(ಸೆಪ್ಟೆಂಬರ್ 3): ಮುಜರಾಯಿ , ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸೆಪ್ಟಂಬರ್ 5 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು, ಬೆ. 9 ಗಂಟೆಗೆ ಗಂಗೊಳ್ಳಿ ಮೀನುಗಾರಿಕಾ ಜೆಟ್ಟಿ ಪರಿಶೀಲನೆ, 10 ಕ್ಕೆ ಗಂಗೊಳ್ಳಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘಕ್ಕೆ ಭೇಟಿ, 11 ಗಂಟೆಗೆ ಮರವಂತೆ ಮೀನುಗಾರಿಕಾ ಬಂದರು ಬೇಟಿ ಮತ್ತು ಮೀನುಗಾರರಿಂದ ಅಹವಾಲು ಸ್ವೀಕಾರ, 12 ಗಂಟೆಗೆ ಕೊಡೇರಿ ಮೀನುಗಾರಿಕಾ ಬಂದರು ಬೇಟಿ ಮತ್ತು ಮೀನುಗಾರರಿಂದ ಅಹವಾಲು ಸ್ವೀಕಾರ, ನಂತರ ಕೋಟ ದಲ್ಲಿ ವಾಸ್ತವ್ಯ ಮಾಡುವರು.