಅಶೋಕ್ ಪೂಜಾರಿ ಅತಿಥಿಗಳನ್ನು ಪರಿಚಯಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಹರೀಶ್ ಎನ್. ಪೂಜಾರಿ ನಿರೂಪಿಸಿದರೆ, ಸಭಾ ಕಾರ್ಯಕ್ರಮವನ್ನು ಲಕ್ಷಣ ಪೂಜಾರಿ ಕೊಡೇರಿ ನಿರೂಪಿಸಿದರು. ಹರೀಶ್ ಎನ್. ಪೂಜಾರಿ ವಂದಿಸಿದರು. ಸಂಘದ ಸದಸ್ಯರಿಂದ ವಿವಿಧ ನೃತ್ಯ ವೈಭವ ನಡೆಯಿತು.