ಮೂಡುಬಿದಿರೆ:- ಕಲಾ ಭೂಷಣ ಯಂ ರವಿರಾಜ್ ಮೂಡುಬಿದಿರೆ ಸುವರ್ಣ ಸಂಭ್ರಮ ವರ್ಷ ಪ್ರಯುಕ್ತ ತಾವು ಅಚ್ಚು ಹಾಕಿದ ಸ್ಟಿಕ್ಕರ್ ಧವಲತ್ರಯ  ಜೈನ ಕಾಶಿ ಟ್ರಸ್ಟ್ ವತಿಯಿಂದ "ಕೊರೊನ ಜಾಗೃತಿ ಪತ್ರ "ಪ್ರಚಾರ ಅಭಿಯಾನವನ್ನು  ಸ್ವಸ್ತಿಶ್ರೀ ಡಾ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಶ್ರೀ ಮಠದಲ್ಲಿ ಬೆಳಿಗ್ಗೆ 11.30 ಕ್ಕೆ 22.10.2020 ರಂದು ಬಿಡುಗಡೆ ಗೊಳಿಸಿದರು.

"ಸರ್ವರೂ ಅರೋಗ್ಯ ದ ಬಗ್ಗೆ ಅಸಡ್ಡೆ ಮಾಡದೆ ಎಚ್ಚೆತ್ತು ಕೊಳ್ಳಬೇಕು, ಕೋವಿಡ್ 19 ಕೊರೊನ ಕಾಯಿಲೆ ಬಗ್ಗೆ ಎಚ್ಚರದಿಂದಿದ್ದು ಅರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯುದುಕೊಳ್ಳುದು ಅತ್ಯವಶ್ಯವಾಗಿದ್ದು ಪ್ರತಿ ಬಾರಿ ಕೈ ಕಾಲು ಮೂಗು ಬಾಯಿ ಉತ್ತಮ ಮಾರ್ಜಕ ಬಳಸಿ  ಸ್ವಚ್ಚ ಗೊಳಿಸುದು, ಜನ ನಿಬಿಡ ಪ್ರದೇಶ ಗಳಿಂದ ದೂರ ಇದ್ದು ಅವಶ್ಯ ಸಂದರ್ಭದಲ್ಲಿ ಮಾತ್ರ ಅರೋಗ್ಯ ಸೂತ್ರ ದ ನಿಯಮಾವಳಿ ಬಗ್ಗೆ ಎಚ್ಚರಿಕೆ ವಹಿಸಿ  ಪ್ರಸಕ್ತ ಸಮಸ್ಯೆಯನ್ನು ವಿವೇಕದಿಂದ ಎದುರಿಸಬೇಕಾಗಿದೆ" ಎಂದು ಶ್ರೀಗಳು ನುಡಿದರು.

 ರವಿರಾಜ್ ಶ್ರೀ ಮಠದ ಜಿನೇಂದ್ರ ಬಲ್ಲಾಳ್ ಉಪಸ್ಥಿತರಿದ್ದರು.