ಕರ್ನಾಟಕ ಸರಕಾರವು ಗುರುವಾರದವರೆಗೆ 40,026 ಜನ ಕೊರೋನಾದಿಂದ ಮರಣ ಹೊಂದಿರುವುದಾಗಿ ಅಂಕಿ ಅಂಶ ಬಿಡುಗಡೆ ಮಾಡಿದೆ. ಆದರೆ ಅದಕ್ಕಿಂತ ಇನ್ನೂ 20,720 ಹೆಚ್ಚು ಜನರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿರುವುದಾಗಿ ಹೇಳಲಾಗಿದೆ.
ಸಾವಿಗೀಡಾದವರ ಕುಟುಂಬಕ್ಕೆ ರೂ. 50,000 ಪರಿಹಾರ ನೀಡಲಾಗುತ್ತದೆ. ಬರೇ 16,000ದಷ್ಟು ಮೃತರ ಕುಟುಂಬಗಳಿಗೆ ಮಾತ್ರ ಇಲ್ಲಿಯವರೆಗೆ ಪರಿಹಾರ ನೀಡಲಾಗಿದೆ.