ಮೂಡುಬಿದಿರೆ:- ಹೊಯ್ಸಳ ಬಲ್ಲಾಳ ರಾಯ ಜೀವ ರಕ್ಷಾ ಪಾಲಕರೆಂದು ಪ್ರಸಿದ್ಧ ಪಡೆದ ಜಗದ್ಗುರು ಸ್ವಸ್ತಿಶ್ರೀ ಭಟ್ಟಾರಕ ಪರಂಪರೆಯ ವರ್ತಮಾನ ಪೀಠಧೀಶ ಸ್ವಸ್ತಿಶ್ರೀ ಡಾ ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ 21 ನೆ ಯ ಪಟ್ಟಾಭೀಶೇಕ ವರ್ಧಂತಿ ಉತ್ಸವ 29.8.2020 ರಂದು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬೆಳಿಗ್ಗೆ 6.30 ರಿಂದ ಗುರು ಬಸದಿಯಲ್ಲಿ ಆರಂಭಗೊಂಡಿತು. ಭಗವಾನ್ 1008 ಚಂಡೋಗ್ರ  ಪಾರ್ಶ್ವನಾಥ ಸ್ವಾಮಿಗೆ ಜಲ ಎಳೆ ನೀರು, ಕ್ಷೀರ ಚತುಶ್ಕೋನ  ಶ್ರೀ ಗಂಧ, ಸುಗಂಧ ದ್ರವ್ಯ, ಕನಕ ವೃಷ್ಟಿ, ಪುಷ್ಪ ವೃಷ್ಟಿ, ಮಹಾ ಶಾಂತಿ ಧಾರಾ ನೆರವೇರಿತು.

 ಚತುರ್ವಿಂಶತಿ ಬಸದಿಯಲ್ಲಿ ವಿಶೇಷ ಮಹಾ ಮಂಗಳ ಆರತಿ ಬಳಿಕ ಶ್ರೀ ಸ್ವಾಮೀಜಿಗಳವರು 7.15 ಕ್ಕೆ ಚಂದನ ಗದ್ದುಗೆ ಸಿಂಹಾಸನ ರೋಹಣ ಗೈದು 18 ಬಸದಿ ಗೋಷ್ಠಿ ಪೂಜೆ ಪ್ರಸಾದ ಸ್ವೀಕರಿಸಿದರು. ಶ್ರೀ ಮಠದ ಶಿಷ್ಯ ವರ್ಗದವರಾದ ಪಟ್ಣ ಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್ ಮುಕ್ತೇಸರರು, ಅಭಯ ಚಂದ್ರ ಜೈನ್ ಸಂಜಯಂತ ಕುಮಾರ್ ಶೆಟ್ಟಿ, ಚಕ್ರಶ್ ಅರಿಗ ಇವರು ಗುರು ಕಾಣಿಕೆ ಅರ್ಪಿಸಿ ಶ್ರೀ ಗಳವರಿಂದ ಶ್ರೀ ಫಲ ಮಂತ್ರಾಕ್ಷತೆ ಪಡೆದರು.

ಸರಳ ಸಂಪ್ರದಾಯಿಕ ಮೆರವಣಿಗೆಯಲ್ಲಿ ಶ್ರೀ ಮಠ ಕ್ಕೆ ಆಗಮಿಸಿ ಅಲ್ಲಿ ಮೂಲ ದೇವಾದಿ ದೇವ ಭಗವಾನ್ ಪಾರ್ಶ್ವನಾಥ್ ಸ್ವಾಮಿಗೆ ಮಹಾ ಅಭಿಷೇಕ, ದಶಲಕ್ಷಣ ಪೂಜೆ, ಪೂರ್ವಚಾರ್ಯರ ಪೂಜೆ, ಗಣದರ ಚರಣ ಕ್ಕೆ ಅಭಿಷೇಕ ಸ್ವರ್ಣ ಪಿಂಚಿ ಶಿಖಾ ಮೊಹರುಧಾರಣೆ ಶಿಷ್ಯ ವರ್ಗದವರಿಗೆ ಅನುಗ್ರಹ ಆಶೀರ್ವಾದ ನೀಡಿ ದಶ ಲಕ್ಷಣ ಧರ್ಮ ಉತ್ತಮ  ತಪೋ ಧರ್ಮದ ಬಗ್ಗೆ ಶ್ರೀ ಮಠ ದಲ್ಲಿ ಆಶೀರ್ವಾದ ನೀಡಿ ಇಚ್ಚಾ ನಿರೋದವೆ ತಪಸ್ಸು, ಉಪವಾಸ ವ್ರತ ನಿಯಮಗಳು ಮನ ಶಾಂತಿ ದೇಹ ಸೌಖ್ಯ ನೀಡು ದಲ್ಲದೆ ಆಲಸ್ಯ ಪ್ರಮಾದ ಗಳನ್ನು ಹೊಡೆದೂಡಿ, ಸದಾ ಕ್ರಿಯಾ ಶೀಲರಾಗಿ ತಪಸ್ಸು  ಆತ್ಮ ಕಲ್ಯಾಣಕ್ಕೆ ಸಹಕಾರಿ ಎಂದು ನುಡಿದು ಮೂಡಬಿದ್ರೆ ವ್ರತಪುರ ಎಂದು ಪ್ರಸಿದ್ದ ಕ್ಷೇತ್ರ ಸಹಸ್ರಾರು ಮುನಿಗಳು ಪೂರ್ವಾಚಾರ್ಯರು ಭಟ್ಟಾರಕರು ಈ ಕ್ಷೇತ್ರದ ಏಳ್ಗೆ ಗಾಗಿ ಶಿಷ್ಯ ವರ್ಗದ ಸಹಕಾರದಿಂದ ಕ್ಷೇತ್ರ ದ ಪ್ರಗತಿ ಮಾಡಿದರು, ಗುರು ಕೃಪೆ  ಆಶೀರ್ವಾದದಿಂದ ಸಮಾಜದ ಸಹಕಾರದಿಂದ ಕ್ಷೇತ್ರದಲ್ಲಿ ವಿವಿಧ ಪ್ರಗತಿಯ ಕಾರ್ಯ ನಡೆಯುತ್ತಿದೆ ಎಂದು ನುಡಿದರು.

ಅಪರಾಹ್ನ ಪಿ ಯು ಸಿ ಯಲ್ಲಿ  ಉತ್ತಮ  ಅಂಕ ಪಡೆದ ಇ ಕ್ಷಾ ಜೈನ್, ವರ್ಷಾ ಜೈನ್, ಹಾಗೂ ಸ್ವಸ್ತಿಶ್ರೀ ಜೈನ್ ವಸತಿ ಕಾಲೇಜಿನ ಸಫಾ, ಚಿತ್ರ ಆಚಾರ್ಯ ಇವರನ್ನು ಸ್ವಾಮೀಜಿ ಶಾಲು ಶ್ರೀಫಲ, ಮಂತ್ರ ಕ್ಷತೆ,  ಲೇಖನ ಸಾಮಗ್ರಿ ನೀಡಿ ಹರಸಿದರು. ಯಂ ಬಾಹುಬಲಿ ಪ್ರಸಾದ  ನಗದು ಪುರಸ್ಕಾರ ನೀಡಿದರು. 

ರಾಜ್ಯ ಕ್ಕೆ 2ನೆ ರಾಂಕ್ ಪಡೆದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಸಮ್ಮೇದ ಮಹಾವೀರ್ ಹಂಜೆ 625 ರಲ್ಲಿ 622 ಅಂಕ ಪಡೆದ ವಿದ್ಯಾರ್ಥಿ ಯನ್ನು ಶ್ರೀ ಗಳು ಅಭಿನಂದಿಸಿದರು. ಡಾ.ಯಂ ಮೋಹನ್ ಆಳ್ವ, ಶಾಸಕ ಉಮಾನಾಥ್ ಕೋಟ್ಯಾನ್, ಸುದರ್ಶನ್, ಜಿಲ್ಲಾ ಬಿ.. ಜೆ. ಪಿ ಅಧ್ಯಕ್ಷರುರಾಬರ್ಟ್ ಪಳ್ಳಿ ಕೃಷಿಕ  ಶ್ರೀ ಶ್ರೀ ಗಳ ಆಶೀರ್ವಾದ ಪಡೆದರು ನಾಗೇಂದ್ರ, ಮಸ್ಕಾತ ಶೈಲೇಂದ್ರ, ಪ್ರವೀಣ್ ಜೈನ್ ಯಕ್ಷಗಾನ ಕಲಾವಿದರಾದ ವಿಶ್ವೇಶ್ವರ ಭಟ್ ಸುಣ್ಣoಬಳ ವಾಸುದೇವ ಸಾಮಗ ವಿನಾಯಕ ಭಟ್, ಪೋಕಳ ಲಕ್ಷ್ಮಿ ನಾರಾಯಣ ಭಟ್ ಮೊದಲಾದವರು  ಉಪಸ್ಥಿತರಿದ್ದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ದ ಅಂಗವಾಗಿ ಅವಿಭಜಿತ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಜಿನ ಕಥೆ, ಭಾಗವತ ಪ್ರಸಂಗಕ್ಕೆ ಸಂಬಂಧಪಟ್ಟ ತಾಳಮದ್ದಳೆ ನೆರವೇರಿತು, ಉಪನ್ಯಾಸಕ ಪ್ರಭಾತ್ ಬಲ್ನಾಡ್ ಕಾರ್ಯಕ್ರಮ ನಿರೂಪಿಸಿದರು. ಭಾಗವತ ರವಿ ಕುಮಾರ್ ಸುರಾಲು ಪ್ರಾರ್ಥನೆ ಹಾಡಿದರು.