ಅನಿಸುವುದು ಹಲವೂಮ್ಮೆ
ಬದುಕು ಬಲು ಘೋರ
ಇನ್ನೂ ನಿಂತಿಲ್ಲಾ ಹೋರಾಟ
ಪಡೆಯಲು ತುತ್ತು ಆಹಾರ
ಕಲುಷಿತವಾದ ಮನಕೆ
ಕಾಣುವುದೆಲ್ಲಾ ವಿಕಾರ
ಅಷ್ಟು ಅಗತ್ಯವಾ ಉಳ್ಳವರಿಗೆ
ಮಾಡುವುದು ವಿಹಾರ
ಮರೆತೆಯಾ ಮನುಜ ನೀ
ರೈತನ ಋಣದ ಭಾರ
ನೆನಪಿಡು ರೈತನಿಲ್ಲದ
ನಿನ್ನ ಬದುಕು ನಶ್ವರ
ಮಾನವನ ಅಹಂಗೆ ಲಗಾಮು
ಹಾಕುತ್ತಿರುವನೇ ಈಗ ಈಶ್ವರ
ಹರ! ನಿಜಕ್ಕೂ ಮಾನವನ
ಜನ್ಮ ಬಲು ಕಠೋರ
-By ಮಾಗಿದ ಮನಸ್ಸು