ಹೆಬ್ರಿ : ಜಗತ್ತಿನ ಮಹಾನ್ ಸೇವಾಸಂಸ್ಥೆಯಾದ ಲಯನ್ಸ್ ಕ್ಲಬ್ಸ್ ಇಂಟರ್ನ್ಯಾಶನಲ್ ನ ಜಿಲ್ಲೆ 317 ಸಿ ಯ 2020-21ನೇ ಸಾಲಿನ ಜಿಲ್ಲಾ ಗವರ್ನರ್ ಲಯನ್ ಎನ್.ಎಮ್ ಹೆಗಡೆಯವರು ಲಯನ್ ಹೆಬ್ರಿ ಟಿ.ಜಿ. ಆಚಾರ್ಯ ಅವರನ್ನು ತಮ್ಮ ಜಿಲ್ಲಾ ಸಂಪುಟ ಕಾರ್ಯದರ್ಶಿಯನ್ನಾಗಿ ನೇಮಿಸಿರುತ್ತಾರೆ.
ಹೆಬ್ರಿ ಲಯನ್ಸ್ ನ ಸ್ಥಾಪಕಾಧ್ಯಕ್ಷ ಲಯನ್ ಎಚ್ ದಿನಕರ ಪ್ರಭುರವರೊಂದಿಗೆ ಸ್ಥಾಪಕ ಕಾರ್ಯದರ್ಶಿಯಾಗಿ ಲಯನಿಸಮ್ ಗೆ ಸೇರಿಕೊಂಡ ಲಯನ್ ಟಿ.ಜಿ. ಆಚಾರ್ಯರು 12 ವರ್ಷ ಕಾರ್ಯದರ್ಶಿ ಯಾಗಿ, ಅಧ್ಯಕ್ಷರಾಗಿ, ಜಿಲ್ಲಾ ಸಂಪುಟದಲ್ಲಿ ವಿವಿಧ ವಿಭಾಗದ ಅಧ್ಯಕ್ಷರಾಗಿ, ವಲಯ ಕಾರ್ಯದರ್ಶಿ ಯಾಗಿ, 2018-19 ರಲ್ಲಿ ಪ್ರಾಂತ್ಯಾಧ್ಯಕ್ಷರಾಗಿ ತಮ್ಮ ಕ್ರಿಯಾಶೀಲತೆ ಹಾಗೂ ಕಾರ್ಯಕ್ಷಮತೆಯಿಂದ ಲಯನ್ಸ್ ಜಿಲ್ಲೆಯಲ್ಲಿ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿ ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಿಕೊಂಡಿರುತ್ತಾರೆ.
ಇಂಡಿಯನ್ ಓವರ್ಸೀಸ್ ಬ್ಯಾಂಕ್ ನಲ್ಲಿ ಡೆಪ್ಯೂಟಿ ಮೆನೇಜರ್ ಆಗಿ ನಿವೃತ್ತಿ ಹೊಂದಿರುವ ಟಿ.ಜಿ.ಆಚಾರ್ ಬಹುಮುಖ ಪ್ರತಿಭೆ ಹರಿದಾಸರಾಗಿ, ಯಕ್ಷಗಾನ ತೆಂಕುತಿಟ್ಟಿನ ಭಾಗವತರಾಗಿ ನಾಟಕಾಭಿನಯ, ಸಾಹಿತ್ಯಿಕ, ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ
ಲಯನ್ಸ್ ಸೇವಾ ಸಂಸ್ಥೆಯ ಮೂಲಕ ಹೆಬ್ರಿಯ ಕೇಂದ್ರ ಭಾಗದಲ್ಲಿ ಹಾಗೂ ಬ್ರಹ್ಮಾವರ ಹೆಬ್ರಿ ಜಂಕ್ಷನ್ ನಲ್ಲಿ ಶಾಶ್ವತ ಲಯನ್ಸ್ ಸರ್ಕಲ್ ಸ್ಥಾಪನೆಗೆ ಕ್ಲಬ್ ಪದಾಧಿಕಾರಿಗಳೊಂದಿಗೆ ಸೇರಿ ನೀಡಿರುವ ಕೊಡುಗೆ ಅಪಾರ ಎಂಬುದು ಪೂರ್ವಾಧ್ಯಕ್ಷರ ಹಾಗೂ ಸದಸ್ಯರೆಲ್ಲರ ಅಂಬೋಣ. ಲಯನ್ಸ್ ಸಂಪುಟ ಕಾರ್ಯ ದರ್ಶಿಯಾಗಿ ಆಯ್ಕೆಯಾಗಲು ಮಾತೃ ಸಂಸ್ಥೆ ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ನ ಸರ್ವ ರ ಪ್ರೋತ್ಸಾಹ ಹಾಗೂ ಸಹಕಾರವೇ ಪ್ರಧಾನ ಎನ್ನುತ್ತಾರೆ ಟಿ.ಜಿ. ಆಚಾರ್ಯ.