ಕೃಷಿ ಎಂದಿಗೂ,ಯಾರನ್ನೂ ಸೋಲಲು ಬಿಡಲಾರದು.ಆದುದರಿಂದಲೇ“ಕೃಷಿತೋ ನಾಸ್ತಿ ದುರ್ಭಿಕ್ಷಂ” ಎಂಬ ನಾಣ್ಣುಡಿಜನಜನಿತವಾದುದು.ಕನಿಷ್ಠ ಐದುಎಕರೆ ಭೂಮಿಇದ್ದು ವೈವಿಧ್ಯಮಯವಾದ ಬೆಳೆಯನ್ನು ಸಾವಯವರೀತಿಯಲ್ಲಿ ಬೆಳೆದದ್ದೆ ಆದರೆ ಎಂದಿಗೂ ಆತ ಸೋಲಲಾರಎಂದುರಮೇಶರಾವ್‌ರವರುಖಡಾಖಂಡಿತವಾಗಿ ಹೇಳುತ್ತಾರೆ.ಇದಕ್ಕೆ ಕಾರಣ ಅವರು ತಮ್ಮಐದು ಎಕರೆ ಪ್ರದೇಶದಲ್ಲಿಆಗಿಂದಾಗ್ಗೆಕೈಗೊಂಡ ಪ್ರಯೋಗಿಕ ಕೃಷಿ ಪ್ರಯತ್ನಗಳು.
ವೈವಿಧ್ಯಮಯ ಗಿಡಗಳ ಕೃಷಿ:ತಮ್ಮ ಹಿರಿಯರಿದ್ದದ.ಕ. ಜಿಲ್ಲೆಯ ಕಿನ್ನಿಗೋಳಿ ಸಮೀಪದ ಪುನರೂರು ಮೂಡುಮನೆಯಲ್ಲಿಚಿಕ್ಕ ಪ್ರಾಯದಲ್ಲಿ ಬೆಳೆದು ಪ್ರಾಥಮಿಕ, ಪೌಢ ವಿದ್ಯಾಭ್ಯಾಸವನ್ನು ಪೂರೈಸಿ ಕಾಲೇಜುಕಲಿಕೆಯನ್ನು ಸುರತ್ಕಲ್‌ಗೋವಿಂದಾಸಕಾಲೇಜಲ್ಲಿಕಲಿತುದೂರದ ಕೇರಳಕ್ಕೆ ಹೋಟೇಲುಉದ್ಯಮ ನಡೆಸುವ ಉದ್ದೇಶದಿಂದ ಹೋದರು. ಸುಮಾರು ಎರಡು ದಶಕ ಕಾಲ ಬೇರೊಬ್ಬರಜತೆಯಾಗಿ ಹೋಟೇಲು ನಡೆಸಿದರು.ತರುವಾಯತಮ್ಮ ಪಾಲಿನಲ್ಲಿ ಹುಟ್ಟೂರಾದ ಕಿನ್ನಿಗೋಳಿಯಲ್ಲಿಯೇ ಸ್ವಂತ ಹೋಟೇಲನ್ನು ಪ್ರಾರಂಭಿಸಿದರು.ಕೇರಳದಿಂದ ಪ್ರತೀ ಸಲ ಊರಿಗೆ ಬರುತ್ತಿದ್ದಾಗ ವಿವಿಧಜಾತಿಯ ಗಿಡಗಳನ್ನು ತಂದುತಮ್ಮಗದ್ದೆಯಲ್ಲಿ ನೆಡುತ್ತಿದ್ದರು.ಆಗ ನೆಟ್ಟಜಾಯಿಕಾಯಿ, ಅಂಜೂರ, ಏಲಕ್ಕಿ, ಕಿತ್ತಳೆ ಇತ್ಯಾದಿ ಉತ್ತಮ ಮರಗಳಿಂದ ಇದೀಗ ಉತ್ತಮ ಫಸಲುದೊರಕಿ ಸಾಕಷ್ಟು ಆದಾಯ ಬರುತ್ತಿದೆ.ಜಾಯಿಕಾಯಿಯ ಹತ್ತು ಮರಗಳಿಂದ ಸುಮಾರು ೨೦-೨೫ ಕೆ.ಜಿ. ಕಾಯಿ, ಪತ್ರೆಗಳು, ಬಿಜಾಪುರ ಲಿಂಬೆಯಿಂದ ಸಾಕಷ್ಟು ಆದಾಯದ ಮೂಲವಾಗಿದೆ.
ಕಿನ್ನಿಗೋಳಿ ವ್ಯವಸಾಯ ಸಂಘದ ಬೆಂಬಲ:ಕಿನ್ನಿಗೋಳಿಯಲ್ಲಿ ಐದು ವರ್ಷಕಾಲ ಹೋಟೇಲುಉದ್ಯಮ ನಡೆಸುತ್ತಿರುವಾಗಲೇದೊರೆತಆದಾಯದಲ್ಲಿ ಸ್ವಲ್ಪ ಸ್ವಲ್ಪವೇ ಹಣವನ್ನುಕೃಷಿಯಲ್ಲಿತೊಡಗಿಸುತ್ತಾ ಮನೆಯ ಕೃಷಿ, ತೋಟವನ್ನೂಅಭಿವೃದ್ಧಿ ಪಡಿಸಿ ಉನ್ನತ ಸ್ಥಿತಿಗೆ ತಂದತರುವಾಯ ಹೊಟೇಲು ಉದ್ಯಮವನ್ನು ಸಂಬಂಧಿಕರಿಗೆ ಮಾರಿ,ದೊರೆತ ಹಣವನ್ನು ನಿರಖುಠೇವಣಿ ಇರಿಸಿ, ಕೃಷಿ ಬದುಕಿಗೆ ಸಂಪೂರ್ಣ ತೊಡಗಿಸಿಕೊಂಡರು. ೧೯೯೦ ರ ಸುಮಾರಿಗೆ ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಪಡೆದ ಇಪ್ಪತ್ತೈದು ಸಾವಿರದ ಸಾಲದಿಂದ ತನ್ನ ಕೃಷಿಯನ್ನು ಬೆಳೆಸುತ್ತಾ ಬಂದರಮೇಶರಾಯರು ಪ್ರತೀ ವರ್ಷವೂತನ್ನ ಸಾಲವನ್ನುಕ್ಲಪ್ತವಾಗಿತೀರಿಸುತ್ತಿದ್ದಕಾರಣ ಈಗ ಎಷ್ಟೋ ಸಾಲ ಕೇಳಿದರೂ ಸಂಘದವರು ಹಿಂದೆ ಮುಂದೆ ನೋಡದೆ ನೀಡುತ್ತಿದ್ದಾರೆಎಂದು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಉತ್ತಮತಾಂತ್ರಿಕತೆಯಡ್ರಿಪ್ ವ್ಯವಸ್ಥೆ : ಕಿನ್ನಿಗೋಳಿ ವ್ಯವಸಾಯ ಸಂಘದವರ ಬೆಂಬಲದಿಂದತನ್ನ ಹೆಚ್ಚಿನ ಕೃಷಿಗೆ ಡ್ರಿಪ್ ನೀರುಣಿಸುವಿಕೆಯನ್ನು ಸ್ವತ: ಇಸ್ರೇಲ್ ಮಾದರಿಯ ನೇಟಾಫಿಲ್‌ರವರತಾಂತ್ರಿಕತೆಯನ್ನು ಅಳವಡಿಸಿಕೊಂಡಿದ್ದು ಕಳೆದ ಐದು ವರ್ಷದಿಂದಸ್ವಲ್ಪವೂ ಹಾಳಾಗದೆ ಉತ್ತಮರೀತಿಯಲ್ಲಿದೆಎನ್ನುತ್ತಾರೆ. ಸರಕಾರ, ತೋಟಗಾರಿಕೆ ಇಲಾಖೆ ಕಡಿಮೆ ಸಬ್ಸಿಡಿಯನ್ನು ನೀಡಿದರೂಕೂಡಾ ನೆಟಾಫಿಲ್‌ರವರತಾಂತ್ರಿಕತೆ ಬಹಳ ಉತ್ತಮವಾಗಿದ್ದು ಅಷ್ಟೆ ಬಾಳಿಕೆ ಬರುವಂತಹದ್ದೆಂದು ಹೊಗಳುತ್ತಾರೆ.
ಖ್ಯಾತ ಬಾಳೆ ಕೃಷಿಕ : ಹಾರ್ಟಿಕಲ್ಚರ್‌ಇಲಾಖೆಯವರ ಭರವಸೆಯಿಂದ ಹಿಂದೊಮ್ಮೆಒಂದುಎಕರೆಯಲ್ಲಿಟಿಶ್ಯೂಕಲ್ಚರ್‌ನ ಪಚ್ಚೆಬಾಳೆ ಬೆಳೆದು ಫಸಲು ಬರುವ ಸಮಯದಲ್ಲಿಇಲಾಖೆಯವರು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡದಕಾರಣಒಮ್ಮೆಕೈಸುಟ್ಟು ಕೊಳ್ಳಬೇಕಾಯ್ತು. ಆದರೆಅಡಕೆ, ತೆಂಗುಗಳನ್ನೂ ಸಮಗ್ರ ಸಾವಯವಕೃಷಿಯಲ್ಲಿ ಬೆಳೆಯುತ್ತಿದ್ದ ಕಾರಣ ಹೇಗೋ ಸಂಭಾಳಿಸಿಕೊಳ್ಳಲು ಸಾಧ್ಯವಾಯ್ತು. ಹೇಗೆ ಹೇಗೋ ಸ್ಥಳೀಯ ವ್ಯಾಪಾರಿಗಳಿಗೆ ಬೆಳೆದುದನ್ನು ಸ್ವಲ್ಪ ಸ್ವಲ್ಪವೇಒದಗಿಸಿ ನಷ್ಟವನ್ನು ಸ್ವಲ್ಪ ಸರಿದೂಗಿಸುವ ಪ್ರಯತ್ನ ಪಟ್ಟೆಎಂದುತಮ್ಮ ಮನದಾಳವನ್ನು ಹೇಳಿಕೊಂಡರು. ಆತರುವಾಯಟಿಶ್ಯೂಕಲ್ಚರ್‌ನ ಕೇವಲ ಪಚ್ಚೆಬಾಳೆಗೆ ಬದಲುಅದರೊಂದಿಗೆಕದಳಿ, ನೇಂದ್ರವನ್ನೂ ಸೇರಿಸಿ ಬೆಳೆದು ಮಾರುಕಟ್ಟೆ ನಾನೇ ಬೆಳೆಸಿಕೊಂಡು ಗ್ರಾಹಕರ ಸಮೂಹವನ್ನುಪಡೆದು ಇದೀಗ ನಮ್ಮ ಸಾವಯವ ಬೆಳೆಗೆ ನಮ್ಮದೇಆದಗ್ರಾಹಕರನ್ನು ಪಡೆಯಲು ಸಾಧ್ಯವಾಗಿದೆ, ಪ್ರಖ್ಯಾತವಾಗಿದೆ.ಗ್ರಾಹಕರು ಅಂಗಡಿಗಳಲ್ಲಿ ಕೇಳುವ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆಎಂದು ಮೆಚ್ಚುಗೆ ಪಟ್ಟರು.
ಎಲ್ಲಾ ಜಾತಿಯ ಮಾವಿನ ಹಣ್ಣಿನ ಮರಗಳು :ರಮೇಶರಾಯರುತಮ್ಮ ಸ್ಥಳದ ಸುತ್ತ ಹಾಗೂ ಸುಮಾರುಒಂದುಎಕರೆ ಪ್ರದೇಶದಲ್ಲಿದೇಶದಲ್ಲಿದೊರಕುವಎಲ್ಲಾಜಾತಿಯ ಮಾವಿನ ಮರಗಳನ್ನೂ ಬೆಳೆಸಿದ್ದಾರೆ. ಇವರ ಸಂಬಂಧಕರು, ಹಾಗೂ ಸ್ವತ: ಅವರೇ ಹೋದೆಡೆಯಲ್ಲೆಲ್ಲಾ ಸಿಗುವ ಎಲ್ಲಾ ವಿಶೇಷ ಜಾತಿಯ ಮಾವಿನ ಗಿಡಗಳನ್ನು ತಂದು ಸಲಹಿ ಬೆಳೆಸುತ್ತಿದ್ದಾರೆ. ಆದರೆತೆಂಗಿನ ಮರಕ್ಕಿಂತ ಹೆಚ್ಚು ಎತ್ತರ ಹೋಗದಂತೆತಡೆಯಲು ಪ್ರತೀಎರಡು-ಮೂರು ವರ್ಷಕ್ಕೊಮ್ಮೆಕಡಿಸುತ್ತಇದ್ದಾರೆ.ಇದರಿಂದಾಗಿ ಮರಗಳು ಹೆಚ್ಚು ಎತ್ತರ ಹೋಗದೆ ಕೆಳ ಹಂತದಲ್ಲೆ ಬೆಳೆಯುವಂತೆ ಮಾಡಿದ್ದಾರೆ. ಹಾಗೂ ವರ್ಷಂಪ್ರತಿಉತ್ತಮ ಫಸಲನ್ನೂ ಪಡೆದು ಸಾಕಷ್ಟು ಆದಾಯವನ್ನೂ ಗಳಿಸುತ್ತಿದ್ದಾರೆ.
ಗೆಂದಾಳೆ ಎಳನೀರು ಉತ್ತಮ ಆದಾಯಕ : ಸುಮಾರು ಮೂರುಎಕರೆ ಪ್ರದೇಶದಲ್ಲಿ ಹಾಗೂ ಸ್ಥಳದ ಸುತ್ತ, ಗದ್ದೆಯ ಸುತ್ತ ಬೆಳೆಸಿರುವ ಸುಮಾರು ೩೦೦ ರಷ್ಟು ಗೆಂದಾಳೆ ತೆಂಗು ಮರದಲ್ಲಿಡ್ರಿಪ್ ವ್ಯವಸ್ಥೆಯಿಂದಾಗಿ ಉತ್ತಮ ಇಳುವರಿ ದೊರಕುತ್ತಿದೆ. ತೆಂಗಿನಲ್ಲಿ ಬೊಂಡವನ್ನೇ ತೆಗೆಯುತ್ತಿರುವುದರಿಂದ ಫಸಲೂ ಹೆಚ್ಚು ದೊರಕುತ್ತಿದ್ದು ಪ್ರತೀ ೪೫ ದಿನಗಳಿಗೊಮ್ಮೆ ಸ್ವತ: ವ್ಯಾಪಾರಸ್ಥರೇ ಬಂದು ಗೆಂದಾಳೆಯನ್ನು ತಾವೇತೆಗೆದುಉತ್ತಮ ಹಣ ನೀಡಿಕೊಂಡು ಹೋಗುತ್ತಿದ್ದಾರೆ. ಇದು ನಮ್ಮ ನಿರಂತರ ಹಾಗೂ ಉತ್ತಮ ಆದಾಯದ ಮೂಲವೂ ಆಗಿದೆ.ಇದರಿಂದಾಗಿ ಕೃಷಿಗೆ ಮಾಡಿದ ಸಾಕಷ್ಟು ಸಾಲವನ್ನೂತೀರಿಸಲು ಅನುಕೂಲವಾಯಿತುಎಂದೂ ಸಂತೃಪ್ತಿಯನ್ನು ವ್ಯಕ್ತಪಡಿಸುತ್ತಾರೆರಮೇಶರಾಯರು.
ಸಾವಯವಗೊಬ್ಬರತಯಾರಿ : ಮನೆಯಲ್ಲಿಯೇ ಬೆಳೆದಅಡಿಕೆಯ ಸಿಪ್ಪೆ, ಹುಲ್ಲಿನ ಉಳಿಕೆ, ತೆಂಗಿನ ಮಡಲು ಇತ್ಯಾದಿಗಳನ್ನು ಮಣ್ಣಿನಲ್ಲಿ ಹರಡಿಅದರ ಮೇಲೆ ಮನೆಯಗೋಬರ್‌ಗ್ಯಾಸ್ ನ ಸ್ಲರಿಯನ್ನು ಹರಡಿಅದರ ಮೇಲೆ ಸುಣ್ಣ, ಕಹಿಬೇವಿನ ಹಿಂಡಿ ಇತ್ಯಾದಿಗಳನ್ನು ಹಾಕಿ ಮತ್ತೆಒಂದುಅಂತರ ಸ್ಲರಿ ಹರಡಿ ಮತ್ತೆಒಂದಾವರ್ತಿತರಗೆಲೆ, ಇತ್ಯಾದಿಗಳನ್ನು ಹರಡಿಒಂದು ವರ್ಷ ಕಾಲ ಹಾಗೇ ಇಡಲಾಗುತ್ತದೆ. ಅಷ್ಟು ಸಮಯದಲ್ಲಿಇದುಉತ್ತಮಗೊಬ್ಬರವಾಗಿ ಮಾರ್ಪಟ್ಟುಗಿಡಕ್ಕೆಉತ್ತಮ ಪೋಷಕಾಂಶವನ್ನು ನೀಡುತ್ತದೆ.ಪ್ರತೀಗಿಡದ ಬುಡದಿಂದ ಸುಮಾರುಎರಡು ಫೀಟ್‌ಅಂತರದಲ್ಲಿ ಈ ಗೊಬ್ಬರವನ್ನು ಹಾಕುವುದರಿಂದಗಿಡತನಗೆ ಬೇಕಾದಷ್ಟೆ ಪೋಷಕಾಂಶವನ್ನು ಹೀರಿಕೊಂಡುಉತ್ತಮ ಫಸಲನ್ನು ನೀಡುತ್ತದೆ, ಆ ಪೋಷಕಾಂಶದ ಮೇಲೆಯೇಡ್ರಿಪ್ ನ ನೀರು ಬೀಳುವಂತೆ ಮಾಡುವುದರಿಂದ ಪ್ರಯೋಜನ ಹೆಚ್ಚು ದೊರಕುತ್ತಿದೆಎನ್ನುತ್ತಾರೆರಾಯರು.
ಡ್ರಿಪ್ ವ್ಯವಸ್ಥೆಯ ನಿರ್ವಹಣೆ : ಇಸ್ರೇಲ್ ಮಾದರಿಯಡ್ರಿಪ್ ವ್ಯವಸ್ಥೆ ಅಳವಡಿಸಿಕೊಂಡಿದ್ದರೂ ಕೂಡಾ ಪ್ರತೀ ಮಳೆಗಾಲದ ಪ್ರಾರಂಭಕ್ಕೆ ಮೊದಲು ಸಾಧಾರಣ ೧೫-೨೦ ದಿನಕ್ಕೆ ಮೊದಲೇತೋಟಕ್ಕೆ ನೀರುಣಿಸುವದನ್ನು ನಿಲ್ಲಿಸಿ ಡ್ರಿಪ್ ವ್ಯವಸ್ಥೆಯ ಪೈಪ್ಗಳನ್ನು ತೆಗೆದು ಸುತ್ತಿ ಮರಕ್ಕೆ ನೆತುಕಾಕಿಡುತ್ತಾರೆ. ಈ ರೀತಿ ಮಾಡುತ್ತಿರುವುದರಿಂದಡ್ರಿಪ್ ನ ಪೈಪುಗಳು ಹುಲ್ಲಿನಅಡಿಗೆ ಸಿಲುಕಿ ಹಾಳಾಗುವದು, ಮಣ್ಣುತುಂಬಿ ಹುಳು-ಹುಪ್ಪಟೆ ಒಳಕ್ಕೆ ಹೋಗುವುದರಿಂದ ಉಳಿಯುತ್ತz.ಅದಕ್ಕಿಂತ ಹೆಚ್ಚಾಗಿ ಸುಮಾರು ೧೫-೨೦ ದಿನ ಮೊದಲೇ ನೀರುಕೊಡುವದನ್ನು ನಿಲ್ಲಿಸುವುದರಿಂದ ಮಳೆಗಾಲದ ಬಿರುಸಿನ ಮಳೆಗೆ ನೆಲ ಸಾಕಷ್ಟು ಒಣಗಿ ನೀರನ್ನು ಸಂಗ್ರಹಿಸಲು ಹದಗೊಂಡಿದ್ದು ಕೊಳೆರೋಗತಡೆಯಲು ಸಹಕಾರಿಯಾಗುತ್ತಿದೆ.ಎಂದುತಮ್ಮ ಪ್ರಯೋಗಿಕತಜ್ಞತೆಯನ್ನು ಹೇಳಿಕೊಳ್ಳುತ್ತಾರೆ.ಅದೇರೀತಿತೋಟದಲ್ಲಿ ಬೆಳದ ಹುಲ್ಲನ್ನು ಆಗಾಗ ಕತ್ತರಿಸಿ ತೆಗೆದು ದನಗಳಿಗೆ, ಹಾಕುತ್ತಿರುವುದರಿಂದತೋಟವೂ ಸ್ವಚ್ಛವಾಗಿದ್ದು ಕೊಳೆರೋಗವನ್ನು ದೂರವಿಡುವಂತೆಉಪಕರಿಸುತ್ತಿದೆಎಂದುತಮ್ಮಅನುಭವವನ್ನು ಹಂಚಿಕೊಂಡರು.
ಪ್ರಶಸ್ತಿ ವಿಜೇತ ಭತ್ತ ಕೃಷಿಕ :ಟಿಶ್ಯೂಕಲ್ಚರ್ ಪಚ್ಚಬಾಳೆ ಕೃಷಿಯಿಂದಒಮ್ಮೆ ಸ್ವಲ್ಪಕೈಸುಟ್ಟುಕೊಂಡರೂರಮೇಶರಾಯರುತರುವಾಯ ಕೃಷಿ ಇಲಾಖೆಯವರು ನಿಗದಿ ಪಡಿಸುವ ಭತ್ತವನ್ನು ಬೆಳೆದು ಅತ್ಯುತ್ತಮ ಇಳುವರಿಯನ್ನು ತೋರಿಸಿಕೊಡುತ್ತಿದ್ದಾರೆ. ತಮ್ಮ ಕೇವಲ ೫೦ ಸೆಂಟ್ಸ್ಗದ್ದೆಯಲ್ಲಿಉತ್ತಮ ಸಾವಯವಗೊಬ್ಬರ ನೀಡಿರಾಸಾಯನಿಕರಹಿತ ೨೪ ಕ್ವಿಂಟಾಲ್ ಭತ್ತ ಬೆಳೆದು ೨೦೧೦ ರಲ್ಲಿತಾಲ್ಲೂಕುಉತ್ತಮ ಕೃಷಿಕ, ೨೦೧೪ ರಲ್ಲಿಜಿಲ್ಲಾ ಮಟ್ಟದಉತ್ತಮ ಕೃಷಿಕ, ೨೦೧೭ ರಲ್ಲಿತೋಟಕಾರಿಕೆಇಲಾಖೆಯಿಂದ ಕೃಷಿ ಪಂಡಿತಇತ್ಯಾದಿ ಪ್ರಶಸ್ತಿಗಳನ್ನು ಸ್ವೀಕರಿಸಿದ ರಮೇಶರಾಯರು ಸ್ವಯಂ ಸೇವಾ ಸಂಸ್ಥೆಗಳಾದ ರೋಟರಿ, ಲಯನ್, ಇತ್ಯಾದಿ ಸಂಸ್ಥೆಗಳಿಂದ ಪಡೆದ ಪ್ರಶಸ್ತಿಗಳಿಗಂತೂ ಲೆಕ್ಕವಿಲ್ಲ. ಇದೀಗ ೨೦೧೯ ರ ಸಪ್ಟಂಬರ್ ೧೫ ರಂದು ಕಿನ್ನಿಗೋಳಿ ವ್ಯವಸಾಯ ಸೇವಾ ಸಂಘದವರು ಪ್ರಪ್ರಥಮ ಬಾರಿಗೆಕೃಷಿಕರೊಬ್ಬರನ್ನು ಸನ್ಮಾನಿಸುತ್ತಿದ್ದುರಮೇಶರಾಯರಿಗೆ ಹುಟ್ಟೂರ ಸಂಮಾನದೊರಕುತ್ತಿರುವುದಕ್ಕೆ ಬಹಳ ಸಂತಸವಿದೆ.
ಸ್ವತಯಾರಿಯಗಿಡಗಳು :ಟಿಶ್ಯೂಕಲ್ಚರ್ ನ ಗಿಡಇರಬಹುದುಅಥವಾಯಾವುದೇಜಾತಿಯ ಗಿಡಗಳಿದ್ದರೂ ಇತ್ತಿಚೆಗೆ ತಾವೇ ಸ್ವತ: ತಯಾರಿಸಿಕೊಂಡು ಗಿಡಗಳನ್ನು ಬೆಳೆಸುವ ಪ್ರಯತ್ನವನ್ನುರಮೇಶರಾಯರು ಮಾಡುತ್ತಿದ್ದಾರೆ. ಹಿರಿಯರಿಂದ ಬಳುವಳಿಯಾಗಿ ಬಂದ ಹಳೆಯ ಕಾಲದ ಮನೆ, ಬಿಡದೇ ಮಾಡಿಕೊಂಡು ಬರುತ್ತಿರುವ ಪೂಜೆ, ದೈವ-ದೇವರ ಕಾರ್ಯಗಳಿಂದಾಗಿ ಮನೆಯಿಂದದೂರವಾಗಲುಅಸಾಧ್ಯವಾದುದರಿಂದ ಸ್ವತ: ತಾವೇತಮ್ಮಕೈಯಾರೆಉತ್ತಮಜಾತಿಯ ಫಲವನ್ನು ಆರಿಸಿ, ಭತ್ತಇತ್ಯಾದಿ ತಳಿ, ಗಿಡವನ್ನು ರಕ್ಷಿಸಿ ಬೆಳೆಸುತ್ತಿದ್ದಾರೆ.
ಅಂಗಳದಲ್ಲಿ ತರಕಾರಿ ಕೃಷಿ :ಮನೆಯಒಂದು ಬದಿಯ ವಿಶಾಲ ಅಂಗಳದಲ್ಲಿ ಬೆಂಡೆ, ಅಲಸಂಡೆಇತ್ಯಾದಿಯನ್ನು ಬೆಳೆಯುತ್ತಿದ್ದಾರೆ. ಇಷ್ಟೆಲ್ಲಾಗಿಡ, ಬೆಳೆಗಳಿಗೆ ಸಾವಯವಗೊಬ್ಬರಕ್ಕಾಗಿ ಮನೆಯಲ್ಲಿಯೇ ೫ ದನಗಳನ್ನು ಸಾಕಿ ಸಲಹುತ್ತಿರುವ ಹೆಂಡತಿ ಲತಾರಾವ್ ರವರ ನಿರಂತರದುಡಿಮೆಯನ್ನು ಹಾಡಿ ಹೊಗಳುತ್ತಾರೆ.ಲೇಖಕರು ಭೇಟಿ ನೀಡುವಾಗಕೂಡಾ ಲತಾರವರು ಹಟ್ಟಿಯ ಸ್ವಚ್ಛತೆ, ಹುಲ್ಲು ಹಾಕುವ, ತೊಳೆಯುವ ಕೆಲಸಗಳಲ್ಲಿ ಬ್ಯಸಿಯಾಗಿದ್ದರು.ದನಗಳ ಹುಲ್ಲಿಗಾಗಿಯೇಒಂದುಗದ್ದೆಯಲ್ಲಿ ಹಸಿ ಹುಲ್ಲನ್ನು ಬೆಳೆಸುತ್ತಿದ್ದು ಅದನ್ನು ಕತ್ತರಿಸಿ ದನಗಳಿಗೆ ಸರಿಯಾಗಿಒದಗಿಸುವಲ್ಲಿ ಸಹಕಾರಿಯಾಗಲು ಮನೆಯಲ್ಲೇ ಹುಲ್ಲನ್ನುಕತ್ತರಿಸುವಯಂತ್ರವನ್ನೂ ಇರಿಸಿಕೊಂಡಿದ್ದಾರೆ. ಈ ಮೇವಿನಿಂದಾಗಿ ದನಗಳು ಉತ್ತಮ ಹಾಲನ್ನು ನೀಡುತ್ತಿದ್ದು ಪ್ರತೀ ದಿನ ಸುಮಾರು ೧೦ ಲೀಟರ್ ಹಾಲನ್ನುಡೈರಿಗೆ ಪೂರೈಸುತ್ತಿದ್ದು ಮನೆಯಖರ್ಚಿಗೆ ಮಿಕ್ಕಿ ಉಳಿದ ತರಕಾರಿಯನ್ನು ಮಾರುತ್ತಿರುವುದರಿಂದ ಪ್ರತೀ ನಿತ್ಯದಖರ್ಚಿಗೆ ಸಾಕಷ್ಟು ಹಣದೊರಕುತ್ತಿದೆಎಂದೂತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ.
ತಮ್ಮ ಪ್ರದೇಶದಲ್ಲಿಉತ್ತಮ ನೀರಾಶ್ರಯದಎರಡು ಬಾವಿ, ಎರಡು ಬೋರ್ ವೆಲ್‌ಇದ್ದು ಸಂತೃಪ್ತ ಬದುಕನ್ನುರಮೇಶರಾಯರು ನಡೆಸುತ್ತಿದ್ದಾರೆ.ಈರ್ವರು ಮಕ್ಕಳಲ್ಲಿ ಮಗ ಪ್ರಸ್ತುತದೆಹಲಿಯಲ್ಲಿ ಸಾಫ್ಟ್ ವೇರ್‌ಇಂಜಿನಿಯರ್‌ಆಗಿದ್ದು ಮಗಳು ಮಂಗಳೂರಿನ ಕೆ.ಪಿ.ಟಿಯಲ್ಲಿಕಂಪ್ಯೂಟರ್‌ಕಲಿಕೆಯಲ್ಲಿ ತೊಡಗಿದ್ದಾಳೆ.ಕೃಷಿ ಹಾಗೂ ಮನೆಯಲ್ಲಿ ಸುಖ, ಸಂತೃಪ್ತಿಯ ಬದುಕನ್ನು ನಡೆಸುತ್ತಿರುವ ಲತಾ-ರಮೇಶರಾಯರ ಬದುಕು ಸದಾ ಹಸಿರಾಗಿ ನಳ ನಳಿಸುತ್ತಿರಲಿ. ಹೈಡ್ರೊಫೋನಿಕ್ ಕೃಷಿಯಇವರ ಆಸೆ ಕೈಗೂಡಿ ಹೊಸ ಕೃಷಿಯಲ್ಲೂಯಶಸ್ವಿಯಾಗಲೆಂದು ನಮ್ಮೆಲ್ಲರಹಾರೈಕೆ. ಕೃಷಿಕರು ಸ್ವತ: ಭೇಟಿ ನೀಡಿಕೃತಾರ್ಥರಾಗಬಹುದು.
ಸಚಿತ್ರ-ಲೇಖನ: ರಾಯೀ ರಾಜ ಕುಮಾರ್, ಮೂಡುಬಿದಿರೆ (ಲೇಖಕರು: ಸಂಪನ್ಮೂಲ ವ್ಯಕ್ತಿ, ಸಮಾಜ ಚಿಂತಕರು, ಲೇಖಕರು)