ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 2020-21 ನೇ ಶೈಕ್ಷಣಿಕ ವರ್ಷದ ಪದವಿ ಪ್ರವೇಶ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಕಲಾ ವಿಭಾಗದಲ್ಲಿ ಪ್ರವಾಸೋದ್ಯಮ ವಿಷಯ ಕಲಿಕೆಗೆ ಅವಕಾಶವಿದ್ದು ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರವಾಸೋದ್ಯಮ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರವಾಸೋದ್ಯಮ ನಿರ್ವಹಣೆ, ವಿಮಾನಯಾನ, ಹೊಟೇಲ್-ರೆಸ್ಟೋರೆಂಟ್ ನಿರ್ವಹಣೆ, ಆಹಾರೋದ್ಯಮ, ಮಾರುಕಟ್ಟೆ ವಿಭಾಗ, ಸಾರಿಗೆ ವ್ಯವಸ್ಥೆ ಮೊದಲಾದ ಕ್ಷೇತ್ರಗಳಲ್ಲಿ ಹೇರಳ ಉದ್ಯೋಗಾವಕಾಶಗಳಿವೆ. ಇತಿಹಾಸ/ಅರ್ಥಶಾಸ್ತ್ರ/ಪ್ರವಾಸೋದ್ಯಮ, ಕನ್ನಡ/ಅರ್ಥಶಾಸ್ತ್ರ/ಪ್ರವಾಸೋದ್ಯಮ, ಇಂಗ್ಲಿಷ್/ಅರ್ಥಶಾಸ್ತ್ರ/ಪ್ರವಾಸೋದ್ಯಮ ಮತ್ತು ಹಿಂದಿ/ ಅರ್ಥಶಾಸ್ತ್ರ/ಪ್ರವಾಸೋದ್ಯಮ ಸಂಯೋಜನೆಗಳು ಲಭ್ಯವಿವೆ.
ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲರ ಕಛೇರಿಯನ್ನು ಸಂಪರ್ಕಿಸಬಹುದು. ಸಂಪರ್ಕ ಸಂಖ್ಯೆ: 0824-2424760. ಇ-ಮೇಲ್: ucmangalore1@gmail.com.
For English News:- https://www.pingara.com/post/tourism-degree-course-university-college-mangaluru