ಮಂಗಳೂರು: ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳವಾರ ಅನಂತ ಚತುರ್ದಶಿ ( ನೋಪಿ ) ವ್ರತ ಪ್ರಯುಕ್ತ ಶ್ರೀ ದೇವರಿಗೆ ವಿಶೇಷ ಅನಂತ ದೇವರ ಅಲಂಕಾರ ಮಾಡಲಾಯಿತು. ಪ್ರಾತಃ ಕಾಲ ಶ್ರೀ ದೇವರ ಸನ್ನಿಧಾನದಲ್ಲಿ ಮಹಾ ಪ್ರಾರ್ಥನೆ ನಡೆದು ಬಳಿಕ ಶ್ರೀ ಅನಂತ ದೇವರ ಕಲಶ ಪ್ರತಿಷ್ಠಾಪನೆ ದೇವಳದ ಅರ್ಚಕರಿಂದ ನೆರವೇರಿತು , ಬಳಿಕ ಸರ್ವಾಭರಣ ಭೂಷಿತ ಶ್ರೀ ಅನಂತ ದೇವರ ಅಲಂಕಾರ ಬಳಿಕ ಮಧ್ಯಾಹ್ನ ಮಹಾ ಪೂಜೆ ನೆರವೇರಿತು , ಕೊರೋನಾ ಮಹಾಮಾರಿ ತಡೆಗಟ್ಟುವ ಹಿನ್ನೆಲೆಯಲ್ಲಿ ಭಜಕರಿಗೆ ದೇವಳದ ಒಳ ಆವರಣದಲ್ಲಿ ಪ್ರವೇಶ ನಿಷೇಧಿಸಲಾಗಿತ್ತು , ದೇವಳದ ಹೊರ ಆವರಣದಲ್ಲಿ ಭಜಕರಿಗೆ ಪ್ರಾರ್ಥನೆ ಸಲ್ಲಿಸುವ ಅವಕಾಶ ಕಲ್ಪಿಸಲಾಗಿತ್ತು .
