ಒಂದು ಜೀವ ಉಳಿಸಲು ನಾವು ಪರಿಶ್ರಮ ಪಡುವುದಕ್ಕಿಂತ ಹೆಚ್ಚಾಗಿ ಸ್ವತಹ ಆ ಜೀವವು ತಾನು ಇನ್ನೂ ಬದುಕಬೇಕು ಎಂದು ಬಯಸುತ್ತದೆ. ಆಹಾರವಿಲ್ಲದೆ, ನೀರಿಲ್ಲದೆ, ಚಿಕಿತ್ಸೆಗೆ ಹಣವಿಲ್ಲದೆ ಈ ಭೂಮಿಯಲ್ಲಿ ಪ್ರತೀ ದಿನ ಲಕ್ಷಾಂತರ ಜನರು ಸಾಯುತ್ತಿದ್ದಾರೆ. ಆ ಎಲ್ಲಾ ಮರಣಗಳಿಗೂ ಬದುಕಿರುವ ನಾವು ಸಾಕ್ಷಿಗಳು. ನಿನ್ನೆಯವರೆಗೆ ಇರುವ ಎಲ್ಲಾ ಸಂಪತ್ತನ್ನು ಮಾರಿ, ಸಾಲಮಾಡಿ ಬದುಕುವ ಆಸೆಯೊಂದಿಗೆ ಚಿಕಿತ್ಸೆಗೆ ಸಹಕರಿಸಿದ್ದ ಉಮೇಶ್ ಸಾಲ್ಯಾನ್ ರವರು ಇಂದು ನಮ್ಮನ್ನು ಬಿಟ್ಟು ಅಗಲಿದ್ದಾರೆ. ಪಿತ್ತಕೋಶದ ಕ್ಯಾಂನ್ಸರ್ ಗೆ ಒಳಗಾಗಿ ಹಲವಾರು ಕಡೆ ಚಿಕಿತ್ಸೆಗೆ ಹೋಗಿ, ಕೊನೆಗೆ ವಿಧಿ ಇಲ್ಲದೆ ಇಂಡಿಯಾನ ತಲುಪಿದ ಉಮೇಶ್ ಸಾಲ್ಯಾನ್ ರ ರೋಗದ ವಿರುದ್ದದ ಹೋರಾಟ ಇಂದಿಗೆ ಕೊನೆಯಾಯಿತು. ಅವರ ಮಗ ಕಷ್ಟ ನಷ್ಟ ಸಹಿಸಿ ತಂದೆಯನ್ನು ಉಳಿಸಲು ಮಾಡಿದ ಪ್ರಯತ್ನ ಸಫಲವಾಗಲಿಲ್ಲ.
ಟೀಂ - ಬಿ ಹ್ಯೂಮನ್ ಉಮೇಶ್ ಸಾಲ್ಯಾನ್ ರ ಸ್ಥಿತಿಯನ್ನು ಕಂಡು ತಕ್ಷಣ ದಾನಿಗಳ ನೆರವಿನಿಂದ ಅವರಿಗೆ ಸಹಾಯ ನೀಡಿತ್ತು. ಈ ಮೊದಲು ದೊಡ್ಡ ಮೊತ್ತದ ಚಿಕಿತ್ಸೆ ಕೊಡಲು ದುಡ್ಡು ಇಲ್ಲದೆ ಇದ್ದಾಗ ಅವರಿಗೆ ದೈರ್ಯ ತುಂಬಿ ಎಷ್ಟೇ ಕಷ್ಟವಾದರೂ ಚಿಕಿತ್ಸೆ ಮಾಡಿ, ಆಯುಷ್ಯ ಇದ್ದರೆ ಬದುಕಬಹುದು ಎಂದು ಹೇಳಿದ್ದೆವು. ಹಣ - ಸಹಾಯಕ್ಕೆ ಜನ ಏನೂ ಇದ್ದರೂ ಆಯುಷ್ಯ ನೀಡಲು ಯಾರಿಗೂ ಸಾಧ್ಯವಿಲ್ಲ. ವಿಧಿಯು ಉಮೇಶ್ ಸಾಲ್ಯಾನ್ ರನ್ನು ತನ್ನೊಳಗೆ ಸೇರಿಸಿತು. ಅವರ ಆತ್ಮಕ್ಕೆ ದೇವನು ಶಾಂತಿ ನೀಡಲಿ.
ಹೀಗೆ, ಚಿಕಿತ್ಸೆಗೆ ಸೂಕ್ತ ರೀತಿಯ ಸ್ಪಂಧನೆ ಮತ್ತು ಸಹಕಾರ ಇಲ್ಲದೆ ನೂರಾರು ಜನರು ದಿನವೂ ಸಂಕಷ್ಟ ಪಡುವಾಗ ನಮಗೆ ಒಂದೊ ಎರಡೋ ಜನರು ಸಹಾಯ ಒದಗಿಸಲು ಸಿಗುತ್ತಾರೆ. ಅವರ ಸೇವೆಯನ್ನು ನಾವು ನಮ್ಮ ಪಾಲಿನ ಪುಣ್ಯ ಎಂದು ಮಾಡುತ್ತಲೂ ಇದ್ದೇವೆ. ಈಗಾಗಲೇ ಸಾಲ್ಯಾನ್ ರವರ ಬಿಲ್ಲ್ ನಲ್ಲಿ 50 ಸಾವಿರ ರುಪಾಯಿಯನ್ನು ಟೀಂ ಬಿ- ಹ್ಯೂಮನ್ ತಂಡ ಬರಿಸಿದೆ. ನಾವು ಜೀವ ಉಳಿಸುವ ಕಾರುಣ್ಯ ಸೇವೆಯನ್ನು ಮಾಡ ಬಹುದು ಹೊರತು ಜೀವದ ಹಕ್ಕುದಾರ ಪರಮಾತ್ಮ ಮಾತ್ರ. ನಮ್ಮನ್ನು ಪರೀಕ್ಷಿಸಲು ಮತ್ತು ನಾವು ಪಾಠಕಲಿಯಲು ಇಂತಹ ಸನ್ನಿವೇಶಗಳು ನಮ್ಮ ಕಣ್ಣ ಮುಂದೆ ಸಿಗುತ್ತದೆ. ಉತ್ತಮ ಚಿಕಿತ್ಸೆ ಮೊದಲೇ ಸಿಕ್ಕಿದ್ದರೆ ಉಮೇಶ್ ಸಾಲ್ಯಾನ್ ಬದುಕಬಹುದಿತ್ತೂ ಎಂದು ಈಗ ಹೇಳುವುದು ತಪ್ಪಾಗುತ್ತದೆ. ಕಾರಣ, ವಿಧಿಯ ತೀರ್ಮಾನವನ್ನು ನಾವು ನಿಲ್ಲಿಸಲು ಶಕ್ತರಲ್ಲ.