ಕಾಂಗ್ರೆಸ್ ಶಾಸಕ ಪರೇಶ್ ಧನಾನಿ ಕೇಳಿದ ಪ್ರಶ್ನೆಗೆ ಗೃಹ ಮಂತ್ರಿಯೂ ಆಗಿರುವ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಕಳೆದ ಎರಡು ವರುಷಗಳಲ್ಲಿ ಗುಜರಾತ್ ರಾಜ್ಯದಲ್ಲಿ 188 ಕಸ್ಟಡಿ ಸಾವುಗಳು ಆಗಿರುವುದಾಗಿ ವಿಧಾನ ಸಭೆಯಲ್ಲಿ ಉತ್ತರಿಸಿದರು.
ತಪ್ಪಿತಸ್ಥ ಪೋಲೀಸರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗೆ ಎಫ್‌ಐಆರ್ ದಾಖಲಿಸಲಾಗಿದೆ ಹಾಗೂ ಹಲವರಿಗೆ ದಂಡ ವಿಧಿಸಿರುವುದಾಗಿಯೂ ಅವರು ತಿಳಿಸಿದರು.