ಹೇ ಗೌರಿತನಯ, ಮಾನವರ

ಬದುಕೆಲ್ಲಾ ಇದೀಗ ಗೌಜುಗಮಯ

ನೀಡು ಯುಕ್ತಿ ತುಂಬಿದ ಶಕ್ತಿಯ

ಪೊರೆಯಲು ಧರೆಯ ಗರಿಕೆ ಪ್ರಿಯ


ಲಂಬೋದರ ನೀಗಿಸು ಈ ಬರ

ದಯಪಾಲಿಸು ಕರುಣೆಯ ವರ

ನೀನಾಗ ಬೇಕಿದೆ ಸಕಲ

ಕಷ್ಟವ ನೀಗೋ ಸಂಕಷ್ಟಕರ


ಹರಸಿ ಹಾರೈಸು ಮಾತೆಯ

ಮಡಿಲು ಸದಾ ಹಸಿರಾಗಿರಲಂತ

ಇರಲಿ ಧಾವಂತ ಭುವಿಯ

ಮಾರಿಯ ಮುಗಿಸೋ ಏಕದಂತ


-By ಮಾಗಿದ ಮನಸ್ಸು